Asianet Suvarna News Asianet Suvarna News

ದರ್ಶನ್‌ ಕತ್ತಿಗೆ ಮಚ್ಚು ಹಿಡಿದ ಮಾಲಾಶ್ರೀ ಪುತ್ರಿ; ಬೆರಳು ತೋರಿಸಿದರೆ ಹಸ್ತ ನುಂಗ್ತಾರೆ ಎಂದ ನಟ!

ಮಾಧ್ಯಮಗಳ ಜೊತೆ ಮಾತನಾಡಿದ ಕಾಟೇರ ಚಿತ್ರರಂಗ. ಆರಾಧನಾ ಪ್ರತಿಭೆ ಮೆಚ್ಚಿಕೊಂಡ ದಾಸ ದರ್ಶನ್......

Darshan Aradhana Tarun Sudhir Kaatera pree meet vcs
Author
First Published Sep 13, 2023, 8:54 AM IST

ದರ್ಶನ್‌ ನಟನೆಯ, ತರುಣ್‌ ಸುಧೀರ್‌ ನಿರ್ದೇಶನದ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ‘ಕಾಟೇರ’ ಸಿನಿಮಾದ ಮೊದಲ ಸುದ್ದಿಗೋಷ್ಠಿ ಬೆಂಗಳೂರು ಹೊರವಲಯದ ಶೂಟಿಂಗ್‌ ಸೆಟ್‌ನಲ್ಲಿ ನಡೆಯಿತು.

ಅಕಾಲದಲ್ಲಿ ಸುರಿದ ಮಳೆಯ ನಡುವೆ ಮಾತನಾಡಿದ ನಿರ್ದೇಶಕ ತರುಣ್‌ ಸುಧೀರ್‌, ಮಾಲಾಶ್ರೀ ಪುತ್ರಿ ಆರಾಧನಾ ನಟನೆಯನ್ನು ಕೊಂಡಾಡಿದರು. ‘ಆರಾಧನಾಗೆ ಕೊಟ್ಟ ಮೊದಲ ಸೀನ್‌ ಸಖತ್ ಚಾಲೆಂಜಿಂಗ್ ಆಗಿತ್ತು. ದರ್ಶನ್‌ ಕತ್ತಿಗೆ ಮಚ್ಚು ಹಿಡಿದು ಉದ್ದದ ಡೈಲಾಗ್‌ ಹೇಳಬೇಕಿತ್ತು. ಸಿಂಗಲ್‌ ಟೇಕ್‌ನಲ್ಲೇ ಆ ಡೈಲಾಗ್‌ ಅನ್ನು ಪರ್ಫೆಕ್ಟಾಗಿ ಹೇಳಿದ್ದು ಆಕೆ ಎಂಥ ನಟಿ ಅನ್ನೋದನ್ನು ಸಾಬೀತು ಮಾಡಿದೆ. ಉಳಿದಂತೆ ಕಾಟೇರ ಅನ್ನುವ ಶೀರ್ಷಿಕೆಗೆ ನಾನಾ ಅರ್ಥಗಳಿವೆ. ಗ್ರಾಮ ದೇವತೆ ಕಾಟೇರಮ್ಮನ ಸೇವಕ ಅನ್ನುವ ಅರ್ಥವೂ ಇದೆ. ಈಗ ನೂರು ದಿನಗಳ ಚಿತ್ರೀಕರಣ ಮುಗಿದಿದೆ’ ಎಂದರು.

ಸ್ಟಾರ್ ಆಗಲಿ, ಸ್ಟಾರ್ ಇಲ್ಲದೇ ಇರಲಿ‌ ಸಿನಿಮಾ‌ ದೊಡ್ಡದು: 'ಕಾಟೇರ' ಚಿತ್ರದ ಬಗ್ಗೆ ದರ್ಶನ್ ಹೀಗೆ ಹೇಳಿದ್ಯಾಕೆ?

ನಟ ದರ್ಶನ್‌ ಸಹ ಆರಾಧನಾ ನಟನೆಯನ್ನು ಹೊಗಳಿ, ‘ಬೆರಳು ತೋರಿಸಿದರೆ ಹಸ್ತ ನುಂಗುವಷ್ಟು ಪ್ರತಿಭಾವಂತೆ ಈಕೆ. ರಚಿತಾ ರಾಮ್‌ ನನ್ನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಈಕೆಯೂ ರಚಿತಾ ರೀತಿ ಫೇಮಸ್‌ ಆಗ್ತಾರೆ’ ಎಂದರು. ಮಾತು ಮುಂದುವರಿಸಿ, ‘ಎಲ್ಲಕ್ಕಿಂತ ಸಿನಿಮಾ ದೊಡ್ಡದು ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕುಮಾರ್‌ ಗೋವಿಂದ್‌ ನಮ್ಮ ಸಿನಿಮಾದಲ್ಲಿ ಮುಖ್ಯಪಾತ್ರ ಮಾಡಿದ್ದಾರೆ. ನಾನು ಅವರು ಹೀರೋ ಆಗಿದ್ದ ಸಿನಿಮಾದಲ್ಲಿ ಲೈಟ್ ಬಾಯ್‌ ಆಗಿದ್ದೆ. ಸಿನಿಮಾದಲ್ಲಿ ನಮ್ಮ ಸ್ಕ್ರೀನ್‌ ಸ್ಪೇಸ್‌ ಎಷ್ಟಿದೆಯೋ ಅಷ್ಟರಲ್ಲೇ ನಮ್ಮ ಪ್ರತಿಭೆ ತೋರಿಸಬೇಕೇ ಹೊರತು, ಸಹಕಲಾವಿದರ ಡೈಲಾಗ್‌ ಚೆನ್ನಾಗಿದ್ದರೆ ಅದನ್ನು ತನಗೇ ಹಾಕ್ಕೊಳ್ಳೋ ಸ್ವಾರ್ಥ ಹೀರೋಗಿರಬಾರದು’ ಎಂದರು. ನಾಯಕಿ ಆರಾಧನಾ ತನಗೆ ಸೆಟ್‌ನಲ್ಲಿ ಚಾಕ್ಲೇಟ್‌ ಕೊಡುತ್ತಿದ್ದ ದರ್ಶನ್ ಸೇರಿ ಎಲ್ಲರಿಗೂ ಥ್ಯಾಂಕ್ಸ್‌ ಹೇಳಿದರು.

14 ವರ್ಷಗಳಿಂದ ಭೇಟಿ ಮಾಡಲು ಕಾಯುತ್ತಿದ್ದ ಸುದೀಪ್; ಸಹಾಯ ಮಾಡಲು ಮುಂದಾದ ದರ್ಶನ್!

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸಿನಿಮಾ ಬೆಳವಣಿಗೆಯ ಬಗ್ಗೆ ವಿವರಿಸಿದರು. ಹಿರಿಯ ಕಲಾವಿದರಾದ ವಿನೋದ್‌ ಆಳ್ವ, ಕುಮಾರ್ ಗೋವಿಂದ್‌, ಅವಿನಾಶ್‌, ಛಾಯಾಗ್ರಾಹಕ ಸುಧಾಕರ್‌, ಮಾಲಾಶ್ರೀ ಸುದ್ದಿಗೋಷ್ಠಿಯಲ್ಲಿದ್ದರು.

Follow Us:
Download App:
  • android
  • ios