Asianet Suvarna News Asianet Suvarna News

ಕಾವೇರಿ ಪ್ರತಿಭಟನೆ ವೇಳೆ ಪರಸ್ಪರ ಮಾತನಾಡದ ದರ್ಶನ್ - ಧ್ರುವ ಸರ್ಜಾ; ಇದೇನು ಗಾಸಿಪ್..?

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ್ ಬಂದ್‌ಗೆ ಕರೆ ನೀಡಲಾಗಿತ್ತು. ಇದಕ್ಕೆ ಹಲವು ಸಂಘಟನೆಗಳು ಕರೆ ನೀಡಿದ್ದವು. ಈ ಹೋರಾಟಕ್ಕೆ ಕನ್ನಡ ಚಿತ್ರಂಗ ಕೂಡ ಕೈ ಜೋಡಿಸಿತ್ತು. ಈ ವೇಳೆ ಕನ್ನಡದ ಬಹಳಷ್ಟು ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ದರು. 

Darshan and Dhruva Sarja did not talk at cauvery water protest srb
Author
First Published Oct 1, 2023, 7:33 PM IST | Last Updated Oct 1, 2023, 7:36 PM IST

ಚಿತ್ರಂಗದವರು ಸೆಪ್ಟೆಂಬರ್ 29 ರಂದು ನಡೆಸಿದ ಕಾವೇರಿ ಪ್ರತಿಭಟನೆಯಲ್ಲಿ, ದರ್ಶನ್ ಹಾಗೂ ಧ್ರುವ ಸರ್ಜಾ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡುವುದಿರಲಿ, ನೋಡಿಕೊಳ್ಳಲೂ ಇಲ್ಲ. ಈ ಘಟನೆ ಇದೀಗ ಅವರಿಬ್ಬರ ಅಭಿಮಾನಿಗಳ ಮಧ್ಯೆ ಮಾತುಕತೆಗೆ ಕಾರಣವಾಗಿದ್ದು, ಸದ್ಯ ಈ ಸಂಗತಿ ಟ್ರೋಲ್ ಆಗತೊಡಗಿದೆ. ಹಾಗಾದರೆ ನಿಜವಾಗಿ ಆಗಿದ್ದೇನು? 

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ್ ಬಂದ್‌ಗೆ ಕರೆ ನೀಡಲಾಗಿತ್ತು. ಇದಕ್ಕೆ ಹಲವು ಸಂಘಟನೆಗಳು ಕರೆ ನೀಡಿದ್ದವು. ಈ ಹೋರಾಟಕ್ಕೆ ಕನ್ನಡ ಚಿತ್ರಂಗ ಕೂಡ ಕೈ ಜೋಡಿಸಿತ್ತು. ಈ ವೇಳೆ ಕನ್ನಡದ ಬಹಳಷ್ಟು ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ದರು. ಬೆಳಿಗ್ಗೆ 9 ಗಂಟೆಗೆ ಹಲವು ನಟನಟಿಯರ ಆಗಮನವಾಗಿತ್ತು. ಆದರೆ, ನಟ ಶಿವಣ್ಣ ಹಾಗೂ ಧ್ರುವ ಸರ್ಜಾ, ವಸಿಷ್ಠ ಸಿಂಹ ಹಾಗೂ ದುನಿಯಾ ವಿಜಯ್ ಸೇರದಂತೆ ಹಲವರು ಸುಮಾರು 11 ಗಂಟೆಗೆ ಬಂದಿದ್ದರು. ಆದರೆ, ಅವರಿಗಿಂತ ಸ್ವಲ್ಪ ತಡವಾಗಿ ಬಂದ ನಟ ದರ್ಶನ್, ಸೀದಾ ಶಿವಣ್ಣರ ಕಾಲಿಗೆ ಬಿದ್ದು ನಮಸ್ಕರಿಸಿ ಬಳಿಕ ವಸಿಷ್ಠ ಸಿಂಹ ಪಕ್ಕದಲ್ಲಿ ಕುಳಿತರು.

ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ 'ನೆನಪಿರಲಿ' ಖ್ಯಾತಿಯ ನಟ ಪ್ರೇಮ್! 

ಆದರೆ ನಟ ಧ್ರುವ ಸರ್ಜಾ ದರ್ಶನ್ ನೋಡಿದ್ದರೂ ನೋಡದಂತೆ ಇದ್ದರು. ಕಾಟಾಚಾರಕ್ಕೆ ಎಂಬಂತೆ ಎದ್ದು ನಿಂತಂತೆ ತೋರುತ್ತಿತ್ತು ಎಂಬುದು ಟ್ರೋಲಿಗರ ಅಂಬೋಣ. ನಟ ಶಿವಣ್ಣ ಮಾತನಾಡುವಾಗ ವೇದಿಕೆಯಲ್ಲಿ ಕುಳಿತಿದ್ದ ಧ್ರುವ ಸರ್ಜಾ, ದರ್ಶನ್ ಮಾತನಾಡುತ್ತಿದ್ದಂತೆ ವೇದಿಕೆಯಿಂದ ಕೆಳಗೆ ಇಳಿದು ನಡೆದರು ಎನ್ನುತ್ತಿದ್ದಾರೆ ಟ್ರೋಲಿಗರು. ಹಾಗಾದರೆ, ಯಾಕೆ ಈ ಇಬ್ಬರು ಪರಸ್ಪರ ಮಾತನಾಡಿಕೊಂಡಿಲ್ಲ ಎನ್ನುತ್ತಿವೆ ಟ್ರೋಲ್‌ ಪೇಜ್‌ಗಳು!

ಪ್ರಜ್ವಲ್ ದೇವರಾಜ್-ಅದಿತಿ ಪ್ರಭುದೇವ 'ಮಾಫಿಯಾ' ಬಿಡುಗಡೆ ಕನ್ಫರ್ಮ್!

ದರ್ಶನ್ ಮತ್ತು ಧ್ರುವ ಸರ್ಜಾ ಒಂದೇ ವೇದಿಕೆಯಲ್ಲಿದ್ದರೂ ಒಂದು ಸ್ಮೈಲ್ ಕೂಡ ಮಾಡಿಕೊಂಡಿಲ್ಲ ಎಂದರೆ ಅವರಿಬ್ಬರ ಮಧ್ಯೆ ಏನೋ ಮುನಿಸು ಇದೆ ಎಂಬುದು ಹಲವರ ಅನಿಸಿಕೆ. ಈ ಬಗ್ಗೆ ಈಗಾಗಲೇ ಸಖತ್ ಗಾಸಿಪ್ ಹಬ್ಬತೊಡಗಿದೆ. ಈ ಸಮಯದಲ್ಲಿ, ಈ ಇಬ್ಬರೂ ನಟರೂ ಪರಸ್ಪರ ಮಾತನಾಡಿಕೊಂಡು ತಮ್ಮದೇ ರೀತಿಯಲ್ಲಿ ಸ್ಪಷ್ಟೀಕರಣ ಕೊಡುವುದು ಒಳ್ಳೆಯದು ಎಂಬುದು ಹಲವರ ಅಭಿಪ್ರಾಯ. ಏಕೆಂದರೆ, ವಿಷಯ ಗಂಭೀರ ಸ್ವರೂಪ ಪಡೆದುಕೊಂಡರೆ ಇಬ್ಬರಿಗೂ ಮುಜುಗರದ ಸನ್ನಿವೇಶ ಸೃಷ್ಟಿಯಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಗಾಸಿಪ್ಪು ನಿಜವೇ ಅಥವಾ ಸುಳ್ಳೇ?

Latest Videos
Follow Us:
Download App:
  • android
  • ios