ಕನ್ನಡದ ಸೂಪರ್ ಹಿಟ್ ಸಿನಿಮಾ ಲವ್‌ ಮಾಕ್ಟೇಲ್‌ ತೆಲುಗು ಭಾಷೆಯಲ್ಲೂ  ರಿಮೇಕ್ ಮಾಡಲಾಗುತ್ತಿದೆ. ಸತ್ಯದೇವ್ ಮತ್ತ ತಮನ್ನಾ ಜೋಡಿಯಾಗಿ ಅಭಿನಯಿಸುತ್ತಿದ್ದು ಚಿತ್ರೀಕರಣ ಆರಂಭವಾಗಿದೆ. ಖುದ್ದು ಕೃಷ್ಣ ಹಾಗೂ ಮಿಲನಾ ಶೂಟಿಂಗ್‌ ಸೆಟ್‌ಗೆ ಭೇಟಿ ನೀಡಿ ಚಿತ್ರದ ಬಗ್ಗೆ ಮಾತನಾಡಿ, ಮದುವೆಗೆ ಅಮಂತ್ರಣ ಪತ್ರಿಕೆ ನೀಡಿದ್ದಾರೆ.

ತಮನ್ನಾ ಪೋಸ್ಟ್:

'ತುಂಬಾ ಖುಷಿಯಾಗುತ್ತಿದೆ. ಲವ್‌ ಮಾಕ್ಟೇಲ್‌ ಒರಿಜಿನಲ್‌ ಕಪಲ್‌ಗಳನ್ನು ಭೇಟಿಯಾಗಿರುವುದಕ್ಕೆ. 'ಗುರುತುಂಡ ಸೀತಕಲಂ'ಸೆಟ್‌ನಲ್ಲಿ ಇದ್ದೀವಿ. ಫೆಬ್ರವರಿ 14ರಂದು ನಿಮ್ಮ ಮದುವೆಗೆ ಕಾಯುತ್ತಿರುವೆ. ಲಾಟ್ಸ್‌ ಆಫ್‌ ಲವ್‌ ಕೃಷ್ಣ ಹಾಗೂ ಮಿಲನಾ' ಎಂದು ತಮನ್ನಾ ಬರೆದುಕೊಂಡಿದ್ದಾರೆ. 

ಮದುವೆ ಪತ್ರಿಕೆ ಹಂಚುತ್ತಿರುವ ಕೃಷ್ಣ-ಮಿಲನಾ; ಯಾರೆಲ್ಲಾ ಸೆಲೆಬ್ರಿಟಿಗಳು ಬರ್ತಿದ್ದಾರೆ? 

ಕೆಜಿಎಫ್‌ ಚಿತ್ರದ ಹಾಟ್‌ ಸಾಂಗ್‌ವೊಂದರಲ್ಲಿ ರಾಕಿಂಗ್ ಸ್ಟಾರ್ ಜೊತೆ ತಮನ್ನಾ ಹೆಜ್ಜೆ ಹಾಕಿರುವುದನ್ನು ನೋಡಿಯೇ ಕನ್ನಡಿಗರ ಹೃದಯಕ್ಕೆ ತುಂಬಾನೇ ಹತ್ತಿರ ಆಗಿದ್ದಾರೆ. ಇದೀಗ ಲವ್‌ ಮಾಕ್ಟೇಲ್ ಕಪಲ್ ಮದುವೆಗೆ ಬರಲಿದ್ದಾರೆ ಎಂದು ತಿಳಿದು ಕಮೆಂಟ್ಸ್‌ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ. ಖಂಡಿತವಾಗಿಯೂ ಮದುವೆ ಮನೆ ಮುಂದೆ ಅಭಿಮಾನಿಗಳು ಮುತ್ತಿಕೊಳ್ಳುವುದರಲ್ಲಿ ಅನುಮಾವಿಲ್ಲ ಎನ್ನುತ್ತಾರೆ.

ಕಾಲ ಭೈರವ ಸಂಗೀತ, ಸತ್ಯ ಹೆಗ್ಡೆ ಛಾಯಾಗ್ರಹಣ ಇರುವ ತೆಲುಗು 'ಗುರುತುಂಡ ಸೀತಕಲಂ' ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.