Asianet Suvarna News Asianet Suvarna News

14 ದಿನಗಳಲ್ಲಿ ಸೀಸನ್‌ 8 ಫಿನಾಲೆ; ಅಕ್ಟೋಬರ್‌ನಲ್ಲಿ ಸೀಸನ್‌ 9 ಶುರು?

ಒಂದು ಸೀಸನ್‌ ಕೊನೆ ಹಂತಕ್ಕೆ ಬರುತ್ತಿದ್ದಂತೆ, ಮತ್ತೊಂದು ಸೀಸನ್ ಆರಂಭಕ್ಕೆ ತಯಾರಿ ಶುರು....

Colors Kannada 14 days to BBK8 finale October season 9 begins vcs
Author
Bangalore, First Published Jul 27, 2021, 12:19 PM IST
  • Facebook
  • Twitter
  • Whatsapp

ಸಾಮಾನ್ಯವಾಗಿ ಬಿಗ್ ಬಾಸ್‌ ಪ್ರತಿ ಸೀಸನ್‌ಗಳು ಅರ್ಧ ವರ್ಷಕ್ಕೇ ಆರಂಭವಾಗುತ್ತದೆ. ಆದರೆ ಈ ಬಾರಿ ಕೊರೋನಾ ಲಾಕ್‌ಡೌನ್‌ ಹಾಗೂ ಸರ್ಕಾರದ ಮಾರ್ಗಸೂಚನೆಗಳು ಹೆಚ್ಚಿದ್ದ ಕಾರಣ ತಡವಾಗಿ ಆರಂಭಿಸಲಾಗಿತ್ತು. ಸೀಸನ್‌ 8 ಆರಂಭವಾದ ನಂತರವೂ ಮತ್ತೊಂದು ಲಾಕ್‌ಡೌನ್ ಆದ ಕಾರಣ ಅರ್ಧಕ್ಕೇ ನಿಲ್ಲಿಸುವಂತ ಪರಿಸ್ಥಿತಿ ಎದುರಾಗಿತ್ತು. ಈಗ ಎರಡನೇ ಇನ್ನಿಂಗ್ಸ್ ಕೂಡ ಕ್ಲೈಮಾಕ್ಸ್ ಹಂತದಲ್ಲಿದೆ. 

ಹೌದು! ಬಿಗ್ ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್ ಕೇವಲ 14 ದಿನಗಳು ಮಾತ್ರ. ಮನೆಯಲ್ಲಿ ಕ್ಯಾಲೆಂಡರ್‌ ಇಡುವ ಮೂಲಕ ಕೌಂಟ್‌ಡೌನ್‌ ಶುರು ಮಾಡಲಾಗಿದೆ. ಈ 14 ದಿನಗಳಲ್ಲಿ ಡಬಲ್ ಎಲಿಮಿನೇಷನ್‌ ಆಗಬಹುದು, ಮಿಡ್ ವೀಕ್ ಎಲಿಮಿನೇಷನ್‌ ಆಗಬಹುದು. ಕ್ಯಾಪ್ಟನ್ ಆದವರು ಸೇಫ್ ಆಗುವುದಕ್ಕೆ ಒಂದೇ ವಾರ ಉಳಿಸಿರುವುದು. ಈ ವಾರ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿದ್ದರೂ, ನಾಮಿನೇಟ್ ಆಗಿದ್ದಾರೆ. ಸೇಫ್ ಆರ್ ನಾಟ್ ಸೇಫ್ ಎಂದು ಇಂದಿನ ಸಂಚಿಕೆಯಲ್ಲಿ ತಿಳಿದು ಬರುತ್ತದೆ. 

ನಮ್ಮ ಮೆಟ್ರೋ, ಬಿಗ್ ಬಾಸ್‌ನ ಸುಮಧುರ ಧ್ವನಿ ಇವರದ್ದೇ!

ಮನೆಯಲ್ಲಿರುವ ಸ್ಪರ್ಧಿಗಳ ಲೆಕ್ಕಾಚಾರದ ಪ್ರಕಾರ ಮಂಜು ಪಾವಗಡ, ಅರವಿಂದ್, ದಿವ್ಯಾ ಉರುಡುಗ ಫಿನಾಲೆ ಮುಟ್ಟಬಹುದು. ಆದರೆ ಹೊರಗಿನಿಂದ ಮನೆ ವೀಕ್ಷಿಸುತ್ತಿರುವವರು ಮಂಜು ಪಾವಗಡ, ಪ್ರಶಾಂತ್ ಸಂಬರಗಿ ಮತ್ತು ಶುಭಾ ಪೂಂಜಾ ಎನ್ನುತ್ತಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಅಕ್ಟೋಬರ್‌‌ನಲ್ಲಿ ಬಿಗ್ ಬಾಸ್ 9ನೇ ಸೀಸನ್ ಆರಂಭಿಸುವ ಪ್ಲಾನ್ ನಡೆಯುತ್ತಿದೆ.  ದಿನಾಂಕದ ಬಗ್ಗೆ ಮಾಹಿತಿ ಇಲ್ಲವಾದರೂ ಸ್ಪರ್ಧಿಗಳ ಆಯ್ಕೆ ಬಗ್ಗೆ ಮಾತುಕತೆ ನಡೆಯುತ್ತಿದೆ.

Follow Us:
Download App:
  • android
  • ios