ಸ್ಯಾಂಡಲ್‌ವುಡ್‌ ಯಂಗ್ ಚಾರ್ಮ್‌ ಚಿರಂಜೀವಿ ಸರ್ಜಾ ಕೊನೆಯ ಬಾರಿ ತುಂಬಾನೇ ಇಷ್ಟ ಪಟ್ಟು, ಕಥೆ ಒಪ್ಪಿಕೊಂಡು ಅಭಿನಯಿಸಿದ ಚಿತ್ರ 'ರಾಜ ಮಾರ್ತಾಂಡ'. ಚಿತ್ರದ ಟ್ರೇಲರ್‌ನನ್ನು ರಥಸಪ್ತಮಿ ದಿನ ಹಾಗೂ ಪೊಗರು ಚಿತ್ರ ರಿಲೀಸ್ ಆದ ಹವಾ ಸೃಷ್ಟಿಯಾದ ಬೆನ್ನಲ್ಲೇ,  ಬಿಡುಗಡೆ ಮಾಡಲಾಗಿದೆ.  

"

'ರಾಜಮಾರ್ತಾಂಡ' ಅಣ್ಣ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಡಬ್ 

ಜೂನಿಯರ್ ಚಿರು ಅಮೃತ ಹಸ್ತದಿಂದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿ ಚಿತ್ರರಂಗದಲ್ಲಿ ತಂದೆಯ ಚಿತ್ರದ ಟ್ರೈಲರ್ ಪುತ್ರ ಬಿಡುಗಡೆ ಮಾಡುತ್ತಿರುವುದು ಎಂದು ಮೇಘನಾ ರಾಜ್‌ ಹೇಳಿದ್ದಾರೆ. ಸಖತ್ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಚಿರುಗೆ, ಧ್ರುವ ಸರ್ಜಾ ಧ್ವನಿ ತುಂಬಾನೇ ಹೊಂದಿಕೆ ಆಗಿದೆ. ಅಲ್ಲದೇ ಅಲ್ಲಲ್ಲಿ ಹೇಳಿರುವ ಪಂಚ್‌ ಡೈಲಾಗ್‌ ಕ್ಯಾಚಿಯಾಗಿದೆ. ದೀಪ್ತಿ ಸತಿ ನಾಯಕಿಯಾಗಿದ್ದಾರೆ.

ಅರ್ಜುನ್ ಜನ್ಯಾ ಸಂಗೀತದಿಂದ ಚಿರುನನ್ನು ಮತ್ತೊಮ್ಮೆ ಲವರ್ ಬಾಯ್‌ ಆಗಿ ಕಾಣಬಹುದು. ಚಿರು ಚಿತ್ರದಲ್ಲಿ ವಿಭಿನ್ನ ಸ್ಟಂಟ್‌ಗಳನ್ನು ಪ್ರಯತ್ನಿಸಿದ್ದಾರೆ. ರಾಮ್‌ನಾರಾಯಣ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಕೂಡ ಸಾಥ್ ನೀಡಿದ್ದಾರೆ. 'ಈ ಸಿನಿಮಾ ನಮ್ಮ ಕುಟುಂಬಕ್ಕೆ ತುಂಬಾನೇ ಸ್ಪೆಷಲ್. ಚಿರು ಅಭಿನಯಿಸಿದ್ದಾರೆ, ಧ್ರುವ ಧ್ವನಿ ನೀಡಿದ್ದಾರೆ ಹಾಗೂ ಜೂನಿಯರ್ ರಿಲೀಸ್ ಮಾಡುತ್ತಿದ್ದಾರೆ. ಖುಷಿಯಾಗುತ್ತಿದೆ,' ಎಂದು ಮೇಘನಾ ರಾಜ್‌ ಮಾತನಾಡಿದ್ದಾರೆ.