ರೈತರ ಪರ ದನಿಯೆತ್ತುವ ರಣಂ;ಚಿರಂಜೀವಿ ಸರ್ಜಾ ನಟನೆಯ ಚಿತ್ರ!
ಆ ದಿನಗಳು ಚೇತನ್, ಚಿರಂಜೀವಿ ಸರ್ಜಾ ನಟನೆಯ, ಆರ್ ಶ್ರೀನಿವಾಸ್ ನಿರ್ಮಾಣದ, ವಿ. ಸಮುದ್ರ ನಿರ್ದೇಶನದ ರಣಂ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ.
ಚಿರಂಜೀವಿ ಸರ್ಜಾ ಕೊನೆಯ ಚಿತ್ರ ‘ರಣಂ’ ಇಂದು (ಮಾಚ್‌ರ್ 26) ಬಿಡುಗಡೆಯಾಗಲಿದೆ. ಇದರಲ್ಲಿ ಚಿರಂಜೀವಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ‘ಆ ದಿನಗಳು’ ಖ್ಯಾತಿಯ ಚೇತನ್ ನಾಯಕ. ರೈತರ ಪರ ಧ್ವನಿಯೆತ್ತುವ ಚಿತ್ರವಿದು. ರೈತನನ್ನು ಬೆಳೆ ಬೆಳೆಯುವಂತೆ ಪ್ರೋತ್ಸಾಹಿಸುವ ಪ್ರಭುತ್ವ, ಕೊನೆಗೆ ಆತನನ್ನೇ ಕಡೆಗಣಿಸುವುದರ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ. ಹೀಗಾಗಿ ಈ ಸಿನಿಮಾದ ಆಡಿಯೋ ಲಾಂಚ್ ಸಮಾರಂಭಕ್ಕೆ ಹಸಿರು ಶೇಡ್ ಇತ್ತು. ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಜೊತೆಗೆ ನಿರ್ಮಾಪಕ ಆರ್ ಶ್ರೀನಿವಾಸ್ ಸಹ ಹಸಿರು ಶಾಲಿನಲ್ಲಿ ಕಂಗೊಳಿಸುತ್ತಿದ್ದರು.
ಈ ಸಂದರ್ಭ ಮಾತನಾಡಿದ ನಾಯಕ ಚೇತನ್, ‘ನಾನು ಕಳೆದ ಆರು ತಿಂಗಳಿನಿಂದ ರೈತ ಪರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಪಾತ್ರ ನನಗೆ ಬಹಳ ಕನೆಕ್ಟ್ ಆಗುತ್ತಿದೆ. ಈ ಚಿತ್ರದಲ್ಲಿ ರೈತರ ಕಷ್ಟಗಳೇನು ಅನ್ನೋದನ್ನು ಹೇಳುವ ಜೊತೆಗೆ ರೈತರ ಸಮಸ್ಯೆಗಳಿಗೆ ಪರಿಹಾರ ಏನು ಅನ್ನೋದನ್ನೂ ಹೇಳಲಾಗಿದೆ. ಇದು ರೈತರಿಗೆ ಮಾತ್ರವಲ್ಲ, ಯುವ ಮನಸ್ಸುಗಳಿಗೂ ಕನೆಕ್ಟ್ ಆಗುವ ಸಿನಿಮಾ. ಈ ಸಿನಿಮಾ ನೋಡಿದವರಿಗೆ ರೈತರ ಬಗೆಗಿನ ಅಭಿಮಾನ ಹೆಚ್ಚುತ್ತದೆ’ ಎಂದರು.
'ರಾಜ ಮಾರ್ತಾಂಡ' ಬರ್ತಿದ್ದಾನೆ ದಾರಿ ಬಿಡಿ; ಜೂ. ಚಿರು ಅಮೃತ ಹಸ್ತದಿಂದ ಟ್ರೈಲರ್ ಬಿಡುಗಡೆ!
ಚಿರು ಸತ್ತಿಲ್ಲ, ಮಗನ ಮೂಲಕ ಬದುಕಿದ್ದಾನೆ : ಸುಂದರ್‌ರಾಜ್
ಎಲ್ಲರೂ ಇದು ಚಿರು ಕೊನೆಯ ಚಿತ್ರ ಅಂತ ಹೇಳಬಹುದು. ಆದರೆ ನನ್ನ ಪ್ರಕಾರ ಇದು ಅವನ ಕೊನೆ ಸಿನಿಮಾ ಅಲ್ಲ. ಇಲ್ಲಿಂದ ಅವನ ಮತ್ತೊಂದು ಹೊಸ ಜರ್ನಿ ಶುರುವಾಗುತ್ತೆ ಅನಿಸುತ್ತಿದೆ. ಚಿರು ಯಾವತ್ತೂ ತಾನು ಫೀನಿಕ್ಸ್ ಥರ ಎದ್ದು ಬರ್ತೀನಿ ಅಂತಿದ್ದ. ಈಗ ಅವನ ಮಗನ ಮೂಲಕ ಬಂದಿದ್ದಾನೆ. ಚಿರು ಮಗ ಸಿನಿಮಾರಂಗಕ್ಕೆ ಬಂದೇ ಬರುತ್ತಾನೆ ಅನ್ನುವ ವಿಶ್ವಾಸ ಇದೆ. - ಸುಂದರ್‌ರಾಜ್, ನಟ
ನಿರ್ಮಾಪಕ ಆರ್ ಶ್ರೀನಿವಾಸ್ ಮಾತನಾಡಿ, ‘ರಣಂ ನನ್ನ 21ನೇ ಸಿನಿಮಾ. ಈ ಹಿಂದಿನ 20 ಚಿತ್ರಗಳಲ್ಲಿ 10 ಚಿತ್ರಗಳು ನೂರು ದಿನ ಯಶಸ್ವಿ ಪ್ರದರ್ಶನ ಕಂಡಿವೆ. ಆ ಪಟ್ಟಿಯಲ್ಲಿ ರಣಂ ಸೇರುವುದು ಖಚಿತ. ಇದು ಏಳು ಕೋಟಿ ಕನ್ನಡಿಗರ ಕಣ್ಮಣಿಯಂಥಾ ಸಿನಿಮಾ. ನನ್ನನ್ನು ಇವತ್ತಿಗೂ ಕೆಲವರು ಗುರುತಿಸುವುದು ರಂಗಪ್ಪನ ಮಗ ಅಂತ. ನಮ್ಮ ಅಪ್ಪ ರೈತ. ನಾನು ರೈತರಿಗಾಗಿ ಸಿನಿಮಾ ಮಾಡಿದ್ದೀನಿ. ರೈತರು ನೋಡಲೇಬೇಕು, ರೈತರು ಬೆಳೆದ ಬೆಳೆಯಿಂದ ಬದುಕುವ ಎಲ್ಲರೂ ಚಿತ್ರ ನೋಡಲೇಬೇಕು’ ಎಂದರು.
ಫನ್ನಿ ರಿಸೆಪ್ಷನ್ ಫೋಟೋ ಶೇರ್ ಮಾಡಿಕೊಂಡ ಮೇಘನಾ ರಾಜ್; ಚಿರಂಜೀವಿ ಪೋಸ್ ನೋಡಿ!
ನಾಯಕಿ ನೀತು ಗೌಡ ಅವರಿಗೆ ತನ್ನ ಮೊದಲ ಚಿತ್ರದ ಬಿಡುಗಡೆಯಾಗುತ್ತಿರುವ ಬಗ್ಗೆ ಖುಷಿ ಇತ್ತು. ಆದರೆ ಅವರ ಮಾತಲ್ಲಿ ಥ್ಯಾಂಕ್ಸ್ ಅನ್ನೋದು ಬಿಟ್ಟರೆ ಮತ್ತೇನೂ ಇರಲಿಲ್ಲ. ಉಳಿದೆಲ್ಲ ನಟರೂ ಇದನ್ನೇ ಅನುಸರಿಸಿದರು.
ಈ ಚಿತ್ರದ ನಿರ್ದೇಶಕ ವಿ ಸಮುದ್ರ. ಇವರು ತೆಲುಗಿನಲ್ಲಿ ಸಾಕಷ್ಟುಚಿತ್ರ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಇದು ಮೊದಲನೇ ಚಿತ್ರ. ತೆಲುಗಿನಲ್ಲೇ ಮಾತನಾಡಿದ ಅವರು, ‘ಕನ್ನಡದಲ್ಲಿ ಮೊದಲ ಸಲ ರಣಂನಂಥಾ ಉತ್ತಮ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿ ಇದೆ’ ಎಂದರು.