ಅಭಿಮಾನಿಗಳಿಗೆ ಹನುಮ ಜಯಂತಿ ಶುಭಾಶಯ ಕೋರಿದ ಚಾಲೆಂಜಿಂಗ್ ಸ್ಟಾರ್/ ಲಾಕ್ ಡೌನ್ ಕಾರಣಕ್ಕೆ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ/ ಹನುಮ ಧೈರ್ಯ ಮತ್ತು ಶಕ್ತಿಯ ಪ್ರತೀಕ
ಬೆಂಗಳೂರು(ಏ. 08) ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ರಾಮನ ಪರಮಭಕ್ತ ಹನುಮ, ಧೈರ್ಯ ಮತ್ತು ಶಕ್ತಿಯ ಪ್ರತೀಕವಾದ ಈ ಸ್ವಾಮಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ.
ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಕಲರಿಗೆ, ಅಭಿಮಾನಿಳಿಗೆ ಹನುಮ ಜಯಂತಿ ಶುಭಾಶಯ ತಿಳಿಸಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಹನುಮ ಜಯಂತಿ ದೊಡ್ಡದಾಗಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ.
ಸರ್ಕಾರದ ಆದೇಶಗಳ ;ಪಾಲನೆ ಮಾಡಿ, ಮನೆಯಲ್ಲೆ ಇರಿ ಎಂದು ಚಾಲೆಂಜಿಂಗ್ ಸ್ಟಾರ್ ಕೇಳೀಕೊಂಡಿದ್ದಾರೆ. ಲಾಕ್ ಡೌನ್ ಕಾರಣಕ್ಕೆ ಸಿನಿಮಾ ಜಗತ್ತಿನ ಕೆಲಸಗಳು ಬಂದ್ ಆಗಿವೆ. ಇಡೀ ಭಾರತೀಯ ಚಿತ್ರರಂಗದ ಮೇಲೆ ಕೊರೋನಾ ಪರಿಣಾಮ ಬೀರಿದ್ದು ಇಂಡಸ್ಟ್ರಿಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ.
