ಬೆಂಗಳೂರು (ಅ. 30): ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ.  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಘಾತದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. 

 

ಅಭಿಮಾನಿಗಳಲ್ಲಿ ಕಳಕಳಿಯ ಮನವಿ. ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗೃಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಎಂದೂ ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ ಎಂದು ಮನವಿ ಮಾಡಿಕೊಂಡಿದ್ದಾರೆ. 

 

ಕಳೆದ ವರ್ಷ ವಿನೀಶ್ ಹುಟ್ಟುಹಬ್ಬದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಅಭಿಮಾನಿಯೊಬ್ಬ ಸಾವನಪ್ಪಿದ್ದನ್ನು ಇನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ದೂರದ ಸ್ಥಳಗಳಿಗೆ ಹೋಗುವಾಗ ದ್ವಿಚಕ್ರ ವಾಹನಗಳನ್ನು ಆದಷ್ಟು ಉಪಯೋಗಿಸಬೇಡಿ. ಈ ವರ್ಷವೂ ಹುಟ್ಟುಹಬ್ಬಕ್ಕೆ ಬರುವವರು ದಯಮಾಡಿ ಎಚ್ಚರಿಕೆ ವಹಿಸಿ ಎಂದು ಕೇಳಿಕೊಂಡಿದ್ದಾರೆ. 

ಮಧುಗಿರಿ ನಿವಾಸಿ ರಾಕೇಶ್ ದರ್ಶನ್ ಕಟ್ಟಾ ಅಭಿಮಾನಿಯಾಗಿದ್ದ ದರ್ಶನ್ ಮಗ ವಿನೀಶ್ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಸ್ನೇಹಿತನ ಜೊತೆ ಬಂದಿದ್ದ. ಸ್ನೇಹಿತ ಬೈಕ್ ಚಲಾಯಿಸುತ್ತಿದ್ದರೆ ರಾಜೇಶ್ ಹಿಂಬದಿ ಸೀಟಿನಲ್ಲಿ ಕುಳಿತಿದ್ದ.  ತುಮಕೂರು- ಕೊರಟಗರೆ ಬಳಿ ಅಫಘಾತವಾಗಿ ರಾಕೇಶ್ ಮೃತಪಟ್ಟಿದ್ದ. 

ಇಂತಹ ಘಟನೆಗಳು ಮರುಕಳುಹಿಸದಿರಲಿ ಎಂಬ ಕಳಕಳಿಯಿಂದ ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.