ಬೆಂಗಳೂರು[ಮಾ. 04] ದೇಶ-ರಾಜ್ಯವೆನ್ನದೇ ಕರೋನಾ ವೈರಸ್ ಹಾವಳಿ ಕಾಡುತ್ತಿರುವಾಗಲೇ ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

"

ತಮ್ಮ ರಾಬರ್ಟ್ ಸಿನಿಮಾಕ್ಕಾಗಿ ವಿದೇಶದಲ್ಲಿಯೂ ಶೂಟಿಂಗ್ ಮಾಡಿ ಬಂದಿದ್ದ ದಾಸನಿಗೆ ಏನಾಯ್ತು ಎಂದು ಅಭಿಮಾನಿಗಳು ಆತಂಕಗೊಂಡಿದ್ದರು. ಆದರೆ ಯಾರೂ ಭಯಪಡಬೇಕಾದ ಅಗತ್ಯ ಇಲ್ಲ. ಅನಾರೋಗ್ಯಕ್ಕೆ ತುತ್ತಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ನಿರ್ಮಾಪಕ ಸಂದೇಶ್ ವಿವರಣೆ ನೀಡಿದ್ದಾರೆ.

ದರ್ಶ‌ನ್ ಅವರಿಗೆ ಗ್ಯಾಸ್ಟ್ರಿಕ್ ಆಗಿತ್ತು.  ದರ್ಶನ್ ಅವರ ತೋಟಕ್ಕೆ ಹೊಸ ಕುದುರೆಗಳು ಬಂದಿವೆ. ಮೂರು ದಿನದಿಂದ ಶೂಟಿಂಗ್ ಇರಲಿಲ್ಲ. ಬಿಡುವಿದ್ದ ಕಾರಣ ಕುದುರೆ ನೋಡಲು ತೋಟಕ್ಕೆ ಬಂದಿದ್ದರು. ಈ ವೇಳೆ ಸಣ್ಣ ಪ್ರಮಾಣದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಬಂದು ಚೆಕ್ ಮಾಡಿಸಿದ್ದಾರೆ. ಕಿಡ್ನಿ, ಹಾರ್ಟ್, ಗಾಯವಾಗಿದ್ದ ಕೈ ಸೇರಿದಂತೆ ಇಡೀ ಬಾಡಿ ಚೆಕ್‌ಅಪ್ ಮಾಡಿಸಿದ್ರು. ಎಲ್ಲ ರಿಪೋರ್ಟ್‌ಗಳೂ ನರ್ಮಲ್ ಇವೆ ಎಂದು ತಿಳಿಸಿದ್ದಾರೆ. ಬೇರಾವುದೇ ತೊಂದರೆ ಇಲ್ಲ. ಶೀರ್ಘದಲ್ಲೇ ಡಿಸ್ಚಾರ್ಜ್ ಆಗುತ್ತಾರೆ ಎಂದು ತಿಳಿಸಿದ್ದಾರೆ.

ಕರೋನಾ; ಏನು ಮಾಡಬೇಕು? ಏನು ಮಾಡಬಾರದು?

ದರ್ಶನ್ ಅವರು ಹೊಟ್ಟೆ ನೋವಿನ ಕಾರಣ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಡಾ. ಅನುಪ್ ಆಳ್ವಾ ಅವರ ಆರೋಗ್ಯದ ಸ್ಥಿತಿ ಗತಿ ನೋಡಿಕೊಳ್ಳುತ್ತಿದ್ದಾರೆ ಎಂದು ಮೈಸೂರಿನ ಕೋಲಂಬಿಯಾ ಏಷಿಯಾ ಆಸ್ಪತ್ರೆ ಹೇಳಿದೆ.

ಎಲ್ಲೆಲ್ಲೂ ಕರೋನಾ ವೈರಸ್ ಹಾವಳಿ ಜೋರಾಗಿ ಕೇಳಿಬರುತ್ತಿರುವುದರಿಂದ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಸದ್ಯಕ್ಕೆ ಎಲ್ಲರ ಗೊಂದಲ ನಿವಾರಣೆಯಾಗಿದ್ದು ಚಾಲೆಂಜಿಂಗ್ ಸ್ಟಾರ್ ಸದ್ಯದಲ್ಲಿಯೇ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"