Asianet Suvarna News Asianet Suvarna News

ಯಾವಾಗ್ಲೂ ಇಂಗ್ಲಿಷ್, ಏನಮ್ಮ ನಿವೇದಿತಾ ಗೌಡ ಕನ್ನಡ ಮರೆತ್ಯಾ?: ನೆಟ್ಟಿಗರ ಹೊಸ ವರಸೆ!

ಟಿಕ್‌ಟಾಕ್‌ನಿಂದಲೇ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ನಿವೇದಿತಾ ಗೌಡ, ವಿಡಿಯೋಗಳ ಬಗ್ಗೆ ನೆಟ್ಟಿಗರು ಒಂದು ಪ್ರಶ್ನೆ ಪದೆೇ ಪದೆ ಕೇಳುತ್ತಿದ್ದಾರೆ. ಉತ್ತರ ಸಿಗುತ್ತಿಲ್ಲ ಯಾಕೆ? 
 

Bigg boss Niveditha gowda trolled for English video songs vcs
Author
Bangalore, First Published May 14, 2021, 4:43 PM IST

ಸೋಷಿಯಲ್ ಮೀಡಿಯಾ ಬಾರ್ಬಿ ಡಾಲ್, ಬಿಗ್ ಬಾಸ್ ಸ್ಪರ್ಧಿ, ಚಂದನ್ ಶೆಟ್ಟಿ ಮಡದಿ ನಿವೇದಿತಾ ಗೌಡ. ಒಂದಕ್ಕಿಂತ ಒಂದು ವಿಭಿನ್ನ ವಿಡಿಯೋ ಮಾಡುತ್ತಾ ಅಭಿಮಾನಿಗಳನ್ನು ಮನೋರಂಜಿಸುತ್ತಿದ್ದಾರೆ. ಭಾಷೆಯ ಹಂಗಿಲ್ಲದೇ ಎಲ್ಲಾ ರೀತಿಯ ವಿಡಿಯೋ ಮಾಡುವ ನಿವೇದಿತಾಗೆ ನೆಟ್ಟಿಗರು ಒಂದು ಪ್ರಶ್ನೆ ಕೇಳಿದ್ದಾರೆ. ಏನು ಗೊತ್ತಾ?

ಹೌದು! ಇತ್ತೀಚಿಗೆ ನಿವೇದಿತಾ ಇಂಗ್ಲಿಷ್ ಹಾಡುಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಸಮಯದಲ್ಲಿ ಕನ್ನಡ ಸಿನಿಮಾರಂಗದ ಪರವಾಗಿ ನಿಲ್ಲಬೇಕು ಎಂದು ಪತಿ ಚಂದನ್ ಹೇಳುತ್ತಿದ್ದರೆ, ಇತ್ತ ಪತ್ನಿ ಇಂಗ್ಲಿಷ್ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕ್ಯಾಬಿನ್ ಕ್ರೂ ಆಗಿರುವ ಕಾರಣ ಎಲ್ಲಾ ಭಾಷೆಗಳ ಮೇಲೂ ಗೌರವ ಇರಲೇ ಬೇಕು. ಆದರೆ ಅದನ್ನೇ ಫಾಲೋ ಮಾಡಿದರೆ ಬೇರೆಯವರೂ ಆಕೆಯನ್ನು ನೋಡಿ ಕಲಿಯುತ್ತಾರೆ, ಎಂದು ನೆಟ್ಟಿಗರು ಕಾಮೆಂಟ್‌ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಮಕ್ಕಳು ತರ ಆಡ್ಬೇಡ, ಮಕ್ಕಳು ಮಾಡೋ ವಯಸ್ಸು; ನಿವೇದಿತಾ ಗೌಡಗೆ ನೆಟ್ಟಿಗರ ಕಾಟ! 

ಕೆಲವು ದಿನಗಳ ಹಿಂದೆ ಮದರ್ಸ್‌ ಡೇಗೆ ತಮ್ಮ ತಾಯಿ ಜೊತೆಗಿರುವ ಎಲ್ಲಾ ವಿಡಿಯೋಗಳನ್ನು ಒಂದು ಮಾಡಿ ಇಂಗ್ಲಿಷ್ ಹಾಡು ಬಳಸಿದ್ದರು. ನಿವೇದಿತಾ ಫಾಲೋವರ್ ಆಶಾ ಎಂಬುವವರು ' ನಿಮ್ಮ ತಾಯಿಯ ಪ್ರೀತಿಯನ್ನು ವರ್ಣಿಸಲು ಕನ್ನಡ ಹಾಡುಗಳು ಇನ್ನೂ ಚೆನ್ನಾಗಿವೆ.  ಯಾಕೆ ಯಾವಾಗಲೂ ಇಂಗ್ಲಿಷ್ ಬಳಸುತ್ತೀರಾ?' ಎಂದು ಪ್ರಶ್ನೆ ಮಾಡಿದ್ದಾರೆ. ಲಿಟಲ್‌ ಸಿಜಲಿಂಗ್ ಎಂಬ ಖಾತೆ ಮೂಲಕ 'ಅಮ್ಮ ತಾಯಿ ಕನ್ನಡದಲ್ಲಿ ಎಷ್ಟು ಒಳ್ಳೆ ಹಾಡುಗಳಿವೆ. ನಿಮ್ಮ ಲೈಫ್ ಆ್ಯಂಡ್ ಬ್ಯುಸಿನೆಸ್ ಸೆಟಲ್ ಆಗೋಕೆ ಕನ್ನಡ ಬೇಕು. ಆದರೆ ಶೋಕಿ ಮಾಡೋದು ಇಂಗ್ಲಿಷ್‌ನಲ್ಲಿ,' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bigg boss Niveditha gowda trolled for English video songs vcs

ನಿವೇದಿತಾ ಈ ಕಾಮೆಂಟ್‌ಗಳನ್ನು ನೋಡುತ್ತಿದ್ದಾರೋ ಇಲ್ವೋ ಗೊತ್ತಿಲ್ಲ. ಇಷ್ಟೊಂದು ಆ್ಯಕ್ಟಿವ್ ಇದ್ದಾರೆ, ಅಂದ್ಮೇಲೆ ಮತ್ತೊಂದು ವಿಡಿಯೋ ಕನ್ನಡದಲ್ಲಿ ಮಾಡಿ, ಜನರಿಗೆ ಉತ್ತರಿಸಿ ಎಂದು ಕೆಲವರು ಸಲಹೆ ನೀಡಿದ್ದಾರೆ.

ಅಷ್ಟಕ್ಕೂ ನಿವೇದಿತಾ ಗೌಡ ಎಂಬ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ಅನೇಕರಿಗೆ ಈಕೆ ಕನ್ನಡದವಳು ಎನಿಸುತ್ತಲೇ ಇರಲಿಲ್ಲ. ಮೊದಲಿಂದಲೂ ಕನ್ನಡವನ್ನೂ ಇಂಗ್ಲಿಷ್ ರೀತಿಯಲ್ಲಿಯೇ ಮಾತನಾಡಿ, ಕನ್ನಡ ಪ್ರೇಮಿಗಳ ವಿರೋಧ ಕಟ್ಟಿಕೊಂಡವರು. ಆದರೆ, ಬರ ಬರುತ್ತಾ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ನಾಡಿನ ಮೇಲೆ ಇರುವ ಜ್ಞಾನ ಹಾಗೂ ತಮ್ಮ ವ್ಯಕ್ತಿತ್ವದಿಂದ ಜನರ ಮನ ಗೆದ್ದು, ಬಿಗ್ ಬಾಸ್ ಎಂಬ ಖ್ಯಾತ ರಿಯಾಲಿಟಿ ಶೋನಲ್ಲಿ ಅಂತಿಮ ಐವರು ಫೈನಲ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. 

ಮೊದಲಿಂದಲೂ ಇವರ ಇಂಗ್ಲಿಷ್ ವ್ಯಾಮೋಹದ ಬಗ್ಗೆ ಪ್ರಶ್ನಿಸುತ್ತಲೇ ಇದ್ದ ನೆಟ್ಟಿಗರು, ಈಗಲೂ ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕನ್ನಡ, ಕನ್ನಡ ಇಷ್ಟ ಇಲ್ವಾ, ಬಿಟ್ಟು ಹೋಯ್ತಾ ಇರಿ ಎನ್ನುವ ಮೂಲಕ, ತಮ್ಮ ಪಾಪ್ ಗಾಯನದಿಂದಲೇ ಕನ್ನಡಿಗರನ್ನು ಜಾಗೃತಗೊಳಿಸಿದ ಪ್ರತಿಭಾನ್ವಿತ ಚಂದನ್ ಶೆಟ್ಟಿ ಮಡದಿಯಾದ ಮೇಲೂ ತಮ್ಮ ಅದೇ ಇಂಗ್ಲಿಷ್ ವ್ಯಾಮೋಹ ತೋರುತ್ತಿರುವ ನಿವೇದಿತಾ ಗೌಡ ವಿರುದ್ಧ ನೆಟ್ಟಿಗರು ಸಿಡಿದೇಳುತ್ತಲೇ ಇರುತ್ತಾರೆ.

 

Follow Us:
Download App:
  • android
  • ios