Asianet Suvarna News Asianet Suvarna News

ಭಾನುಶ್ರೀ ಕೈಹಿಡಿದ ಒಳ್ಳೆ ಹುಡುಗ ಪ್ರಥಮ್, ಸರಳ ಮದುವೆಯಲ್ಲಿ ಚಿತ್ರರಂಗದ ಅನೇಕರು ಭಾಗಿ

ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹಸೆಮಣೆ ಏರಿದ್ದಾರೆ. ಬಹಳ ಸರಳವಾಗಿ  ಒಳ್ಳೆ ಹುಡುಗ ಪ್ರಥಮ್​ ಎಂದೇ ಖ್ಯಾತಿ ಪಡೆದಿರುವ ಅವರು ಮಂಡ್ಯದ ಭಾನುಶ್ರೀ ಎನ್ನುವವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. 

bigg boss Kannada  fame pratham ties knot with bhanushree gow
Author
First Published Nov 24, 2023, 11:39 AM IST

ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹಸೆಮಣೆ ಏರಿದ್ದಾರೆ. ಬಹಳ ಸರಳವಾಗಿ  ಒಳ್ಳೆ ಹುಡುಗ ಪ್ರಥಮ್​ ಎಂದೇ ಖ್ಯಾತಿ ಪಡೆದಿರುವ ಅವರು ಮಂಡ್ಯದ ಭಾನುಶ್ರೀ ಎನ್ನುವವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಗುರುವಾರ ಆರತಕ್ಷತೆ ನಡೆದಿದ್ದು, ಶುಕ್ರವಾರ ಮದುವೆ ನಡೆದಿದೆ.

ಈ ಹಿಂದೆ ಹಲವು ಸಂದರ್ಶನಗಳಲ್ಲಿ ಪ್ರಥಮ್ ನಾನು ಸರಳವಾಗಿ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದರು. ಅದರಂತೆ ಸರಳವಾಗಿ ಮದುವೆಯಾಗಿದ್ದು, ಮದುವೆಗೂ ಮುನ್ನ ನಡೆದ ಆರತಕ್ಷತೆಯಲ್ಲಿ ಕುಟುಂಬಸ್ಥರು, ಆಪ್ತರು ಮತ್ತು ಚಿತ್ರರಂಗದ ಹಲವು ಮಂದಿ ಗಣ್ಯರು ಭಾಗಿಯಾಗಿ  ನವ ಜೋಡಿಗೆ ಶುಭ ಹಾರೈಸಿದರು.

ರಿಯಲ್ ಲೈಫ್‌ನಲ್ಲಿ ಹಸೆಮಣೆ ಏರುತ್ತಿದ್ದಾರೆ ಪ್ರಥಮ್!'ಫಸ್ಟ್ ನೈಟ್ ವಿತ್ ದೆವ್ವ'ಎಂದ ಒಳ್ಳೆ ಹುಡುಗ !

ನಟರಾದ ಶಶಿಕುಮಾರ್, ಪ್ರೇಮ್  ಬಿಗ್‌ಬಾಸ್‌ ಸೀಸನ್‌ 10ರಲ್ಲಿ ಸ್ಪರ್ಧಿಗಳಾಗಿದ್ದ ಇಶಾನಿ, ಸ್ನೇಕ್ ಶ್ಯಾಮ್ ಅರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ  ನೂತನ ಜೋಡಿಗೆ ಹಾರೈಸಿದ್ದಾರೆ. ಈ ವೇಳೆ ಪ್ರಥಮ್‌ ಇಶಾನಿ ಅವರ ಕಾಲೆಳೆದಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ  ವೈರಲ್‌ ಆಗುತ್ತಿದೆ. ಬಿಗ್‌ಬಾಸ್‌ ನಲ್ಲಿ ಇಶಾನಿ ಎಲ್ಲೋ ಜೋಗಪ್ಪ ಹಾಡನ್ನು ಎಲ್ಲೋ ಗೋಜಪ್ಪ ಎಂದು ತಪ್ಪಾಗಿ ಹಾಡಿದ್ದು ಸಖತ್‌ ವೈರಲ್‌, ಮೀಮ್ಸ್ ಆಗಿತ್ತು. ಇದನ್ನೇ ಇಟ್ಟುಕೊಂಡು ಪ್ರಥಮ್ ತಮಾಷೆ ಮಾಡಿದ್ದಾರೆ.

ಕಳೆದವಾರ ಪ್ರಥಮ್ ಸೋಷಿಯಲ್​ ಮೀಡಿಯಾದಲ್ಲಿ ಹಾಕಿದ ಮದುವೆಯ ಕರೆಯೋಲೆ ಸಕತ್​ ಸದ್ದು  ಮಾಡಿತ್ತು, ಮುಂದಿನ ವಾರ ಮದುವೆ; ಅಲ್ಲೇ ಬಂದು ಆಶೀರ್ವಾದ ಮಾಡ್ಬೇಕು ಅಂತೇನೂ ಇಲ್ಲ. ಕರೆಯೋಕೆ ನನಗೂ ಅತೀಯಾದ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೇ ಹರಸಾಹಸ; ಹಾಗಂತ ಸುಮ್ಮನೆ forward msg ಹಾಕಿ ನಿಮ್ಮನ್ನು ಮದುವೆಗೆ ಕಾಟಾಚಾರಕ್ಕೆ ಕರೆಯೋದೂ ಇಲ್ಲ‌. ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಗ್ರ್ಯಾಂಡ್ ಆಗಿ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ.. ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲಿಯೇ ಹಾರೈಸಿ. ಒಳ್ಳೇ ಮನಸ್ಸಿನಿಂದ ಆಶೀರ್ವದಿಸಿ‌" ಎಂದಿದ್ದರು.

ಡ್ರೋನ್ ಸಿನಿಮಾ ರಿಲೀಸ್ ಆದ್ರೆ ಬಿಗ್ ಬಾಸ್ ಪ್ರತಾಪ್ ಸೋಲೋಕೆ ನಾನೇ ಕಾರಣ ಅಂತಾರೆ: ಒಳ್ಳೆ ಹುಡುಗ ಪ್ರಥಮ್

ನಟ ಪ್ರಥಮ್ ಮೊದಲಿನಿಂದಲೂ ಹಳ್ಳಿ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳಿದ್ದರು.  ಕಳೆದ ಜೂನ್‌ನಲ್ಲಿ ಭಾನುಶ್ರೀ  ಜೊತೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು  ನೇರಾನೇರ ಮಾತನಾಡುವುದರಲ್ಲಿ ಪ್ರಥಮ್​ ಎತ್ತಿದ ಕೈ. ಇತ್ತೀಚೆಗೆ ಬಿಗ್‌ಬಾಸ್‌ 10 ನೇ ಸೀಸನ್‌ಗೆ ಅತಿಥಿಯಾಗಿ ಹೋಗಿ ಬಂದಿದ್ದರು.

Follow Us:
Download App:
  • android
  • ios