ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ, ರಾಜೀವ್ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸುದೀಪ್ ನಟನೆಯ ಚಿತ್ರದ ಗೀತೆಯ ಸಾಲನ್ನು ಶೀರ್ಷಿಕೆಯಾಗಿ ಇಡಲಾಗಿದೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಜೀವ್ 'ಉಸಿರೇ ಉಸಿರೇ' ಚಿತ್ರದ ಮೂಲಕ ನಾಯಕನಾಗಿ ಲಾಂಚ್ ಆಗುತ್ತಿದ್ದಾರೆ. ತುಂಬಾ ದಿನಗಳಿಂದ ರಾಜೀವ್ ಅವರನ್ನು ನಾಯಕನಾಗಿ ನೋಡಬೇಕು ಎಂಬ ಆಸೆ ಇತ್ತು ಎಂದು ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ವ್ಯಕ್ತ ಪಡಿಸಿದ್ದಾರೆ.
ಹೆಚ್ಚಿನ ಜನಪ್ರಿಯತೆ ಇಲ್ಲದ ಕಾರಣ ರಾಜೀವ್ ಬಿಗ್ ಬಾಸ್ ಸೀಸನ್ 8ರಿಂದ ಎಲಿಮಿನೇಟ್ ಆದರು. ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಟಫ್ ಫೈಟ್ ಕೊಡುತ್ತಿದ್ದವರು ಹೊರ ಬಂದ ಮೇಲೆ ಏನು ಮಾಡುತ್ತಿದ್ದಾರೆ, ಎಂದು ಹಲವರಲ್ಲಿ ಪ್ರಶ್ನೆ ಮೂಡಿತ್ತು. ಇದೀಗ ರಾಜೀವ್ ತಮ್ಮ ಹೊಸ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.
"
ಬೆಂಗಳೂರಿನ ತಾಜ್ ವಿವಾಂಟ್ ಹೋಟೆಲ್‌ನಲ್ಲಿ ಕಿಚ್ಚ ಸುದೀಪ್ ರಾಜೀವ್ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. 'ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ರಾಜೀವ್. ಅವಲ್ಲಿ ಏನೋ ಒಂಥರ ಮುಗ್ಧತೆ ಇದೆ. ಯಾವುದನ್ನೇ ಆಗಲಿ ಬೇಗ ನಂಬುತ್ತಾನೆ. ಪುಣ್ಯ ಅವನ ಪಕ್ಕದಲ್ಲಿರುವ ಹೆಂಡತಿ ಜಾಣೆ. ಆ ಹುಡುಗಿ ಇವನಿಗೆ ಎಲ್ಲವನ್ನೂ ಹೇಳಿ ಕೊಡುತ್ತಿದ್ದಾರೆ. ಸಿಸಿಎಲ್ ದಿನಗಳಿಂದ ನನಗೆ ರಾಜೀವ್ ಪರಿಚಯ. ಅವನು ಕ್ರಿಕೆಟ್ ಸರಿಯಾಗಿ ಅಭ್ಯಾಸ ಮಾಡಿದ್ರೆ, ಇವತ್ತು ರಾಜ್ಯ ಮಟ್ಟದಲ್ಲಿ ಆಡುತ್ತಿದ್ದ. ರಾಜೀವ್ ಕಲಾವಿದ ಆಗಬೇಕು ಎನ್ನೋದು ನನ್ನ ಕನಸು. ಈ ಸಿನಿಮಾದಿಂದ ಆತನಿಗೆ ಒಳ್ಳೆಯದಾಗಲಿ. ಕೊರೋನಾ ಕಾಲದಲ್ಲಿ ದೊಡ್ಡ ದೊಡ್ಡ ಚಿತ್ರ ನಿರ್ಮಿಸುತ್ತಿರುವುದು ತುಂಬಾ ಸಂತೋಷ. ಒಳ್ಳೆಯವರು ಸೇರಿ ಮಾಡುವ ಕೆಲಸ ಒಳ್ಳೇಯದೇ ಆಗುತ್ತದೆ,' ಎಂದು ಕಿಚ್ಚ ಸುದೀಪ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
'ನಾನು ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ, ಇಂತಹ ವೇದಿಕೆ ಸಿಗಲು 10 ವರ್ಷ ಬೇಕಾಯಿತು. ಇದಕ್ಕೆ ಅವಕಾಶ ಮಾಡಿಕೊಟ್ಟ ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದ. ನಾನು ಸುದೀಪ್ ಸರ್ ಜೊತೆ ಕಾರಿನಲ್ಲಿ ಬರುತ್ತಿದ್ದಾಗ ಅವರ ನಟನೆಯ ಚಿತ್ರದ ಉಸಿರೇ ಉಸಿರೇ ಹಾಡು ಕೇಳಿದ್ದೆ. ನನಗೆ ಈ ಚಿತ್ರದ ಗೊತ್ತಿದ್ದರಿಂದ ನಿರ್ದೇಶಕರಿಗೆ ಫೋನ್ ಮಾಡಿ, ನಮ್ಮ ಚಿತ್ರಕ್ಕೆ ಇದೇ ಶೀರ್ಷಿಕೆ ಇಡೋಣ. ಈಗಲೇ ನೊಂದಾಯಿಸಿ ಎಂದು ಹೇಳಿದೆ, ಚಿತ್ರಕ್ಕಾಗಿ ನಾನು ಹೆಚ್ಚು ವರ್ಕೌಟ್ ಏನೂ ಮಾಡಿಲ್ಲ. ಸಹಜವಾಗಿರುವ ಪಾತ್ರ. ನಮ್ಮ ನಾಲ್ಕು ವರ್ಷಗಳ ಶ್ರಮಕ್ಕೆ ಈತ ಉತ್ತಮ ಕಾಲ ಬಂದಿದೆ,' ಎಂದು ರಾಜೀವ್ ಮಾತನಾಡಿದ್ದಾರೆ.
