ಭುವನ್ ಪೊನ್ನಣ್ಣರನ್ನು ಹರ್ಷಿಕಾ ಅಂಕಲ್ ಅಂತ ಕರೀತಿದ್ರಂತೆ! ಲವ್ ಸ್ಟೋರಿ ಬಿಚ್ಚಿಟ್ಟ ಭಾವೀ ಮದುಮಕ್ಕಳು
ಹರ್ಷಿಕಾ ಪೂಣಚ್ಚ ಭುವನ್ ಪೊನ್ನಣ್ಣ ಈ ತಿಂಗಳ 24ಕ್ಕೆ ಸತಿ ಪತಿಗಳಾಗ್ತಿದ್ದಾರೆ. ಈ ನಡುವೆ ಹರ್ಷಿಕಾ ಬಗ್ಗೆ ಇಂಟರೆಸ್ಟಿಂಗ್ ವಿಷಯವನ್ನು ಭುವನ್ ಪೊನ್ನಣ್ಣ ಹೇಳಿದ್ದಾರೆ. ಶುರುವಲ್ಲಿ ಭುವನ್ ಅವರನ್ನು ಹರ್ಷಿಕಾ ಅಂಕಲ್ ಅಂತ ಕರೀತಿದ್ರಂತೆ!

ವರದಿ: ಪ್ರಿಯಾ ಕರ್ವಾಶೆ
ಬೆಂಗಳೂರು (ಆ.18): ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಹಾಗೂ ಕೊಡಗಿನ ನಟ ಭುವನ್ ಪೊನ್ನಣ್ಣ ಮದುವೆ ಶಾಸ್ತ್ರ ಮುಂದಿನ ವಾರ ಅದ್ದೂರಿಯಾಗಿ ನಡೆಯಲಿದೆ. ಕೊಡಗಿನ ಅಮ್ಮತ್ತಿಯಲ್ಲಿ ನಡೆಯೋ ಮದುವೆ ಕಾರ್ಯಕ್ರಮದಲ್ಲಿ ಸಿನಿಮಾ ರಂಗದ ಗಣ್ಯರು, ರಾಜಕೀಯ, ಫ್ಯಾಶನ್ ಜಗತ್ತಿನವರು ಎಲ್ಲ ಭಾಗವಹಿಸಲಿದ್ದಾರೆ. ಹರ್ಷಿಕಾ ಹಾಗೂ ಭುವನ್ ತಮ್ಮ ಮದುವೆಗೆ ಆಹ್ವಾನಿಸಲೆಂದು ಸುದ್ದಿಗೋಷ್ಠಿ ಮಾಡಿದ್ದರು. ಲವರ್ಸ್‌ಗಿಂತಲೂ ಪಕ್ಕಾ ಟಾಮ್ ಆಂಡ್ ಜೆರ್ರಿ ಫ್ರೆಂಡ್ಸ್ ಥರ ಸ್ಟೇಜ್ ಮೇಲೇ ಇವರಿಬ್ಬರೂ ಕಿತ್ತಾಡಿಕೊಂಡಿದ್ದು ಸಕತ್ತಾಗಿತ್ತು. ಅದಕ್ಕೂ ಮುನ್ನ ಭುವನ್ ಪೊನ್ನಣ್ಣ ತನಗೆ ಮದುವೆ ಆಗ್ಲೇ ಬಾರದು ಅಂತಿತ್ತು. ಬ್ಯಾಚುಲರ್ ಆಗಿಯೇ ಇರ್ತೀನಿ ಅಂತಿದ್ದೆ. ಮದುವೆ ಅಂದರೆ ಎರಡೂ ಸಂಸಾರಗಳ ಜವಾಬ್ದಾರಿ, ಆಮೇಲೆ ಮಕ್ಕಳು, ಅವರ ಓದು.. ಹೀಗೆ ಜವಾಬ್ದಾರಿ ಮೇಲೆ ಜವಾಬ್ದಾರಿ ಈ ಫ್ರೀಡಂ ಇರೋದಿಲ್ಲ. ಹೀಗಾಗಿ ನಾನು ಮದುವೆಯೇ ಆಗಬಾರದು ಅಂದುಕೊಂಡಿದ್ದೆ ಅಂದರು.
ಈ ನಡುವೆ ಒಂದು ಇಂಟರೆಸ್ಟಿಂಗ್ ವಿಷಯವನ್ನೂ ಹೇಳಿದ್ರು. ಅದು ಭಾವೀ ಪತ್ನಿ ಹರ್ಷಿಕಾ ತನ್ನನ್ನು ಅಂಕಲ್ ಅಂತ ಕರೆದ ಕಥೆ. ಅದು ಕೊಡವ ಸಮಾಜದ ಫಂಕ್ಷನ್. ಭುವನ್ ಅಷ್ಟೊತ್ತಿಗಾಗಲೇ ಫೇಮಸ್ ಫ್ಯಾಶನ್ ಕೊರಿಯೋಗ್ರಾಫರ್ ಆಗಿದ್ರು. ಕೊಡವ ಸಮಾಜದ ಫಂಕ್ಷನ್‌ನಲ್ಲಿ ಭುವನ್ ಕೊರಿಯೋಗ್ರಫಿಯಲ್ಲಿ ಫ್ಯಾಶನ್ ಶೋ ಇತ್ತು. ಆ ಅರವತ್ತರ ಹರೆಯದ ವ್ಯಕ್ತಿ ಭುವನ್ ಬಳಿ ಈ ಬಾರಿ ರಾಂಪ್ ವಾಕ್ ಮಾಡೋದಕ್ಕೆ ಒಬ್ಬ ಹೀರೋಯಿನ್ ಬರ್ತಿದ್ದಾರೆ. ಆಕೆಯೇ ಶೋ ಸ್ಟಾಪರ್ ಆಗ್ತಿರ್ತಾಳೆ. ಆಕೆಗೆ ಸ್ವಲ್ಪ ಗೈಡ್ ಮಾಡಿ ಅಂದಿದ್ದಾರೆ. ಭುವನ್ ಅದಕ್ಕೆ ಒಪ್ಪಿದ್ದಾರೆ. ಇದಾಗಿ ಸ್ವಲ್ಪ ಹೊತ್ತಿಗೆ ಹರ್ಷಿಕಾ ಫೋನ್. 'ಅಂಕಲ್, ನಾನು ಹರ್ಷಿಕಾ ಅಂತ. ನೀವು ಶೋ ಬಗ್ಗೆ ಗೈಡ್ ಮಾಡ್ತೀರಿ ಅಂತ ಹೇಳಿದ್ರು. ಒಂದರ್ಧ ಗಂಟೆ ಪ್ರಾಕ್ಟೀಸ್ ಮಾಡಿ ಆಮೇಲೆ ಹೋಗ್ತೀನಿ' ಅಂದರಂತೆ. ಈ ಹುಡುಗಿ ತನ್ನನ್ನು ಅಂಕಲ್ ಅಂದಿದ್ದು ಕೇಳಿ ಕೆಂಡದಂಥಾ ಕೋಪ ಬಂದರೂ ಭುವನ್ ಕೂಲಾಗಿ ಉತ್ತರಿಸಿದ್ದಾರೆ.
ಇದಾಗಿ ಹರ್ಷಿಕಾ ಸಂಜೆ ಭುವನ್ ಅವರನ್ನು ಮೀಟ್ ಮಾಡಿದ್ದಾರೆ. ಶುರುವಲ್ಲಿ ಭುವನ್ ಅಷ್ಟು ಯಂಗ್ ಇರೋದು ನೋಡಿ ಫೇಮಸ್ ಕೊರಿಯೋಗ್ರಾಫರ್ ಅಸಿಸ್ಟೆಂಟ್ ಇರಬೇಕು ಅಂದುಕೊಂಡಿದ್ರಂತೆ. ಹರ್ಷಿಕಾ ಮನಸ್ಸಲ್ಲಿದ್ದದ್ದು ಈ ಕೊರಿಯೋಗ್ರಾಫರ್ ಕೂಡ ಮಧ್ಯವಯಸ್ಸು ದಾಟಿರುವ ಅಂಕಲ್ ಅಂತ. ಆಮೇಲೆ ಭುವನ್ ಅವರೇ ಆ ಫೇಮಸ್ ಕೊರಿಯೋಗ್ರಾಫರ್ ಅಂತ ಗೊತ್ತಾಗಿದೆ. ಅಂಕಲ್ ಹೋಗಿ ಸರ್ ಅಂತ ಕರೆದರೂ ಭುವನ್ ಸಿಟ್ಟು ಹೋಗಿಲ್ಲ. ಹರ್ಷಿಕಾ ಶೋ ಸ್ಟಾಪರ್ ಆಗಿದ್ರೂ ಇಪ್ಪತ್ತೆಂಟು ರೌಂಡ್ ವಾಕ್ ಮಾಡಿಸಿದ್ದರಂತೆ! ತಾನು ಶೋ ಸ್ಟಾಪರ್ ಆಗಿದ್ರೂ ಇವರ್ಯಾಕೆ ಹೀಗೆ ಮಾಡ್ತಿದ್ದಾರೆ ಅಂತಲೇ ಹರ್ಷಿಕಾಗೆ ಗೊತ್ತಾಗಲಿಲ್ಲವಂತೆ. ಎಷ್ಟೋ ಸಮಯದ ಬಳಿಕ ಈ ಸನ್ನಿವೇಶ ನೆನೆಸಿಕೊಂಡು ಇಬ್ಬರೂ ನಕ್ಕಿದ್ದಾರೆ.
ಬಾಲಿಯಲ್ಲಿ ಹರ್ಷಿಕಾ ಪೂಣಚ್ಚ ಬ್ಯಾಚುಲರೇಟ್ ಪಾರ್ಟಿ; ಫೋಟೋ ವೈರಲ್!
ಅಗ್ರಜ ಸಿನಿಮಾ ಮುಹೂರ್ತ ಟೈಮಲ್ಲಿ ಲೈಟಾಗಿ ಭುವನ್ ಹರ್ಷಿಕಾಗೆ ಪ್ರೊಪೋಸ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಹರ್ಷಿಕಾ ತಂದೆ ತಾಯಿಯೂ ಭುವನ್ ನೋಡಿ, ಅವರ ಬಗ್ಗೆ ಒಳ್ಳೆ ಅಭಿಪ್ರಾಯ ಹೊಂದಿದ್ದು ಹರ್ಷಿಕಾ ಮನಸ್ಸಲ್ಲೂ ಪ್ರೀತಿ ಮೂಡಿತ್ತು. ಆಕೆ ಎಸ್ ಅಂದಿದ್ದಾರೆ. ಇದಾಗಿ ಹನ್ನೊಂದು ವರ್ಷಗಳಾಗಿವೆಯಂತೆ. ಈಗ ಮನೆಯವರ ಒತ್ತಾಯಕ್ಕೆ ಮಣಿದು ಇಬ್ಬರೂ ಮದುವೆ ಆಗಲು ನಿರ್ಧಾರ ಮಾಡಿದ್ದಾರೆ.
ಮೆಣಸು, ಕಾಫಿ ಪೌಡರ್, ಜೇನುತುಪ್ಪದ ಜೊತೆ ಲಗ್ನಪತ್ರಿಕೆ ಹಂಚಿದ ಹರ್ಷಿಕಾ-ಭುವನ್ ಜೋಡಿ!