ನಟನೆ ಜತೆಗೆ ನಿರ್ದೇಶನ ಕೂಡ ಮಾಡಿರುವ ಆರ್ ಮಂಜುನಾಥ್ ಆಟೋ ಚಾಲಕ. ಮತ್ತೊಬ್ಬ ಪ್ರಮುಖ ಪಾತ್ರಧಾರಿ ಅರುಣ್ ಕುಮಾರ್ ಓಲಾ ಕ್ಯಾಬ್ ಚಾಲಕ. ಚಿತ್ರದ ಹೆಸರಿನಲ್ಲೇ ಕನ್ನಡ
ಇದೆ. ಈ ಕಾರಣಕ್ಕೋ ಏನೋ ನವೆಂಬರ್ ೧ರಂದೇ ಸಿನಿಮಾ ತೆರೆಗೆ ಬರುತ್ತಿದೆ. ಮೊನ್ನೆ ಚಿತ್ರದ ಟ್ರೇಲರ್ ಬಿಡುಗಡೆಯ ನಂತರ ಚಿತ್ರಕ್ಕೆ ಬೆಂಬಲ ಸೂಚಿಸಲು ಹಲವು ರೀತಿಯ ವಾಹನ ಚಾಲಕರ ಸಂಘಗಳು, ಕನ್ನಡ ಸಂಘಟನೆಯ ಮುಖ್ಯಸ್ಥರು ಆಗಮಿಸಿದ್ದರು.

‘ಅಮ್ಮನ ಮಾನ ಕಾಪಾಡಲು ಸೀರೆ ಅಡ್ಡ ಹಿಡಿಯುತ್ತಿದ್ದೆ’

ಎಲ್ಲರು ಶುಭ ನುಡಿಗಳು ಹೇಳುತ್ತ, ‘ಈ ಚಿತ್ರ ಗೆಲ್ಲಿಸಲೇ ಬೇಕು’ ಎಂದು ಗಟ್ಟಿಯಾಗಿ ಪ್ರತಿಪಾದಿಸಿದರು. ಈ ಚಿತ್ರಕ್ಕೆ ‘ಬೋಲೋ ಕನ್ನಡಿಗಾ ಕೀ ಜೈ’ ಎನ್ನುವ ಉಪ ಶೀರ್ಷಿಕೆ ಇದೆ. ‘ ಸ್ಟಾರ್ ಕನ್ನಡಿಗ ಸಿನಿಮಾದೊಳಗೊಂದು ಸಿನಿಮಾ ಕತೆಯನ್ನು ಒಳಗೊಂಡ ಸಿನಿಮಾ. ಜೀವನದಲ್ಲಿ ಸಾಧನೆ ಮುಖ್ಯವೋ, ಪ್ರೀತಿ ಮುಖ್ಯವೋ ಎಂಬ ಸಂದಿಗ್ಧತೆಗೆ ಆ ಹುಡುಗರು ಸಿಕ್ಕುತ್ತಾರೆ ಅಂತಿಮವಾಗಿ ಅವರು ಏನನ್ನು ಆರಿಸಿಕೊಂಡರು, ಸ್ಟಾರ್ ಕನ್ನಡಿಗನಾಗಿ ಮಿಂಚುವುದು ಯಾರು ಎಂಬುದೇ ಈ ಚಿತ್ರದ ಕುತೂಹಲಕಾರಿ ಅಂಶ’ ಎಂಬುದು ನಿರ್ದೇಶಕರ ಮಾತು. ನಿರ್ದೇಶಕ ಮಂಜುನಾಥ್ ಅವರೇ ತಮ್ಮೊಂದಿಗೆ ಒಂದಿಷ್ಟು ಆಟೋ ಚಾಲಕರನ್ನು ಸೇರಿಸಿಕೊಂಡು ಈ ಚಿತ್ರವನ್ನು ನಿರ್ಮಿಸಿದ್ದಾರೆ.

'ನನ್ನ ಕಂಡರೆ ನಿಮಗೆ ಏನನಿಸುತ್ತೆ?BB ಮನೆಯಲ್ಲಿ ಶುರುವಾಯ್ತು ಲವ್ ಸ್ಟೋರಿ!

ಚೆನ್ನೀರ, ಅರುಣ್ ಕುಮಾರ್ ಹಾಗೂ ಭೈರವ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕನಕಪುರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಪವನ್ ಪಾರ್ಥ ಸಂಗೀತ ಸಂಯೋಜನೆ ಇದೆ. ಶಾಲಿನಿ ಭಟ್, ರಾಕ್‌ಲೈನ್ ಸುಧಾಕರ್, ಕಿರಣ್, ರೋಹಿತ್ ಮುಂತಾದವರು ನಟಿಸಿದ್ದಾರೆ. ಮಹದೇವ್ ಈ ಚಿತ್ರದ ಛಾಯಾಗ್ರಹಕ.