ಕನ್ನಡದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಜಿಮ್‌ನಲ್ಲಿ  ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಚುಟು ಚುಟು ನಟಿ ಆಶಿಕಾ ರಂಗನಾಥ್ ಜಿಮ್‌ನಲ್ಲಿ ಹೆವಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಇದಕ್ಕೆ ಗ್ಲ್ಯಾಮ್ ಟು ಗ್ರೈಂಡ್ ಎಂದು ಕ್ಯಾಪ್ಶನ್ ನೀಡಿದ್ದಾರೆ. 

ಆರಂಭದಲ್ಲಿ ವಾರ್ಮ್ ಅಪ್‌ಗೆ ಸಾಕಾಗಿ ಹೋಯ್ತು ಅನ್ನುವ ಅಶಿಕಾ ನಂತರದಲ್ಲಿ ನಡೆಸುವ ವೇಟ್ ಟ್ರೇನಿಂಗ್, ಸ್ಕ್ವಾಟ್, ಲೆಗ್ ಪ್ರೆಸ್, ಬಾರ್ಬೆಲ್ ರೋ, ಜಂಪಿಂಗ್ ಜಾಕ್ಸ್ ಇತ್ಯಾದಿ ವರ್ಕೌಟ್‌ಗಳಲ್ಲಿ ಬೆವರಿಳಿಸುತ್ತಿರುವುದನ್ನು ಕಾಣಬಹುದು. ಬಿಳಿ ಕ್ರಾಪ್ ಜಿಮ್ ಟಾಪ್ ಜೊತೆಗೆ ಕಪ್ಪು ಬಣ್ಣದ ನೈಕಿ ವರ್ಕೌಟ್ ಬಾಟಂ ಧರಿಸಿರುವ ಮಿಲ್ಕಿ ಬ್ಯೂಟಿ, ಮಧ್ಯೆ ಹೈಡ್ರೇಶನ್‌ಗಾಗಿ ಎಳನೀರು ಕುಡಿದು ಮತ್ತೆ ವರ್ಕೌಟ್ ಮುಂದುವರಿಸುತ್ತಾರೆ.

ಆಶಿಕಾ ವರ್ಕೌಟ್ ನೋಡಿದ ಅಭಿಮಾನಿಗಳು, ಥರಹೇವಾರಿ ಕಾಮೆಂಟ್‌ಗಳಿಂದ ಕಾಮೆಂಟ್ ಸೆಕ್ಷನ್ನನ್ನು ತುಂಬಿಸುತ್ತಿದ್ದಾರೆ.


'ಇಂಥ ಚೆಲುವೆಗೆ ಈ ರೀತಿ ಕಷ್ಟ ಕೊಡುವ ಟ್ರೇನರ್ ಖಂಡಿತವಾಗಿ ನರಕಕ್ಕೆ ಹೋಗುತ್ತಾನೆ' ಎಂದು ಒಬ್ಬ ಫ್ಯಾನ್ ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು, 'ಈ ವಿಡಿಯೋ ನೋಡಿ ನಾನು ಕೂಡಾ ಜಿಮ್ ಟ್ರೇನರ್ ಆಗುವ ಮನಸ್ಸು ಮಾಡಿದ್ದೇನೆ' ಎಂದಿದ್ದಾರೆ.

ಮತ್ತೊಬ್ಬ ಇನ್ಸ್ಟಾ ಬಳಕೆದಾರರು ಆಶಿಕಾ ಸೌಂದರ್ಯದ ಜೊತೆಗೆ ಹಾರ್ಡ್‌ ವರ್ಕನ್ನೂ ಹೊಗಳುತ್ತಾ, 'ಬ್ಯೂಟಿ ಇನ್ ಬೀಸ್ಟ್ ಮೋಡ್' ಎಂದಿದ್ದಾರೆ. ಆಶಿಕಾರ ಈ ವಿಡಿಯೋ ಶೇಪ್‌ನಲ್ಲಿರಲು ನಟಿ ಎಷ್ಟೊಂದು ಬದ್ಧತೆ ಹೊಂದಿದ್ದಾರೆಂಬುದನ್ನು ತೋರಿಸುತ್ತದೆ.

ಹೆಚ್ಚು ಓದದ ಈ ಉದ್ಯಮಿ ಇಂದು 10,000 ಕೋಟಿ ಮೌಲ್ಯದ ಕಂಪನಿ ಒಡೆಯ; 10ಕ್ಕೂ ಹೆಚ್ಚು ಜನಪ್ರಿಯ ಬ್ರ್ಯಾಂಡ್‌‌ ಹಿಂದಿನ ಅಣ್ಣಾಬಾಂಡ್

ಆಶಿಕಾರ ಫಿಟ್‌ನೆಸ್ ದಿನಚರಿಯ ಈ ನೋಟವು ತನ್ನ ನಟನಾ ವೃತ್ತಿಜೀವನದ ಹೊರಗೆ ಆಕೆ ನಿರ್ವಹಿಸುತ್ತಿರುವ ಸಕ್ರಿಯ ಜೀವನಶೈಲಿಯ ಇಣುಕು ನೋಟವನ್ನು ಕೊಡುತ್ತದೆ. ತಮ್ಮ ಜೀವನದಲ್ಲಿ ಹೆಚ್ಚಿನ ವ್ಯಾಯಾಮವನ್ನು ಅಳವಡಿಸಿಕೊಳ್ಳಲು ಬಯಸುವ ಅಭಿಮಾನಿಗಳಿಗೆ ಇದು ಪ್ರೇರಣೆಯೂ ಆಗುತ್ತದೆ.

ಕನ್ನಡವಷ್ಟೇ ಅಲ್ಲದೆ ತೆಲುಗು, ತಮಿಳಿನಲ್ಲಿ ಸಕ್ರಿಯವಾಗಿರುವ ಆಶಿಕಾ, ಈ ವರ್ಷ ನಾ ಸಾಮಿ ರಂಗಾ ಚಿತ್ರದಿಂದ ಸದ್ದು ಮಾಡಿದ್ದರು. ಇದಲ್ಲದೆ ಕಳೆದ ವರ್ಷ ಎನ್ನೋ ರಥ್ರುಲೋಜೇನ್, ಏಮಿಗೋಸ್ ಮುಂತಾದ ಟಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ಕನ್ನಡದಲ್ಲಿ ಸಿಂಪಲ್ ಸುನಿ ನಿರ್ದೇಶನದ 'ಗತ ವೈಭವ'ದ ಮೂಲಕ ಮೇನಲ್ಲಿ ಆಶಿಕಾ ತಮ್ಮ ಅಭಿಮಾನಿಗಳನ್ನು ತಲುಪಲಿದ್ದಾರೆ. 

View post on Instagram