Asianet Suvarna News Asianet Suvarna News

ಮುಂಬೈನಲ್ಲಿ ಪ್ಯಾನ್ ಇಂಡಿಯನ್ 'ಮಾರ್ಟಿನ್' ಕಲರವ, ಅರ್ಜುನ್-ಧ್ರುವ ಸರ್ಜಾ ಜೋಡಿಗೆ ಬಹುಪರಾಕ್!

ಮಾರ್ಟಿನ್ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ 21 ದೇಶಗಳ ಪತ್ರಕರ್ತರು ಭಾಗಿಯಾಗಿದ್ದು ವಿಶೇಷತೆ ಎನಿಸಿತು. ನಿನ್ನೆಯಷ್ಟೇ ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಕನ್ನಡ ಟ್ರೈಲರ್ ಪ್ರದರ್ಶನಗೊಂಡಿತ್ತು. ಅದಕ್ಕೆ ಸೂಪರ್ ರೆಸ್ಪಾನ್ಸ್ ಬಂದಿದ್ದು...

Ap Arjun directional Dhruva Sarja lead movie Martin trailer launched in Mumbai srb
Author
First Published Aug 5, 2024, 5:53 PM IST | Last Updated Aug 5, 2024, 5:53 PM IST

ಎಪಿ ಅರ್ಜುನ್ ನಿರ್ದೇಶನ, ಧ್ರುವ ಸರ್ಜಾ ಮುಖ್ಯ ಭೂಮಿಕೆಯ 'ಮಾರ್ಟಿನ್' ಸಿನಿಮಾ ಸಖತ್ ಸದ್ದು ಮಾಡತೊಡಗಿದೆ. ಮುಂಬೈನಲ್ಲಿ 'ಮಾರ್ಟಿನ್' ಮ್ಯಾಜಿಕ್ ಮಾಡಿದೆ. ಮುಂಬೈನಗರಿಯಲ್ಲಿ 'ಮಾರ್ಟಿನ್' ಪ್ಯಾನ್ ಇಂಡಿಯನ್ ಚಿತ್ರದ ಕಲರವ ಕೇಳಿ ಬಂದಿದೆ. ಮುಂಬೈನ ಅಂಧೇರಿಯಲ್ಲಿ 'ಮಾರ್ಟಿನ್' ಚಿತ್ಮದ ಅದ್ದೂರಿ ಟ್ರೈಲರ್ ಲಾಂಚ್ ಮಾಡಲಾಗಿದೆ. 

ಅಭಿಮಾನಿಗಳ ಆಸೆಯಂತೆ ಪೋಲಿಂಗ್ ಮೂಲಕ ಟ್ರೈಲರ್ ಆಯ್ಕೆ ಮಾಡಲಾಯಿತು. ಮುಂಬೈನ ಅಂಧೇರಿಯ PVR ಸಿಟಿಮಾಲ್ ನಲ್ಲಿ ಮಾರ್ಟಿನ್ ಇಂಟರ್ ನ್ಯಾಷನಲ್ ಮೀಟ್ ಏರ್ಪಡಿಸಲಾಗಿತ್ತು. 13 ಭಾಷೆಗಳಲ್ಲಿ 'ಮಾರ್ಟಿನ್' ಟ್ರೈಲರ್ ಬಿಡುಗಡೆ ಮಾಡಲಾಯ್ತು. ಈ ಮೂಲಕ ಕನ್ನಡ ಸಿನಿಮಾವೊಂದು ಹೊಸ ದಾಖಲೆ ನಿರ್ಮಿಸಿದೆ.

ಯಾವುದೇ ಕ್ಷಣ, ಪರಿಸ್ಥಿತಿಯಲ್ಲೂ ದರ್ಶನ್ ಸರ್ ಬಗ್ಗೆ ಹಗುರವಾಗಿ ಮಾತನಾಡೋದಿಲ್ಲ: ಎಪಿ ಅರ್ಜುನ್

ಮಾರ್ಟಿನ್ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ 21 ದೇಶಗಳ ಪತ್ರಕರ್ತರು ಭಾಗಿಯಾಗಿದ್ದು ವಿಶೇಷತೆ ಎನಿಸಿತು. ನಿನ್ನೆಯಷ್ಟೇ ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಕನ್ನಡ ಟ್ರೈಲರ್ ಪ್ರದರ್ಶನಗೊಂಡಿತ್ತು. ಅದಕ್ಕೆ ಸೂಪರ್ ರೆಸ್ಪಾನ್ಸ್ ಬಂದಿದ್ದು ಚಿತ್ರತಂಡ ಸಖತ್ ಖುಷಿ ಅನುಭವಿಸಿದೆ. ಈಗ ಮುಂಬೈನಲ್ಲಿ ಸಹ ಮಾರ್ಟಿನ್ ಮೋಡಿ ಮಾಡತೊಡಗಿದೆ. 

ಆಕ್ಷನ್-ಪ್ರಿನ್ಸ್ ಧ್ರುವಸರ್ಜಾ ಅಭಿನಯದ 'ಮಾರ್ಟಿನ್' ಚಿತ್ರವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಬಿಗ್ ಬಜೆಟ್‌ ಹೊಂದಿರುವ ಸಿನಿಮಾ ಇದಾಗಿದ್ದು, ಮುಹೂರ್ತದ ಸಮಯದಿಂದಲೇ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಅದ್ದೂರಿ, ಅಂಬಾರಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರಂಗಕ್ಕೆ ನೀಡಿರುವ ನಿರ್ದೇಶಕ ಎಪಿ ಅರ್ಜುನ್ ಮಾರ್ಟಿನ್ ಚಿತ್ರದ ನಿರ್ದೇಶಕರು. ಆಗಷ್ಟ್ 11ಕ್ಕೆ ವಿಶ್ವದಾದ್ಯಂತ 'ಮಾರ್ಟಿನ್' ಸಿನಿಮಾ ರಿಲೀಸ್ ಕಾಣಲಿದೆ. 

ಇದು ಎಂಥ ಲೋಕವಯ್ಯಾ ಅಂತಿರೋ ಅನಂತ್‌ ನಾಗ್: ಹಿರಿಯ ನಟ ಮತ್ತೇನ್ ಅಂದ್ರು ನೋಡಿ!

ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕರಾದ ಎಪಿ ಅರ್ಜುನ್ ಜೋಡಿ ಈಗಾಗಲೇ 'ಅದ್ದೂರಿ' ಚಿತ್ರದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಈಗ ಮಾರ್ಟಿನ್ ಚಿತ್ರದ ಮೂಲಕ ಮತ್ತೆ ಒಂದಾಗಿದೆ. ಅವರಿಬ್ಬರ ಸಂಗಮದ ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಯಂತೂ ಇದ್ದೇ ಇದೆ. ನಿರೀಕ್ಷೆ ನಿಜವಾಗಿಸುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿಯೇ ಗೋಚರಿಸುತ್ತಿದೆ ಎನ್ನಬಹುದು. ಟ್ರೇಲರ್ ಲಾಂಚ್ ಮಾಡಿರುವ ಚಿತ್ರತಂಡಕ್ಕೆ ಶುಭ ಸಮಾಚಾರ ಎನ್ನುವಂತೆ, ಸಿನಿಮಾ ಬಗ್ಗೆ ಎಲ್ಲಾ ಕಡೆ ಗುಡ್ ಟಾಕ್ ಇದೆ ಎನ್ನಲಾಗಿದೆ. 

 

 

Latest Videos
Follow Us:
Download App:
  • android
  • ios