Asianet Suvarna News Asianet Suvarna News

ನ್ಯಾಷನಲ್ ಇಶ್ಯೂ ಆಗ್ತಿದ್ಯಾ ಆ್ಯಂಕರ್​ ಅನುಶ್ರೀ ಮದುವೆ..? ಹುಡುಗನ ಹುಡುಕ್ತಿದಾರೆ ಕರುನಾಡು ಚಕ್ರವರ್ತಿ ಶಿವಣ್ಣ..!

ಅದನ್ನು ಅವರೇ ಬಿಡಿಸಿ ಹೇಳಬೇಕು. ಅವರ ವಿಷ್ಯ ಅವರಿಗಿಂತ ನಮಗೆ ಹೇಗೆ ಜಾಸ್ತಿ ಗೊತ್ತಾಗಲು ಸಾಧ್ಯ ಅಲ್ಲವೇ? ಆದರೆ, ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮುಂದೆಯೇ ಅನುಶ್ರೀ ಅವರು ತಾವು ಮುಂದಿನ ವರ್ಷ ಮುದುವೆ ಆಗಲಿರುವುದನ್ನು ಕನ್ಫರ್ಮ್ ಮಾಡಿದ್ದಾರೆ. ..

Anchor anushree talks about her marriage in front of actor Shiva Rajkumar srb
Author
First Published Aug 8, 2024, 11:25 AM IST | Last Updated Aug 8, 2024, 2:08 PM IST

ಆ್ಯಂಕರ್​ ಹಾಗೂ ನಟಿ ಅನುಶ್ರೀ (Anushree) ಮದುವೆ ಬಗ್ಗೆ ಇಡೀ ಜಗತ್ತೇ ಯೋಚಿಸುತ್ತಿದೆ ಎನ್ನಬಹುದು. ಎಲ್ಲಿ ಹೋದರೂ, ಎಲ್ಲಿ ಬಂದರೂ ಇದ್ದಲ್ಲೇ ಇದ್ದರೂ ಆಂಕರ್ ಅನುಶ್ರೀ ಅವರಿಗೆ ಎಲ್ಲರೂ ಕೇಳುವ ಪ್ರಶ್ನೆ ಒಂದೇ, 'ಯಾವಾಗ ಮದುವೆ ಆಗುತ್ತೀರಾ..?' ಎಂಬುದಾಗಿದೆ. ಅದಕ್ಕೆ ಉತ್ತರ ಹೇಳಿ ಹೇಳೀ ಅನುಶ್ರೀಗೂ ಸಾಕಾಗಿರಬಹುದು. ಆದರೆ, ಕೇಳುವವರು ಇರೋ ತನಕ ಹೇಳಲೇಬೇಕಲ್ಲ ಅನುಶ್ರೀ! ಇದೀಗ ನಟ ಶಿವರಾಜ್‌ಕುಮಾರ್ (Shiva Rajkumar) ಅವರು ಅನುಶ್ರೀ ಮದುವೆ ಬಗ್ಗೆ ಏನಂದ್ರು ಅಂತ ನೋಡಿ..

ಹೌದು, ನಿರೂಪಕಿ ಅನುಶ್ರೀ ಅಂದಮೇಲೂ ಕೂಡ 'ವೇದಿಕೆಯಲ್ಲಿ' ಅನ್ನೋ ಅಗತ್ಯವಿಲ್ಲ. ಅವರು ಮಾತನಾಡುವುದು ಹೆಚ್ಚಾಗಿ ವೇದಿಕೆಗಳಲ್ಲಿ, ಬಿಟ್ಟರೆ ಯೂಟ್ಯೂಬ್ ಚಾನೆಲ್‌ನಲ್ಲಿ. ಅದು ಬಿಟ್ಟರೆ ಅವರ ಅಧಿಕೃತ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಏನಾದ್ರೂ ಮೆಸೇಜ್ ಹಾಕ್ತಾ ಇರ್ತಾರೆ ಅಂತ ಎಲ್ಲರಿಗೂ ಗೊತ್ತು. ಹೀಗಿರುವಾಗ, ಒಂದು ವೇದಿಕೆಯಲ್ಲಿ ನಟ ಶಿವಣ್ದ ಅನುಶ್ರೀ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನೂ ಕೂಡ ಹುಡುಕ್ತಾ ಇದೀನಿ ಅಂದಿದಾರೆ. 

ಪುನೀತ್ ಜೊತೆ ನಟಿಸಲು ರಾಘಣ್ಣ ಕೇಳಿದಾಗ ನಟ ದರ್ಶನ್ ಹೇಳಿದ್ದ ಮಾತು ಈಗ ವೈರಲ್!

ಅಷ್ಟೇ ಅಲ್ಲ, ನಿನ್ನ ಮನಸ್ಸಲ್ಲಿ ಯಾರಾದ್ರೂ ಇದ್ದಾರೆ ಅಂದ್ರೆ ಹೇಳ್ಬಿಡು.. ಅವ್ರ ಹತ್ರನೇ ಡೈರೆಕ್ಟರ್‌ ಮಾತಾಡಿ ಮದುವೆ ಮಾತುಕತೆ ಮುಗಿಸಿಬಿಡೋಣ ಅಂದಿದಾರೆ ಶಿವಣ್ಣ. ಅದಕ್ಕೆ ಅನುಶ್ರೀ ಅವರು, 'ಹಾಗೇನಿಲ್ಲ, ಮನಸ್ಸಲ್ಲಿ ಯಾರನ್ನೂ ಬಚ್ಚಿಟ್ಕೊಂಡಿಲ್ಲ.. ಆದ್ರೆ, ಮುಂದಿನ ವರುಷ ಪಕ್ಕಾ ಮದುವೆ ಆಗ್ತೀನಿ. ಆದ್ರೆ, ನಾನು ಮದುವೆಯಾದ್ರೆ ಮಳೆ-ಬೆಳೆ ಎಲ್ಲಾ ಕಡಿಮೆ ಆಗುತ್ತೆ..' ಅಂದ್ರೆ. ಅನುಶ್ರೀ ಯಾಕೆ ಹಾಗಂದ್ರು? ಮಳೆ-ಬೆಳೆಗೂ ಅವರ ಮದುವೆಗೂ ಏನು ಸಂಬಂಧ? 

ಅದನ್ನು ಅವರೇ ಬಿಡಿಸಿ ಹೇಳಬೇಕು. ಅವರ ವಿಷ್ಯ ಅವರಿಗಿಂತ ನಮಗೆ ಹೇಗೆ ಜಾಸ್ತಿ ಗೊತ್ತಾಗಲು ಸಾಧ್ಯ ಅಲ್ಲವೇ? ಆದರೆ, ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮುಂದೆಯೇ ಅನುಶ್ರೀ ಅವರು ತಾವು ಮುಂದಿನ ವರ್ಷ ಮುದುವೆ ಆಗಲಿರುವುದನ್ನು ಕನ್ಫರ್ಮ್ ಮಾಡಿದ್ದಾರೆ. ಅಂದರೆ, ಅನುಶ್ರೀ ಮದುವೆ ಮುಂದಿನ ವರ್ಷ ಕನ್ಪರ್ಮ್‌. ಆದರೆ ಉಳಿದಿರುವ ಕುತೂಹಲ ಎಂದರೆ ಹುಡುಗ ಯಾರು ಎನ್ನುವುದು ಅಷ್ಟೇ. ಅದಕ್ಕೂ ಕೂಡ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಬಿಡಿ. ಅದನ್ನೂ ಅನುಶ್ರೀ ಹೇಳುತ್ತಾರೆ. 

ಚಿಕ್ಕ ವಯಸ್ಸಿನಲ್ಲೇ ನಮ್ಮನ್ನಗಲಿದ ಕನ್ನಡ ಚಿತ್ರತಾರೆಗಳು; ಕಂಬನಿಯಾಗಿ ಜಾರುವ ನೆನಪುಗಳು!

ಒಟ್ಟಿನಲ್ಲಿ, ನಟಿ-ನಿರೂಪಕಿ ಅನುಶ್ರೀ ಮದುವೆ ಈಗ ನ್ಯಾಷನಲ್ ಇಶ್ಯೂ ಎಂಬಂತೆ ಆಗಿಬಿಟ್ಟಿದೆಯಾ ಎಂಬ ಗುಮಾನಿ ಕಾಡತೊಡಗಿದೆ. ಯಾಕೆಂದರೆ, ಎಲ್ಲ ಕಡೆಯೂ, ಅಂದರೆ ಮೀಡಿಯಾಗಳಲ್ಲೂ ಸೋಷಿಯಲ್ ಮೀಡಿಯಾಗಳಲ್ಲೂ ಅನುಶ್ರೀ ಮದುವೆಯದೇ ಸುದ್ದಿ, ಚರ್ಚೆ ಸಾಗುತ್ತಿದೆ. ಅದಕ್ಕೆ ಉತ್ತರ ಕೊಡುತ್ತಲೇ ಇರುವ ಅನುಶ್ರೀ ತಾವು ಇನ್ನೂ ಸಿಂಗಲ್ ಆಗಿ ಇರುವುದಿಲ್ಲ, ಮಿಂಗಲ್ ಆಗುತ್ತೇನೆ. ಅದೂ ಮುಂದಿನ ವರ್ಷವೇ ಆಗಲಿದ್ದೇನೆ ಎಂದು ಕೂಡ ಉತ್ತರಿಸಿ ಆಗಿದೆ. ಆ ಲಕ್ಕೀ ಬಾಯ್ ಯಾರು ಅನ್ನೋದಷ್ಟೇ ಇನ್ನುಳಿದಿರುವ ಪ್ರಶ್ನೆ!

Latest Videos
Follow Us:
Download App:
  • android
  • ios