ಮಂಡ್ಯ(ನ.  24) ಕಲಿಯುಗ ಕರ್ಣ, ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ಎರಡು ವರ್ಷ. ಮಂಡ್ಯದಲ್ಲಿ ಅಭಿಮಾನಿಗಳು ದೇವಾಲಯ ಕಟ್ಟಿ ಅಂಬರೀಶ್ ಗೆ ನಮಿಸಿದ್ದಾರೆ. ಕಂಚಿನ ಪುತ್ಥಳಿ ಅನಾವರಣ ಮಾಡಲಾಗಿದೆ.

ಇಂದು ಅಂಬರೀಶ್ ಪುಣ್ಯಸ್ಮರಣೆ. ದಶಕಗಳಿಂದ ಅಂಬರೀಶ್‌ರವರ ಹುಟ್ಟುಹಬ್ಬ ಆಚರಿಸುತ್ತೀದ್ದೀರಾ ಅಂಬರೀಶ್ ಅಗಲಿ ಎರಡು ವರ್ಷ ಆಗಿದೆ. ಆದ್ರೆ ನಿಮ್ಮ ಪ್ರೀತಿ ಚೂರು ಕಡಿಮೆ ಆಗಿಲ್ಲ. ಬದುಕಿದ್ದಾಗ ತೋರಿದ ಪ್ರೀತಿ ಅವರು ಹೋದ ಮೇಲೆಯೂ  ತೋರಿಸಿದ್ದೀರಾ. ಇದು ಯಾವ ಜನ್ಮದ ಪುಣ್ಯಾನೋ ಗೊತ್ತಿಲ್ಲ ನಿಮ್ಮ ಪ್ರೀತಿ ನನ್ನ ಚುನಾವಣೆಯಲ್ಲೂ ತೋರಿಸಿದ್ರಿ. ನನಗೆ ಮಂಡ್ಯ ಸಂಸದೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಸುಮಲತಾ ಹೇಳಿದ್ದಾರೆ.

ಸುಮಲತಾ ಭಾವುಕ ಪತ್ರ

ಎಷ್ಟೋ ಸವಾಲುಗಳನ್ನ ಎದುರಿಸಿ ಚುನಾವಣೆ ಗೆಲ್ಲಲು ನಿಮ್ಮ ಪ್ರೀತಿ ಕಾರಣ. ಅಂಬಿಗಾಗಿ ಗುಡಿ ಕಟ್ಟಲು ಯಾರು ಹಣ ಕೇಳಿದವರಲ್ಲ. ಪುಣ್ಯಸ್ಮರಣೆ ದಿನ ನೀವು ಬಂದು ಉದ್ಘಾಟನೆ ಮಾಡಬೇಕು ಅಂತ ಕೇಳಿದ್ರು. ಈ ಪ್ರೀತಿಗೆ ನಾನೇನು ವಾಪಾಸ್ ಕೊಡಲಿ. ನೀವು ನನ್ನ ಇಟ್ಟ ವಿಶ್ವಾಸ ಎಂದಿಗೂ ಮರೆಯಲ್ಲ. ನನ್ನ ಉಸಿರೂ ಇರುವವರೆಗೂ ನಾನು ಮರೆಯಲ್ಲ ಎಂದು  ಮಾತಿನವೇಳೆ ಸುಮಲತಾ ಭಾವುಕರಾದರು.

ಕನ್ನಡ ಚಿತ್ರರಂಗ ಅಂದ್ರೆ 4 ಜನ, ರಾಜ್‌ಕುಮಾರ್‌, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಶ್. ಅಂಬಿ ಅಣ್ಣ ಸತ್ತಿಲ್ಲ ನಮ್ಮೊಂದಿಗೆ ಜೀವಂತವಾಗಿದ್ದಾರೆ ಪುತ್ಥಳಿ ನಿರ್ಮಿಸಿ ಅಭಿಮಾನ ತೋರಿದ ಎಲ್ಲರಿಗೂ ಧನ್ಯವಾದ. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್  ವಂದಿಸಿದರು.

ಡೈಲಾಗ್ ಹೇಳುವಂತೆ ದರ್ಶನ್‌ಗೆ ಒತ್ತಾಯಿಸಿದಾಗ ರಾಬರ್ಟ್ ಸಿನಿಮಾ ಡೈಲಾಗ್ ಹೇಳಿ ದಾಸ ಅಭಿಮಾನಿಗಳ ಕೋರಿಕೆ ಪೂರೈಸಿದರು ಕಂಚಿನ ಪುತ್ಥಳಿ ಅನಾವರಣಕ್ಕೆ ಯಶ್ ಗೈರಾಗಿದ್ದರು. ಕೆಜಿಎಫ್2 ಶೂಟಿಂಗ್ ನಲ್ಲಿ ಇದ್ದ ಕಾರಣ ರಾಕಿಂಗ್ ಸ್ಟಾರ್ ಬರಲು ಸಾಧ್ಯವಾಗಿಲ್ಲ.

ಅಭಿಮಾನಿಗಳಿಗೆ ವಿಡಿಯೋ ಮಾಡಿ ಕಳುಹಿಸಿರುವ ಯಶ್, ಮಂಡ್ಯ ಅಂಬಿ ಅಣ್ಣನಿಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದೀರಾ, ಈ ಪ್ರೀತಿ ಎಲ್ಲರಿಗೂ ಸಿಗಲ್ಲ. ಅಭಿಮಾನಿಗಳು ಅಂಬಿ ಅಣ್ಣ ಇಲ್ಲ ಅನ್ನೋ ಕೊರಗನ್ನ ನೀಗಿಸಿದ್ದೀರಾ, ಅವರ ನೆನಪನ್ನ ಜೀವಂತವಾಗಿಟ್ಟಿದ್ದೀರಾ ಎಂದು ಸ್ಮರಿಸಿಕೊಂಡರು.