Asianet Suvarna News Asianet Suvarna News

ಅದಿತಿ ಪ್ರಭುದೇವ ಮನೆ ಮುದ್ದು ನಾಯಿ ಚಾಕಲೇಟ್​ಗೆ ಬಾಯ್​ಫ್ರೆಂಡ್​ ಸಿಕ್ಕಾಗ ಏನಾಯ್ತು ನೋಡಿ...

ನಟಿ ಅದಿತಿ ಪ್ರಭುದೇವ ಅವರು ತಮ್ಮ ಸಾಕುನಾಯಿ ಚಾಕಲೇಟ್​ ಜೊತೆ ಪೆಟ್​ಷೋಗೆ ಹೋಗಿದ್ದು, ನಾಯಿಗೆ ಒಂದು ಬಾಯ್​ಫ್ರೆಂಡ್​ ಸಿಕ್ಕಿತು ಎಂದಿದ್ದಾರೆ. 
 

Aditi Prabhudevas dog  Chocolate   got a boyfriend in pet show suc
Author
First Published Dec 6, 2023, 4:04 PM IST

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. 

ನಟಿ ಅದಿತಿ ಮನೆಯಲ್ಲಿ ಚಾಕಲೇಟ್​ ಎನ್ನುವ ನಾಯಿ ಇದ್ದು, ಅದನ್ನು ತುಂಬಾ ಮುದ್ದಾಗಿ ಸಾಕುತ್ತಿದ್ದಾರೆ. ತಮ್ಮ ಎರಡನೆಯ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ನಾಯಿಯನ್ನು ಅವರು ಪೆಟ್​ ಫೆಸ್ಟಿವಲ್​ಗೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ  ಅದಿತಿ ಅವರ ಮುದ್ದು ಚಾಕಲೇಟ್​ ತನ್ನದೇ ತಳಿಯ ಇನ್ನೊಂದು ನಾಯಿಯ ಹತ್ತಿರ ಹೋಗಿ ಮುದ್ದಾಡಿದೆ. ಆಗ ಅದಿತಿ ಅವರು, ನಮ್ಮ ಚಾಕಲೇಟ್​ಗೆ ಬಾಯ್​ಫ್ರೆಂಡ್​ ಸಿಕ್ಕಿದ್ದಾನೆ ಅಂತ ಹೇಳಿದ್ರು. ಇದೇ ವೇಳೆ ಸಾಕು ನಾಯಿಗಳನ್ನು ಆಗಾಗ್ಗೆ ಹೀಗೆ ಹೊರಗಡೆ ಕರೆದುಕೊಂಡುಹೋಗುವಂತೆ ಸಲಹೆ ನೀಡಿದರು.

ಪಾಕಿಗಳ ಬೆಂಬಲಿಸ್ತಿರೋ ನೀನು ನನ್ನ ದ್ವೇಷಕ್ಕೂ ಅರ್ಹನಲ್ಲ: ಸಲ್ಮಾನ್​ ವಿರುದ್ಧ ತಿರುಗಿಬಿದ್ದ ಗಾಯಕ ಅಭಿಜಿತ್​!

ಇದೇ ವಿಡಿಯೋದಲ್ಲಿ ನಟಿ ಅದಿತಿಯವರು, ಉತ್ತರ ಕರ್ನಾಟಕದ ಮಾವಿನ ಕಾಯಿ ಪಳುವು ರೆಸಿಪಿ ಮಾಡಿ ತೋರಿಸಿದ್ದಾರೆ. ಉತ್ತರ ಕರ್ನಾಟಕದವರಾಗಿರುವ ಅದಿತಿಯವರು ಅಲ್ಲಿಯದ್ದೇ ಭಾಷೆಯನ್ನು ಮಾತನಾಡುತ್ತಾ ಈ ರೆಸಿಪಿ ಮಾಡಿ ತೋರಿಸಿದ್ದಾರೆ. ಈ ಹಿಂದೆ ಅವರು,  ತಲೆಗೂದಲು ಸೋಂಪಾಗಿ ಏನು ಮಾಡಬೇಕು ಎಂಬುದನ್ನು ತಿಳಿಸಿ ಕೊಟ್ಟಿದ್ದರು.  ಮನೆಯಲ್ಲಿಯೇ ಮಾಡಿಕೊಳ್ಳುವ ಸಿಂಪಲ್​ ಎಣ್ಣೆ ಹಾಗೂ ಅದನ್ನು ಬಳಸುವ ಬಗೆಯನ್ನು ಅವರು ಹೇಳಿಕೊಟ್ಟಿದ್ದರು. ಮೊದಲಿಗೆ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಬದಾಮಿ ಎಣ್ಣೆಯನ್ನು ಸೇರಿಸಬೇಕು. ಅದಕ್ಕೆ ಕಡಿಮೆ ಪ್ರಮಾಣದಲ್ಲಿ ಹರಳೆಣ್ಣೆ ಮಿಕ್ಸ್ ಮಾಡಬೇಕು. ಇದು ಜಿಡ್ಡುಜಿಡ್ಡಾಗಿ ಇರುವ ಕಾರಣ, ಸ್ವಲ್ಪವೇ ಬಳಸಬೇಕು. ಸ್ವಲ್ಪ ಮೆಂತೆ ಕಾಳು ಹಾಕಿ ಕಾಯಿಸಬೇಕು. ಅದಕ್ಕೆ ಬೇಕಿದ್ದರೆ ದಾಸವಾಳದ ಎಲೆ ಅಥವಾ  ಕರಿಬೇವಿನ ಎಲೆ ಹಾಕಬಹುದು. ನಂತರ ನಾಲ್ಕೈದು ಹನಿ ನಿಂಬೆ ರಸವನ್ನು ಮಿಕ್ಸ್​ ಮಾಡಬೇಕು. ಈಗ ಇದನ್ನು ಚೆನ್ನಾಗಿ ತಲೆಯ ಬುಡದವರೆಗೆ ಮಸಾಜ್​ ಮಾಡಬೇಕು. ತಲೆಯ ಜಿಡ್ಡು, ಹೊಟ್ಟು ಹೋಗುತ್ತದೆ. ಸ್ಕಾಪ್​ ಫ್ರೆಷ್​ ಆಗಿರುತ್ತದೆ. ಎಣ್ಣೆ ಹಚ್ಚಿಕೊಳ್ಳುವುದು ಮಾತ್ರವಲ್ಲದೇ ಮಸಾಜ್​ ಸರಿಯಾಗಿ ಮಾಡಿದರೆ ಕೂದಲು ಬೆಳೆಯಲು ಸಹಾಯವಾಗುತ್ತದೆ ಎಂದು ಹೇಳಿದ್ದರು. 

 ಬೆಲ್ಲದ ಟೀ ಮಾಡುವುದನ್ನೂ ಹೇಳಿಕೊಟ್ಟಿರುವ ನಟಿ,  ಸಾಮಾನ್ಯವಾಗಿ ಬೆಲ್ಲ ಹಾಕಿದರೆ ಹಾಲು ಒಡೆದು ಹೋಗುತ್ತದೆ. ಆದ್ದರಿಂದ ಹಾಲು ಒಡೆಯದೇ ಟೀ ಮಾಡುವುದು ಹೇಗೆ ಎಂದು ತೋರಿಸಿದ್ದರು.  ಅವರು ಹೇಳಿರುವ ಪ್ರಕಾರ, ಮೊದಲು ಸ್ಟವ್​ ಆನ್​ ಮಾಡಿ ನೀರು ಹಾಕಿಕೊಳ್ಳಬೇಕು. ನೀರು ಚೆನ್ನಾಗಿ ಕುದಿಯಲು ಬಿಡಬೇಕು. ಜಜ್ಜಿರುವ ಶುಂಠಿ ಸ್ವಲ್ಪ ಜಾಸ್ತಿನೇ ಹಾಕಬೇಕು. ನಂತರ ಹಾಲನ್ನು ಹಾಕಿಕೊಳ್ಳಬೇಕು. ಅದಕ್ಕೆ ಎಷ್ಟು ಬೇಕು ಅಷ್ಟು ಬೆಲ್ಲ ಹಾಕಬೇಕು. ಹಾಲಿಗೆ ಬೆಲ್ಲ ಹಾಕಿದ ಬಳಿಕ ಒಡೆಯುವ ಚಾನ್ಸಸ್​ ಇರುತ್ತೆ. ಇದೇ  ಕಾರಣಕ್ಕೆ ಕಲಕುತ್ತಲೇ ಇರಬೇಕು. ಚೆನ್ನಾಗಿ ಕಲುಕಿದ ಮೇಲೆ  ಟೀ ಪೌಡರ್​ ಹಾಕಬೇಕು. ನಂತರ ಸೋಸಿದರೆ ಮುಗಿಯಿತು. ಇದಕ್ಕೆ ಬ್ರೆಡ್​ ಸಕತ್​ ಕಾಂಬೀನೇಷನ್​ ಎಂದು ನಟಿ ಹೇಳಿದ್ದರು. 

ಸಿನಿಮಾದಲ್ಲಿ ಸಂಪೂರ್ಣ ಬೆತ್ತಲಾದ್ರೆ ಹೀಗೂ ಆಗತ್ತಾ? 'ಅನಿಮಲ್​' ನಟಿ ತೃಪ್ತಿ ದಿಮ್ರಿಗೆ ಡಬಲ್​ ಧಮಾಕಾ!

 

Follow Us:
Download App:
  • android
  • ios