ಸ್ಯಾಂಡಲ್‌ವುಡ್‌ ಅದ್ಭುತ ಕಲಾವಿದೆ ಸುಧಾರಾಣಿ ತಂದೆ ಎಚ್‌.ಎಸ್‌.ಗೋಪಾಲಕೃಷ್ಣ (93) ನಿನ್ನೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಗೋಪಾಲಕೃಷ್ಣ ಅವರ ಅಂತ್ಯಕ್ರಿಯೆಯನ್ನು ಒಂದು ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಹರೀಶ್ಚಂದ್ರ ಘಾಟ್‌ನಲ್ಲಿ ಮಾಡಲಾಗುತ್ತದೆ.

ಪ್ರತಿಯೊಬ್ಬ ಹೆಣ್ಣು ಮಗಳು ತನ್ನ ತಂದೆಗೆ ತುಂಬಾನೇ ಹತ್ತಿರವಾಗಿರುತ್ತಾರೆ. ಅಪ್ಪನೇ ಪ್ರಪಂಚ ಅಪ್ಪನೇ ರೋಲ್ ಮಾಡಲ್ ಎಲ್ಲವೂ ಹೌದು. ಫ್ಯಾಮಿಲಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸುಧಾರಾಣಿ ತಂದೆ ಅಂದರೆ ಪಂಚಪ್ರಾಣ. ಕೆಲ ವರ್ಷಗಳಿಂದ ತಂದೆಯ ಆರೋಗ್ಯಕ್ಷೇಮ ನೋಡಿಕೊಳ್ಳಲು ನರ್ಸ್‌ ಕವಿತಾರನ್ನು ನೇಮಕ ಮಾಡಿದ್ದರು.

ಹಿರಿಯ ಸಂಗೀತ ನಿರ್ದೇಶಕ ಜೀವರತ್ನ ಇನ್ನಿಲ್ಲ 

ತಂದೆಯ ಪ್ರತಿ ಹುಟ್ಟುಹಬ್ಬವನ್ನು ಸ್ಪೆಷಲ್‌ ಆಗಿ ಆಚರಿಸುವ ಸುಧಾರಾಣಿ, 2017ರಲ್ಲಿ ತಂದೆಯ ಹುಟ್ಟುಹಬ್ಬದ ದಿನ ತಾಯಿಗೂ ಕೇಕ್‌ ತಂದು ಕಟ್ ಮಾಡಿಸಿದರು. ತುಂಬಿದ ಕುಟುಂಬವನ್ನು ಅಗಲಿರುವ ಗೋಪಾಲಕೃಷ್ಣರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.