ಹುಲಿ ಮರಿ ದತ್ತು ಪಡೆದು ಸಾಕುತ್ತಿರುವ ನಟಿ ಸಂಯುಕ್ತಾ ಹೊರನಾಡು!
ಕನ್ನಡದ ನಟಿ ಸಂಯುಕ್ತಾ ಹೊರನಾಡು ಅವರು ಸಿನಿಮಾದ ಜೊತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಇದೀಗ 28 ತಿಂಗಳ ಹುಲಿ ಮರಿಯೊಂದನ್ನು ದತ್ತು ಪಡೆದುಕೊಂಡಿದ್ದಾರೆ.
ಬೆಂಗಳೂರು (ಸೆ.01): ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಬಹುತೇಕ ಸಿನಿಮಾ ತಾರೆಯರು ತಾವಾಯ್ತು, ತಮ್ಮ ಸಿನಿಮಾವಾಯ್ತು ಹಾಗೂ ಬಂದ ಆದಾಯದಲ್ಲಿ ದೊಡ್ಡ ದೊಡ್ಡ ಉದ್ಯಮಗಳನ್ನು ನಿರ್ಮಿಸಿಕೊಂಡು ಭದ್ರ ಕೋಟೆಯನ್ನೇ ನಿರ್ಮಿಸಿಕೊಂಡು ಅದರೊಳಗೆ ಸೇರಿಕೊಳ್ಳುತ್ತಾರೆ. ಆದರೆ, ಕನ್ನಡದ ನಟಿ ನಟಿ ಸಂಯುಕ್ತಾ ಹೊರನಾಡು ಸಿನಿಮಾ ಹಿರತಾಗಿಯೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಇದೀಗ ಬನ್ನೇರುಘಟ್ಟ ಜೈವಿಕ ಉದ್ಯಾನದ ಹುಲಿಯೊಂದನ್ನು ದತ್ತು ಪಡೆದುಕೊಂಡಿದ್ದಾರೆ.
ಹೌದು, ನಟಿ ಸಂಯುಕ್ತಾ ಹೊರನಾಡು (Samyukta Hornad) ಅವರು ಇಡೀ ಕನ್ನಡ ಜನತೆಯೇ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಸಿನಿಮಾದ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಿದ್ದ ಸಂಯುಕತಾ ಈಗ ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಪ್ರಾಣ ಫೌಂಡೇಶನ್ ಮೂಲಕ ಅನಾರೋಗ್ಯಪೀಡಿತ ಕಾಡು ಪ್ರಾಣಿಗಳ ಚಿಕಿತ್ಸೆಗಾಗಿ ಅಂಬುಲೆನ್ಸ್ ಸೇವೆ ಒದಗಿಸುತ್ತಿದ್ದಾರೆ. ಈ ಮೂಲಕ ನಟಿ ಸಂಯುಕ್ತಾ ಹೊರನಾಡು ಅವರು ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಫುಟ್ಬಾಲ್‌ಗೆ ನಿರಾಸಕ್ತಿ ತೋರಿದ ತಾಯಿ ವಿರುದ್ಧ ಬೇಸತ್ತು ಮರಿ ಆನೆಯ ನೀರಾಟ, ಮುದ್ದಾದ ದೃಶ್ಯ ಸೆರೆ!
ಸಿನಿಮಾಗಳಲ್ಲಿ ಮುದ್ದಾಗಿ ನಟಿಸುವ ಸಂಯುಕ್ತಾ ನೈಜ ಜೀವನದಲ್ಲಿ ಪ್ರಾಣಿ ಪ್ರಿಯೆ ಆಗಿದ್ದಾರೆ. ಅವರಿಗೆ ಬೆಕ್ಕು, ನಾಯಿ, ಮೊಲ ಹಾಗೂ ಸಣ್ಣ ಪ್ರಾಣಿಗಳನ್ನು ಕಂಡರೆ ಎತ್ತಿಕೊಂಡು ಮುದ್ದು ಮಾಡುತ್ತಾರೆ. ಇದೀಗ ಕಾಡು ಪ್ರಾಣಿಗಳ ಮೇಲೂ ತಮ್ಮ ಪ್ರೀತಿಯನ್ನು ತೋರಿಸಲು ಮುಂದಾಗಿರುವ ನಟಿ ಸಂಯುಕ್ತ ಹೊರನಾಡು ತಮ್ಮ ಒಡೆತನದ 'ಪ್ರಾಣ ಹಾಗೂ ಟೆಕೆಯಾನ್ ಸಂಸ್ಥೆ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 2 ವರ್ಷ 4 ತಿಂಗಳು ಪ್ರಾಯದ ಚಿಕ್ಕ ಹುಲಿ ಮರಿಯೊಂದನ್ನು ದತ್ತು ಪಡೆದಿದ್ದಾರೆ. ಇದಕ್ಕೆ ಆಹಾರ, ನಿರ್ವಹಣೆ ಹಾಗೂ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ದತ್ತು ಪಡೆದ ಕರಾರಿನಲ್ಲಿ ಒಪ್ಪಿಕೊಂಡಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ ಸಿಂಚನ (28 ತಿಂಗಳು) ಎಂಬ ಹೆಣ್ಣು ಹುಲಿ ಮರಿ ನರ ದೌರ್ಬಲ್ಯದಿಂದ ಬಳಲುತ್ತಿದೆ. ಇದಕ್ಕೆ ಎಷ್ಟೇ ಆರೈಕೆ ಮಾಡಿದರೂ ಚೇತರಿಕೆ ಕಾಣಿಸಿಕೊಳ್ಳಲಿಲ್ಲ. ಈಗ ಸಮಸ್ಯೆಯನ್ನು ಗುರುತಿಸಿದ ವೈದ್ಯರು ಇದನ್ನು ಬಹುದಿನಗಳವರೆಗೆ ಬೇರೆ ಪ್ರಾಣಿಗಳೊಂದಿಗೆ ಬೆರೆಯಲು ಬಿಡದೇ ಪ್ರತ್ಯೇಕವಾಗಿ, ಆಹಾರ, ನಿರ್ವಹಣೆ ಹಾಗೂ ಚಿಕಿತ್ಸೆಯನ್ನು ನೋಡುತ್ತಾ ಪಾಲನೆ ಮಾಡಬೇಕಾಗಿದೆ. ಈ ಹುಲಿಯನ್ನು ಇತರೆ ಹುಲಿಗಳೊಂದಿಗೆ ಬಿಟ್ಟಲ್ಲಿ ಅವುಗಳೊಂದಿಗೆ ಹೋರಾಡಲು ಶಕ್ತಿ ಇಲ್ಲದೇ, ಹೊಂದಿಕೊಳ್ಳಲೂ ಆಗದೇ ಬೇರೆ ಹುಲಿಗಳ ದಾಳಿಗೆ ಒಳಗಾಗಿ ಸತ್ತು ಹೋಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಣ ಫೌಂಡೇಶನ್‌ನಿಂದ ಈ ಹುಲಿಮರಿಯನ್ನು ದತ್ತು ಪಡೆದು ಪೋಷಣೆಗೆ ಒಪ್ಪಿಕೊಂಡಿದ್ದಾರೆ.
ಪ್ರಾಣ ಅನಿಮಲ್ ಫೌಂಡೇಶನ್ ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳಿಗೆ ಹುಲಿ ದತ್ತು ಪಡೆಯಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಮ್ಮೊಂದಿಗೆ ಈ ಎರಡೂ ಸಂಸ್ಥೆಗಳು ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ. ಆರೋಗ್ಯ ಸಮಸ್ಯೆಯಿಮದ ಬಳಲುತ್ತಿರುವ ಹುಲಿ ದತ್ತು ಪಡೆಯಲು ಹಾಗೂ ಪೋಷಣೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಎಂದು ಟೆಕೆಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಹೇಳಿದ್ದಾರೆ.
ನಿವೇದಿತಾ ಗೌಡ: ಗಂಡ ಬಿಟ್ಟರೆ ಜೀವನವೇ ಮುಗಿತು ಅಂತಾರೆ, ನೀವು ತುಂಬಾ ಖುಷಿಯಾಗಿದ್ದೀರಿ!
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಸಂಯುಕ್ತಾ ಹೊರನಾಡು ಅವರು, 'ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ದತ್ತು ಪಡೆದ 28 ತಿಂಗಳ ಹೆಣ್ಣು ಮರಿ ಸಿಂಚನಾ ನರವೈಜ್ಞಾನಿಕ ದೌರ್ಬಲ್ಯದಿಂದ ಬಳಲುತ್ತಿದೆ. ಇದಕ್ಕೆ ಕಾಡಿನಲ್ಲಿ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ. ಬಿಬಿಪಿಯ ರಕ್ಷಣಾ ಕೇಂದ್ರದಲ್ಲಿ ಮರಿಯನ್ನು ಆರೈಕೆ ಮಾಡಲಾಗುತ್ತಿದೆ. ದತ್ತು ಕಾರ್ಯಕ್ರಮವು ಮರಿಯ ದೈನಂದಿನ ಆಹಾರ ಅಗತ್ಯತೆಗಳು, ನಿರ್ವಹಣೆ ಮತ್ತು ಪಶುವೈದ್ಯಕೀಯ ಆರೋಗ್ಯ ಆರೈಕೆ ವೆಚ್ಚಗಳನ್ನು ಒಳಗೊಂಡಿದೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.