90 ದಿನ ಪೊಲೀಸರ ಕಸ್ಟಡಿಯಲ್ಲಿ ಏನಾಯ್ತು ಎಂದು ಬರೆದಿಟ್ಟ ನಟಿ ರಾಗಿಣಿ ದ್ವಿವೇದಿ; ಪುಸ್ತಕ ಬರೋದು ನಿಜವೇ?

ನೆಗೆಟಿವ್ ಎನರ್ಜಿ, ಮಹಿಳೆಯರು ಯಾಕೆ ಮತ್ತೊಬ್ಬ ಮಹಿಳೆಯನ್ನು ಸಪೋರ್ಟ್ ಮಾಡಲ್ಲ ಹಾಗೇ 90 ದಿನ ಕಸ್ಟಡಿಯಲ್ಲಿ ಏನು ಮಾಡಿದರು ಎಂದು ರಾಗಿಣಿ ವಿವರಿಸಿದ್ದಾರೆ.

Actress Ragini Dwivedi wrote her 90 days custody experience vcs

15 ವರ್ಷಗಳ ಸಿನಿ ಜರ್ನಿಯಲ್ಲಿ 40 ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ರಾಗಿಣಿ ದ್ವಿವೇದಿ 90 ದಿನಗಳ ಕಸ್ಟಡಿಯಲ್ಲಿ ಏನೆಲ್ಲಾ ಆಯ್ತು ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ನೆಗೆಟಿವ್ ಜನರು, ಮಹಿಳೆಯರ ಬೆಂಬಲ ಮತ್ತು ಪುಸ್ತಕದ ಬಗ್ಗೆ ಹಂಚಿಕೊಂಡಿದ್ದಾರೆ.

'ಹೇಳಿಕೊಳ್ಳುವುದಕ್ಕೆ ಬೇಸರವಾಗುತ್ತದೆ ಆದರೆ ಎಲ್ಲೆಡೆ ನೆಗೆಟಿವ್ ಎನರ್ಜಿ ತುಂಬಾನೇ ಇದೆ. ನಾನು ಸೋಲೋ ಸಿನಿಮಾ ಮಾಡಲು ಆರಂಭಿಸಿದಾಗ ಅನೇಕ ನಟರಿಗೆ ಅಭದ್ರ ಫೀಲ್ ಆಯ್ತು. ಸ್ವಲ್ಪನೂ ಸಪೋರ್ಟ್ ಮಾಡುತ್ತಿರಲಿಲ್ಲ. ನನ್ನ ನಿರ್ಮಾಪಕರಿಗೆ ಕರೆ ಮಾಡಿದ ಅನೇಕರು ಪ್ರಶ್ನೆ ಮಾಡಿದ್ದಾರೆ ಯಾಕೆ ನೀವು ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿರುವುದು ಈ ನಾಯಕಿಯನ್ನು ಹೀರೋ ಅಗಿ ತೋರಿಸುತ್ತಿರುವುದು ಎಂದು. ಅವರ ಮಾತುಗಳನ್ನು ಕೇಳಿ ಮತ್ತಷ್ಟು ಬೆಳೆಯಬೇಕು ಅನಿಸುತ್ತದೆ. ನನ್ನ ಜರ್ನಿ ಬಗ್ಗೆ ಇವತ್ತು ಪ್ರಶ್ನೆ ಮಾಡಿದರೆ ಅದರ ಹಿಂದಿರುವ ಸೀಕ್ರೆಟ್‌ ಏನೆಂದು ಕೇಳುತ್ತಾರೆ. ಪಾಸಿಟಿವ್ ಆಗಿರಬೇಕು ಹಾಗೂ ಸ್ಟ್ರಾಂಗ್ ಆಗಿರಬೇಕು. ಜನರು ನಮ್ಮನ್ನು ಕೆಳಗೆ ಹಾಕಲು ಕಾಯುತ್ತಾರೆ. ಮತ್ತೊಬ್ಬರನ್ನು ಕೆಳಗೆ ಹಾಕುವುದೇ ಕೆಲವರ ಕೆಲಸ. ಈ ರೀತಿ ನೆಗೆಟಿವಿಟಿ ನನಗೆ ಅರ್ಥ ಆಗುವುದಿಲ್ಲ. ಎಂದೂ ಒಬ್ಬರಿಗೆ ಕೆಟ್ಟದನ್ನು ಬಯಸಿಲ್ಲ. ದಿನದಲ್ಲಿ 24 ಗಂಟೆ ಮಾತ್ರ ಇರುವುದು ಯಾಕೆ ನೆಗೆಟಿವ್ ಯೋಚನೆ ಮಾಡಿ ವೇಸ್ಟ್‌ ಮಾಡಬೇಕು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಬಾತ್‌ರೂಮ್‌ನಲ್ಲಿ ಬಾಡಿಸೂಟ್‌ ಧರಿಸಿ ಕುಳಿತಿರುವ ನಟಿ ರಾಗಿಣಿ ದ್ವಿವೇದಿ ಫೋಟೋ ವೈರಲ್

'ನಾನು ತುಂಬಾ ಸೆನ್ಸಿಟಿವ್ ಮತ್ತು ಒಂಟಿ ವ್ಯಕ್ತಿ. ನಾನು ಅನುಭವಿಸಿರುವ ಕ್ಷಣಗಳಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಕೆಲವೊಮ್ಮೆ ಕೆಲಸ ಬಿಟ್ಟು ಬಿಡೋಣ ಅನಿಸಿದೆ. ಒಬ್ಬಳೆ ಜೋರಾಗಿ ಅತ್ತಿರುವೆ. ವೈದ್ಯರನ್ನು ಸಂಪರ್ಕಿಸಿರುವೆ. ನನ್ನನ್ನು ನಾನು ಹೀಲಿಂಗ್ ಮಾಡಿಕೊಂಡು ಗುರುಗಳನ್ನು ಭೇಟಿ ಮಾಡಿರುವೆ. ಈ  ರೀತಿ ಸಮಯ ಎದುರಾದರೆ ನಾವು ನಮ್ಮ ಜನರ ಜೊತೆ ಮಾತನಾಡಬೇಕು. ಜನರ ಜೊತೆ ಮಾತನಾಡಿದರೆ ಮಾತ್ರ ನಮ್ಮ ನೋವಿ ಅರ್ಥ ಮತ್ತು ಅದನ್ನು ಇಳಿಸಿಕೊಳ್ಳಲು ಗೊತ್ತಾಗುವುದು. ಕುಟುಂಬದ ಸಹಾಯ ಮತ್ತು ಶಕ್ತಿಯಿಂದ ನಾನು ಚೇತರಿಸಿಕೊಂಡಿರುವೆ ಎಂದು ರಾಗಿಣಿ ಹೇಳಿದ್ದಾರೆ. 

ಸಾಮಾನ್ಯವಾಗಿ ಮಹಿಳೆಯರು ಅವರನ್ನು ಅವರೇ ಕಡೆಗಣಿಸಿಕೊಳ್ಳುತ್ತಾರೆ. ನಮಗೆ ನಾವು ಹೆಚ್ಚಿನ ಪ್ರಮುಖ್ಯತೆ ನೀಡುವ ಬದಲು ಮತ್ತೊಬ್ಬರಿಗೆ ಪ್ರಮುಖ್ಯತೆ ನೀಡುತ್ತೇವೆ. ನಮ್ಮನ್ನು ನಾನು ಮೊದಲು ಪ್ರೀತಿಸಬೇಕು ನಮ್ಮನ್ನು ನಾವು ಕೇರ್ ಮಾಡಬೇಕು. ಮಹಿಳೆಯರು ಮತ್ತೊಮ್ಮೆ ಮಹಿಳೆ ಪರವಾಗಿ ನಿಲ್ಲಬೇಕು. ಮೀಡಿಯಾ ಗ್ಯಾದರಿಂಗ್‌ನಲ್ಲಿ ನೋಡಿದರೆ ಒಬ್ಬ ನಾಯಕನ ಪರವಾಗಿ ಇನ್ನಿತರ ನಾಯಕರು ನಿಲ್ಲುವುದನ್ನು ನೋಡಬಹುದು. ಆದರೆ ನಾಯಕಿಯರು ಹಾಗೆ ಮಾಡುವುದನ್ನು ನಾನು ನೋಡಿಲ್ಲ. ಒಂದು ಸಲ ಒಬ್ಬರ ಪರವಾಗಿ ನಿಂತುಕೊಂಡರೆ ಖಂಡಿತಾ ಬದಲಾವಣೆ ಕಾಣಬಹುದು ಎಂದಿದ್ದಾರೆ ರಾಗಿಣಿ. 

ಹಿಂದಿ ಚಿತ್ರರಂಗಕ್ಕೆ ಹಾರಿದ ಗಿಣಿ; 2023 ನನಗೆ ಅದೃಷ್ಟದ ವರ್ಷ ಎಂದು ರಾಗಿಣಿ ದ್ವಿದೇದಿ

90 ದಿನಗಳ ಕಾಲ ಕಸ್ಟಡಿಯಲ್ಲಿ ಇರುವಾಗ ಜೀನದಲ್ಲಿ ದೊಡ್ಡ ಪಾಠ ಕಲಿತಿರುವೆ. ಆ ರೀತಿ ಕಷ್ಟ ನನ್ನ ಶತ್ರುಗೂ ಬೇಡ ಎಂದು ಪ್ರಾರ್ಥಿಸುವೆ. ಹಾಗಂತ ಸೈಲೆಂಟ್ ಆಗಿ ಕೂರುವ ವ್ಯಕ್ತಿ ನಾನಲ್ಲ. 90 ದಿನಗಳ ಕಾಲ ಬರೆಯುತ್ತಿದ್ದೆ. ಅದೊಂದು ರೀತಿ ಥೆರಪಿಯಾತ್ತು. ಪ್ರತಿಯೊಂದು ಕ್ಷಣ ಪ್ರತಿಯೊಂದು ನಿಮಿಷ ಹೇಗಿತ್ತು ಎಂದು ನಾನು ಬರೆಯುತ್ತಿದ್ದೆ ನನ್ನ ಭಾವನೆಗಳನ್ನು ವ್ಯಕ್ತ ಪಡಿಸುತ್ತಿದ್ದೆ. ಇದನ್ನು ಪುಸ್ತಕವಾಗಿ ಕನ್ವರ್ಟ್ ಮಾಡಬೇಕು ಅನ್ನೋದು ನನ್ನ ಅಸೆ ಅಗದೆ. ಓದಲು ತುಂಬಾ ಇಂಟ್ರೆಸ್ಟಿಂಗ್ ಆಗಿರುತ್ತದೆ ಏಕೆಂದರೆ 100% ಸತ್ಯ ಹೇಳುತ್ತದೆ. ನಾನು ಇಷ್ಟು ದಿನಗಳ ಕಾಲ ಮೌನವಾಗಿದ್ದೆ ಅಂದ್ರೆ ಅದಕ್ಕೊಂದು ಕಾರಣ ಇದೆ ಶೀಘ್ರದಲ್ಲಿ ಕಾರಣ ತಿಳಿಯಲಿದೆ ಎಂದು ರಾಗಿಣಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios