Asianet Suvarna News Asianet Suvarna News

ಆ ದುರ್ಘಟನೆ ನಡೆದಾಗ ನಾನು ಸೆಟ್‌ನಲ್ಲಿಇರಲಿಲ್ಲ: ನಟಿ ರಚಿತಾ ರಾಮ್

ಲವ್ ಯು ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ನಡೆದ ಘಟನೆ ಬಗ್ಗೆ ಮೌನ ಮುರಿದ ರಚಿತಾ ರಾಮ್. ನಿರ್ಮಾಪಕ ಗುರುದೇಶಪಾಂಡೆ ಇನ್ನೂ ಸಿಕ್ಕಿಲ್ಲ.

Actress Rachita Ram breaks silence about Love you rachu shooting incident vcs
Author
Bangalore, First Published Aug 15, 2021, 3:41 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ ಕೃಷ್ಣ ಅಜಯ್ ರಾವ್ ಹಾಗೂ ರಚಿತಾ ರಾಮ್ ಜೋಡಿಯಾಗಿ ಅಭಿನಯಿಸುತ್ತಿರುವ ಸಿನಿಮಾ 'ಲವ್ ಯು ರಚ್ಚು' ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ರಾಮನಗರದಲ್ಲಿ ಚಿತ್ರೀಕರಣದ ವೇಳೆ ಫೈಟರ್ ವಿವೇಕ್‌ಗೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಈ ಪ್ರಕರಣದ ಸಮಯದಲ್ಲಿ ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ, ಸೆಲ್ಫಿ ಹಂಚಿಕೊಳ್ಳುತ್ತಿದ್ದಾರೆ ಆದರೆ ಘಟನೆ ಬಗ್ಗೆ ಮಾತನಾಡಿಲ್ಲ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೀಗ ರಚಿತಾ ಸ್ಪಷ್ಟನೆ ನೀಡಿದ್ದಾರೆ. 

'ನೀವೆಲ್ಲರೂ ಕ್ಷೇಮವಾಗಿದ್ದೀರಿ ಅಂತ ನಂಬಿದ್ದೀನಿ. ದಯವಿಟ್ಟು ಎಲ್ಲರೂ ಹುಷಾರಾಗಿರಿ ಅಂತ ನಿಮ್ಮೆಲ್ಲರಲ್ಲಿ ನಾನು ರಿಕ್ವೆಸ್ಟ್‌ ಮಾಡುತ್ತೇನೆ. ಲವ್ ಯು ರಚ್ಚು ಸಿನಿಮಾ ಸೆಟ್‌ನಲ್ಲಿ ಒಂದು ನಡೆಯವಾರದ ಘಟನೆ ನಡೆದಾಗಿನಿಂದ, ಆ ಅಘಾತ ನನ್ನನ್ನು ಸೈಲೆಂಟ್ ಆಗುವಂತೆ ಮಾಡಿತ್ತು. ಆದರೆ ನನ್ನ ಮೌನ ಕೆಲವರಿಗೆ ತಪ್ಪಾಗಿ ಅರ್ಥವಾಗಿದೆ, ತಪ್ಪಾಗಿ ಬಳಕೆ ಆಗುತ್ತಿದೆ. ಇದು ನನಗೆ ನಿಜಕ್ಕೂ ನೋವು ಕೊಟ್ಟಿದೆ' ಎಂದು ರಚಿತಾ ರಾಮ್ ಬರೆದುಕೊಂಡಿದ್ದಾರೆ. 

ಸಂತಾಪ ಹೇಳಿಲ್ಲ ಸೆಲ್ಫಿ ಪೋಸ್ಟ್ ಮಾಡ್ತಿದ್ದಾರೆ; ರಚಿತಾ ರಾಮ್‌ ಮೇಲೆ ನೆಟ್ಟಿಗರು ಗರಂ!

'ಆ ದುರ್ಘಟನೆ ನಡೆದಾಗ ನಾನು ಸೆಟ್‌ನಲ್ಲಿ ಇರಲಿಲ್ಲ. ಆಗಸ್ಟ್‌ 2ನೇ ತಾರೀಖಿನಿಂದ ನಾನು ಶಬರಿ ಸಿನಿಮಾ ಶೂಟಿಂಗ್‌ಗೋಸ್ಕರ ಮೈಸೂರಿನಲ್ಲಿದ್ದೆ. ಆ ಘಟನೆ ನಡೆದಾಗ ನಾನು ಆ ಜಾಗದಲ್ಲಿ ಇರ್ಲಿಲ್ಲ. ಸತ್ಯವನ್ನು ಒಂದೇ ಒಂದು ಸಲ ಪುನರ್‌ ಪರಿಶೀಲಿಸಿದ್ದರೆ ನನ್ನ ಬಗ್ಗೆ ಕಟ್ಟ ಕಮೆಂಟ್‌ಗಳು ಬರೆಯೋ, ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡೋ ಪ್ರಮೇಯ ಬದಗಿ ಬರ್ತಿರಲಿಲ್ಲ ಅನಿಸುತ್ತದೆ. ಆ ಜಾಗದಲ್ಲಿ ನಾನು ಇರಲಿ, ಇಲ್ಲದಿರಲಿ ನಮ್ಮ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ದುರ್ಘಟನೆ ಬಲಿಯಾಗಿದ್ದಾರೆ ಅನ್ನೋ ನೋವು ನನ್ನನ್ನೂ ಕಾಡುತ್ತಿದೆ. ಆ ಕುಟುಂಬಕ್ಕಾಗಿರುವ ನಷ್ಟಕ್ಕೆ ನನ್ನ ವಿಷಾದವಿದೆ. ಈ ದುಃಖವನ್ನು ಭರಿಸೋ ಶಕ್ತಿ ಭಗವಂತ ಆ ಕುಟುಂಬಕ್ಕೆ ಕೊಡಲಿ ಅಂತ ನಾನು ಬೇಡಿಕೊಳ್ಳುತ್ತೇನೆ. ನನ್ನನ್ನು ಬೆಳಸಿರುವ ಜನ ನನ್ನ ಮಾತುಗಳನ್ನು ನಂಬುತ್ತಾರೆ ಅಂತ ನಂಬಿದ್ದೀನಿ. ಆರೋಪಗಳು ಎನೇ ಇದ್ರೂ ತಪ್ಪು ಸರಿಗಳ ಲೆಕ್ಕ ಆ ಭಗವಂತನ ಬಳಿ ಇರುತ್ತದೆ ಎಂದೂ ನಂಬಿದ್ದೀನಿ' ಎಂದು ರಚಿತಾ ರಾಮ್ ಹೇಳಿದ್ದಾರೆ.

 

Follow Us:
Download App:
  • android
  • ios