ಮಾಜಿ ಸಚಿವ ಹಾಗೂ ಹಿರಿಯ ಜೆಡಿಎಸ್ ಮುಖಂಡ ಇದೀಗ ದಳ ಪಾಳಯ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಉಪ ಚುನಾವಣೆ ಬಿರುಸಾಗಿರುವ ಬೆನ್ನಲ್ಲೇ  ಈ ನಿರ್ಧಾರ ಕೈಗೊಂಡಿದ್ದಾರೆ. 

ಬಸವಕಲ್ಯಾಣ (ಮಾ.31): ಜೆಡಿಎಸ್‌ ಹಿರಿಯ ನಾಯಕ, ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ಮಂಗಳವಾರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. 

ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಾಲಾ ಬಿ. ನಾರಾಯಣರಾವ್‌ ಅವರು ನಾಮಪತ್ರ ಸಲ್ಲಿಕೆಯ ನಿಮಿತ್ತ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಸಿಂಧ್ಯಾ ಕಾಂಗ್ರೆಸ್‌ ಸೇರ್ಪಡೆಯಾದರು. 

ಏ.2ರ ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಬಗ್ಗೆ ಬಹಿರಂಗಪಡಿಸಿದ ಮುಖಂಡ

ಕಳೆದ ಬಾರಿ ಜೆಡಿಎಸ್‌ನಿಂದ ಬಸವಕಲ್ಯಾಣ ಕ್ಷೇತ್ರಕ್ಕೆ ಆಯ್ಕೆ ಬಯಸಿ ಸೋಲುಂಡಿದ್ದ ಅವರು ಇಲ್ಲಿನ ಮರಾಠಾ ಸಮುದಾಯವದರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದು, ಕಾಂಗ್ರೆಸ್‌ಗೆ ಮರಾಠ ಮತಗಳನ್ನು ಸೆಳೆದುಕೊಡುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದೆನ್ನಲಾಗಿದೆ.