ಮಲಗುವ ಮುನ್ನ  ಮೇಘನಾ ರಾಜ್​ ಏನೆಲ್ಲಾ ಮಾಡ್ತಾರೆ?  ವಿಡಿಯೋ ಮಾಡಿ ತೋರಿಸಿದ ನಟಿ ಹೇಳಿದ್ದೇನು?   

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಇವರ ಬದುಕಿನಲ್ಲಿ ಬರಸಿಡಿಲು ಬಡಿದಿತ್ತು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ವರ್ಷಗಳ ಬಳಿಕ ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ ಮೇಘನಾ ರಾಜ್‌. ಕೆಲ ದಿನಗಳ ಹಿಂದಷ್ಟೇ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡು ಸುದ್ದಿಯಾಗಿದ್ದರು. 

ಸಕತ್‌ ಸ್ಮಾರ್ಟ್‌ ಕಾಣಿಸುತ್ತಿದ್ದ ನಟಿಯರನ್ನು ಫ್ಯಾನ್ಸ್‌ ಹಾಡಿ ಹೊಗಳಿದರು. ತಮ್ಮ ಯೂಟ್ಯೂಬ್​ ಹೊಂದಿರೋ ನಟಿ ಮೇಘನಾ ಕೆಲವೊಂದು ವಿಷಯಗಳನ್ನು ಅದರಲ್ಲಿ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಅದರಲ್ಲಿಯೂ ಬ್ಯೂಟಿಗೆ ಸಂಬಂಧಿಸಿದ ಸುದ್ದಿಗಳು ಹಾಗೂ ತಾವು ಬಳಸುವ ಕೆಲವೊಂದು ಪ್ರಾಡಕ್ಟ್​ಗಳ ಬಗ್ಗೆಯೂ ತಿಳಿಸಿಕೊಡುತ್ತಾರೆ.

ವಿಶ್ವದ ಏಕಮಾತ್ರ 7 ಸ್ಟಾರ್​ ಹೋಟೆಲ್​ನಲ್ಲಿ ಡಾ.ಬ್ರೋ: ಟಾಯ್ಲೆಟ್​ನಿಂದ ಹಿಡಿದು ಮುಟ್ಟಿದ್ದೆಲ್ಲವೂ ಚಿನ್ನವೇ!

ಇದೀಗ ಅಭಿಮಾನಿಗಳ ಕೋರಿಕೆ ಮೇರೆಗೆ ಬೆಡ್​ ಟೈಂ ರುಟೀನ್​ ಅಂದರೆ ರಾತ್ರಿ ಮಲಗುವ ಮುನ್ನ ಏನೆಲ್ಲಾ ಮಾಡುತ್ತೇವೆ ಎಂಬ ಬಗ್ಗೆ ತಿಳಿಸಿ ಕೊಟ್ಟಿದ್ದಾರೆ. ಶೂಟಿಂಗ್​ ಮುಗಿದ ಮೇಲೆ ಮನೆಗೆ ಬಂದು ಮೊದಲನೆಯ ಕೆಲಸ ಮೇಕಪ್​ ತೆಗೆಯುವುದು. ಪ್ರತಿಯೊಬ್ಬರು ಈ ಕೆಲಸವನ್ನು ಮಾಡಲೇಬೇಕು. ಮೇಕಪ್​ ಅನ್ನು ಮುಖದ ಮೇಲಿನಿಂದ ಸಂಪೂರ್ಣವಾಗಿ ತೆಗೆದ ಮೇಲಷ್ಟೇ ಮಲಗಿಕೊಳ್ಳಬೇಕು. ಇಲ್ಲದಿದ್ದರೆ ಚರ್ಮಕ್ಕೆ ಹಾನಿಯಾಗುತ್ತದೆ ಎಂದಿರುವ ನಟಿ, ಈ ಮೇಕಪ್​ ತೆಗೆಯಲು ತಾವು ಅನುಸರಿಸುವ ಕ್ರಮಗಳ ಬಗ್ಗೆ ಹೇಳಿದ್ದಾರೆ. ಇದಕ್ಕೂ ಮುನ್ನ, ಮನೆಗೆ ಬಂದ ತಕ್ಷಣ ಕನ್​ಫರ್ಟ್​ ಎನಿಸುವ ಬಟ್ಟೆ ಹಾಕಬೇಕು ಎನ್ನುವುದು ಮೇಘನಾ ಅವರ ಸಲಹೆ. 

ಇದೇ ವೇಳೆ ಮಗ ರಾಯನ್​ ಆಟಿಕೆ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದನ್ನು ತೋರಿಸಿದ್ದಾರೆ. ಆಟಿಕೆ ಸಾಮಾನುಗಳನ್ನೆಲ್ಲಾ ಸರಿಯಾಗಿ ಜೋಡಿಸಿ ಇಡುವಷ್ಟರಲ್ಲಿಯೇ ಮತ್ತೆ ಬಂದು ಚೆಲ್ಲಾಪಿಲ್ಲಿ ಮಾಡಿದ್ದಾನೆ. ಇದೇ ವೇಳೆ ಅದೂ ತಮ್ಮ ರುಟೀನ್​ ಕೆಲಸಗಳಲ್ಲಿ ಒಂದು ಎಂದು ಹೇಳಿದ್ದಾರೆ. ನಂತರ ರಾತ್ರಿ ಮೊಸರು, ಚಿಕನ್​, ಉಪ್ಪಿನ ಕಾಯಿ ಅನ್ನ ಊಟ ಮಾಡಿದ್ದಾರೆ. ಇಷ್ಟು ಇದ್ದರೆ ತಮಗೆ ಇನ್ನು ಏನೂ ಬೇಡ, ಮೂರು ಹೊತ್ತೂ ಇದನ್ನೇ ಬೇಕಿದ್ದರೆ ತಿನ್ನುತ್ತೇನೆ ಎಂದಿದ್ದಾರೆ. ಇದಾದ ಬಳಿಕ ತಮ್ಮ ರುಟೀನ್​ ಕೆಲಸ ಎಂದರೆ, ಟಿ.ವಿ ನೋಡಿ, ಮ್ಯೂಸಿಕ್​ ಕೇಳುವುದು ಹಾಗೂ ನಾಳೆಗೆ ಏನು ಮಾಡಬೇಕು ಎನ್ನುವ ಲಿಸ್ಟ್​ ಮಾಡಿ ಮಲಗೋದು ಎಂದು ನಟಿ ಹೇಳಿದ್ದಾರೆ.

ಅಭಿಮಾನಿಯ ಫೋನ್​ ಕಸಿದು ಎಲ್ಲಾ ಡಿಲೀಟ್​ ಮಾಡೋದಾ ನಟ ಅಜಿತ್​? ವೈರಲ್​ ವಿಡಿಯೋಗೆ ಫ್ಯಾನ್ಸ್​ ಗರಂ

YouTube video player