ಖ್ಯಾತ ನಟಿ ಮಂಜುಳಾ, ಮೊದಲ ವಿಚ್ಛೇದನದ ಬಳಿಕ ಮತ್ತೊಂದು ಮದುವೆಗೆ ಸಿದ್ಧರಾಗಿದ್ದರು. ಅಡುಗೆ ಮಾಡುವಾಗ ಗ್ಯಾಸ್ ಆನ್ ಮಾಡಿ ಮರೆತಿದ್ದರಿಂದ ಬೆಂಕಿ ಅವಘಡ ಸಂಭವಿಸಿತು. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ 1986 ಸೆಪ್ಟೆಂಬರ್ 19 ರಂದು ಮಂಜುಳಾ ನಿಧನರಾದರು. ಕೊನೆಯುಸಿರಿನವರೆಗೂ ಬದುಕುವ ಆಸೆ ಅವರಿಗಿತ್ತು.
ನಟಿ ಮಂಜುಳಾ (Manjula) ಅವರಿಗೆ ಆಗ 34 ವರ್ಷ. ಖ್ಯಾತ ನಟಿಯಾಗಿದ್ದ ಮಂಜುಳಾ (Manjula) ಅವರಿಗೆ ಅಮೃತಂ ಜೊತೆ ಆಗಿದ್ದ ಮೊದಲ ಮದುವೆ ಸುಖ ನೀಡಿರಲಿಲ್ಲ. ಅದಾಗಲೇ ಆ ಮದುವೆ ಮುರಿದು ಬಿದ್ದು, ಚಾಮರಾಜನಗರದ ಹುಡುಗನೊಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ನಟಿ ಮಂಜುಳಾ. ಆ ಪ್ರೀತಿ ಮದುವೆ ಆಗುವ ಹಂತದಲ್ಲಿತ್ತು. ಆವತ್ತು ಸಾಯಂಕಾಲದ ಹೊತ್ತಿಗೆ, ಮಂಜುಳಾ ಅವರ ಮಗ ಬಂದಿದ್ದ. ಅಷ್ಟರಲ್ಲಾಗಲೇ ಗ್ಯಾಸ್ ಸ್ಟವ್ ಆನ್ ಮಾಡಿದ್ದ ಮಂಜುಳಾ ಮರೆತು ಮಾತನಾಡುತ್ತ ನಿಂತುಬಿಟ್ಟಿದ್ದರು.
ಎಷ್ಟೋ ಹೊತ್ತಿನ ಬಳಿಕ ಮತ್ತೆ ಅಡುಗೆಮನೆಗೆ ಹೋದ ನಟಿ ಮಂಜುಳಾ, ಆಗಲೇ ಗ್ಯಾಸ್ ಸ್ಟವ್ ಆನ್ ಮಾಡಿದ್ದು ಮರೆತು, ಬೆಂಕಿ ಕಡ್ಡಿ ಗೀರಿದ್ದಾರೆ. ತಕ್ಷಣ ಹೊತ್ತಿಕೊಂಡ ಬೆಂಕಿ ಅವರ ಮೈಗೆಲ್ಲಾ ಹಬ್ಬಿ ನಟಿ ಮೈ ಬಹಳಷ್ಟು ಸುಟ್ಟುಹೋಗಿದೆ. ಆಗ ಅಲ್ಲೇ ಹತ್ತಿರದಲ್ಲಿದ್ದ ಅವರ ಅತ್ತಿಗೆ ಹಾಗು ಕೆಲವು ಮಕ್ಕಳಿಗೆ ನಟಿ ಮಂಜುಳಾ ಚೀರಾಟ ಕೇಳಿ ಏನು ಮಾಡಬೇಕೆಂದು ತಕ್ಷಣಕ್ಕೆ ಹೊಳೆಯಲಿಲ್ಲ. ಅಲ್ಲೆ ಇದ್ದ ಬೆಡ್‌ಶೀಟ್‌ಗಳನ್ನು ಮೈಗೆ ಸುತ್ತಿ ಬೆಂಕಿ ನಂದಿಸಿದ್ದಾರೆ. ಆದರೆ, ಅದಾಗಲೇ ಸಾಕಷ್ಟು ಬೆಂದು ಹೋಗಿದ್ದರು ಮಂಜುಳಾ.
ನಟಿ ಮಂಜುಳಾ ಸಾವಿನ ಸತ್ಯ ಕೊನೆಗೂ ಬಯಲಾಯ್ತು; ಆ ಹಿರಿಯ ನಟ ಹೇಳಿದ್ದೇನು?
ಆಟೋದಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಂಜುಳಾ ಅವರು ಕುಡಿಯಲು ನೀರು ಕೇಳುತ್ತಿದ್ದರಂತೆ. 'ಅಯ್ಯೋ ನನಗೆ ಕುಡಿಯಲು ಸ್ವಲ್ಪ ನೀರು ಕೊಡಿ..' ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದರಂತೆ. ಆಟೋ ನಿಲ್ಲಿಸಿ ಅವರಿಗೆ ಕುಡಿಯಲು ನೀರು ಕೊಟ್ಟಾಗ, ಕುಡಿದ ಮಂಜುಳಾ 'ಈಗ ತಣ್ಣಗಾಯ್ತು..' ಎಂದಿದ್ದರಂತೆ. ಈ ಮಾತನ್ನು ಸ್ವತಃ ಅವರ ಅತ್ತಿಗೆಯೇ ಸಂದರ್ಶನದಲ್ಲಿ ಹೇಳಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ವಾರಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೇ ಮಂಜುಳಾ ನಿಧನರಾದರು.
ಅವರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ ನಟ ಶ್ರೀನಾಥ್ ಅವರಲ್ಲಿ 'ಅಣ್ಣಾ, ಹೇಗಾದ್ರು ನನ್ನ ಬದುಕಿಸು..' ಎಂದು ನಟಿ ಮಂಜುಳಾ ಬೇಡಿಕೊಳ್ಳುತ್ತಿದ್ದರಂತೆ. ಅವರ ಸ್ಥಿತಿ ನೋಡಿ ನಟ ಶ್ರೀನಾಥ್ ಅವರು ಬಿಕ್ಕಿಬಿಕ್ಕಿ ಅಳುತ್ತಿದ್ದರಂತೆ. ಅವರನ್ನು ಬದುಕಿಸುವ ಯಾವುದೇ ಫಲ ನೀಡದೇ, ಕೊನೆಗೆ ನಟಿ ಮಂಜುಳಾ ಅವರು (19 September 1986 ) ನಮ್ಮನ್ನು ಅಗಲಿ ಹೋಗಿಯೇಬಿಟ್ಟರು. ಆದರೆ, ಕೊನೆ ಕ್ಷಣದಲ್ಲೂ ಅವರಿಗೆ ಬದುಕುವ ಆಸೆ ವಿಪರೀತ ಎನ್ನುವಷ್ಟು ಇತ್ತಂತೆ.
ಧನಂಜಯ್ ಓಲ್ಡ್ ವಿಡಿಯೋ ಈಗ್ಯಾಕೆ ಓಡಾಡ್ತಿದೆ? ಅದೂ ಬ್ಲಾಕ್ & ವೈಟ್ ಆಗಿ...ಕನೆಕ್ಷನ್ ಸಿಕ್ತಾ!?
