‘ಸ್ಟಾರ್ ಸಿನಿಮಾ, ದೊಡ್ಡ ಪ್ರೊಡಕ್ಷನ್ ಹೌಸ್, ಅಷ್ಟೇ ಅನುಭವಿ ತಂತ್ರಜ್ಞರು ಇದ್ದಾರೆ. ಇಂತಹ ತಂಡದಲ್ಲಿ ನಾನೂ ಒಬ್ಬಳಾಗುವ ಅವಕಾಶ ಸಿಕ್ಕಿದ್ದಕ್ಕೆ ನಿಜಕ್ಕೂ ಖುಷಿ ಆಗಿದೆ. ಸಿನಿಮಾ ಟೀಮ್ ಜತೆಗೆ ಒಳ್ಳೆಯ ಒಡನಾಟ ಇದ್ದರೂ ನಾನು ಈ ಚಿತ್ರಕ್ಕೆ ನಾಯಕಿ ಆಗಬಹುದು ಎನ್ನುವುದನ್ನು ನಾನು ಕನಸಲ್ಲೂ ಕಂಡಿರಲಿಲ್ಲ’ ಎನ್ನುತ್ತಾ ‘ಮದಗಜ’ಕ್ಕೆ ನಾಯಕಿ ಆಗಿ ಆಯ್ಕೆಯಾದ ಖುಷಿ ಹಂಚಿಕೊಳ್ಳುತ್ತಾರೆ ನಟಿ ಆಶಿಕಾ ರಂಗನಾಥ್.

ಶ್ರೀ ಮುರಳಿ-ವಿದ್ಯಾ 20 ವರ್ಷದ ಲವ್‌ ಸ್ಟೋರಿಗೆ ಸಾಕ್ಷಿಯಾಯ್ತು ಈ ಫೋಟೋಸ್!

ಇದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಚಿತ್ರ. ಫೆ.೨೦ಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಸದ್ಯಕ್ಕೆ ಚಿತ್ರತಂಡ ರಿವೀಲ್ ಮಾಡಿರುವ ಫೋಟೋ ನೋಡಿದರೆ ಆಶಿಕಾ ಇಲ್ಲಿ ಪಕ್ಕಾ ಹಳ್ಳಿ ಹುಡುಗಿ . ‘ತುಂಬಾ ರಾ ಲುಕ್
ಇರುವಂತಹ ಪಾತ್ರ. ಕಲ್ಟ್ ಅಂತಾರಲ್ಲ ಹಾಗೆ. ಹಳ್ಳಿ ಹುಡುಗಿ. ವಿದ್ಯಾವಂತೆಯಾಗಿದ್ದರೂ ವ್ಯವಸಾಯದ ಮೇಲೆ ಆಕೆಗೆ ಹೆಚ್ಚು ಆಸಕ್ತಿ. ಹಾಗೆಯೇ ತುಂಬಾ ಬೋಲ್ಡ್ ಆ್ಯಂಡ್ ಟಫ್ ಹುಡುಗಿ. ಇದೇ ಮೊದಲು ನನಗೆ ಇಂತಹ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಗುತ್ತಿದೆ. ಇಷ್ಟು ದಿನ ಇಂತಹ ಪಾತ್ರ ಸಿಕ್ಕಿರಲಿಲ್ಲ.

"

ಪಾತ್ರಕ್ಕೆ ತಕ್ಕಂತೆ ಸಾಕಷ್ಟು ನಟಿಯರನ್ನು ಹುಡುಕಾಡಿದ್ದು ನಿಜ, ಆದರೆ ಅಷ್ಟು ನಟಿಯರ ಪೈಕಿ ನಮಗೆ ಸೂಕ್ತ ಎನಿಸಿದ್ದು ಆಶಿಕಾ ರಂಗನಾಥ್. ಹಾಗಾಗಿ ಅವರನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ಶ್ರೀಮುರಳಿ ಚಿತ್ರದಲ್ಲಿ ಉತ್ತರ ಭಾರತದ ಹುಡುಗನಾಗಿ ಕಾಣಿಸಿಕೊಂಡರೆ, ಆಶಿಕಾ ಅವ ರದ್ದು ಪಕ್ಕಾ ಹಳ್ಳಿ ಹುಡುಗಿ ಪಾತ್ರ. - ಮಹೇಶ್ ಕುಮಾರ್ ನಿರ್ದೇಶಕ 

ಈಗ ಇದಕ್ಕೆ ಒಂದಷ್ಟು ಸಿದ್ಧತೆಯೂ ಬೇಕಿದೆ. ಸಾಮಾನ್ಯವಾಗಿ ವ್ಯವಸಾಯದಲ್ಲಿ ತೊಡಗಿಸಿಕೊಂಡ ವಿದ್ಯಾವಂತ ಹಳ್ಳಿ ಹುಡುಗಿಯರು ಹೇಗಿರುತ್ತಾರೆನ್ನುವುದನ್ನು ನೋಡಿ ತಿಳಿದುಕೊಳ್ಳಬೇಕಿದೆ. ನಿರ್ದೇಶಕರು ಒಂದಷ್ಟು ಸಲಹೆ ಸೂಚನೆ ಕೊಡುತ್ತಿದ್ದಾರೆ’ ಎನ್ನುತ್ತಾ ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಸಿದ್ಧತೆ ಕುರಿತು ಮಾತನಾಡುತ್ತಾರೆ ಆಶಿಕಾ.