ಸ್ಯಾಂಡಲ್‌ವುಡ್‌ ಮುದ್ದು ಮುಖದ ಚೆಲುವ ಐಂದ್ರಿತಾ ರೇ ಬೀದಿ ಶ್ವಾನಗಳಿಗೆ ಆಹಾರ ಹಾಕಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.  ಕೊರೋನಾ ವೈರಸ್‌ ಮಾಡುತ್ತಿರುವ ರಂಪಾಟಕ್ಕೆ ಅದೆಷ್ಟು ಮಂದಿಯ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಹಾಕಿದಂತಾಗುತ್ತಿದೆ. ಇದು ಜನರಿಗೆ ಮಾತ್ರವಲ್ಲ ಬೀದಿ ಪ್ರಾಣಿಗಳ ಮೇಲೂ ಭೀಕರ ಪರಿಣಾಮ ಬೀರಿದೆ.

ಈಗ ಆಗಲೇ ಸಾಕಷ್ಟು NGOಗಳು, ಸಾಕು ನಾಯಿ ಪ್ರೇಮಿಗಳು ಕೈ ಜೋಡಿಸಿ, ತಮ್ಮ ನಿವಾಸದ ಸುತ್ತಲಿರುವ ನಾಯಿಗಳಿಗೆ ಆಹಾರ ಹಾಗೂ ನೀರು ನೀಡುತ್ತಿದ್ದಾರೆ.  ಈಗ ಅದೇ ಸಹಾಯವನ್ನು ನಟಿ ಐಂದ್ರಿತಾ ಮಾಡುತ್ತಿರುವುದು ನೆಟ್ಟಿಗರಿಗೆ ಮಾರ್ಗದರ್ಶನವಾಗಿದೆ.

ತುಸು ಸಿಲ್ಲಿ ಕೆಲಸ ಮಾಡೋಣ..ಐಂದ್ರಿತಾ ಬಹಿರಂಗ ಆಹ್ವಾನ!

'ನಮ್ಮ ಸುತ್ತಲಿರುವ ನಾಲ್ಕು ಕಾಲಿನ  ಗೆಳೆಯರನ್ನು ನಾವು ಮರೆಯುವುದು ಬೇಡ. ದಿನೇ ದಿನೇ ಬೇಸಿಗೆಯ ತಾಪ ಹೆಚ್ಚಾಗುತ್ತಿದೆ. ಇದೇ ಸಮಯಕ್ಕೆ ಲಾಕ್‌ಡೌನ್‌ ಆಗಿರುವ ಪರಿಣಾಮ ಅವುಗಳಿಗೆ ಆಹಾರ ಮತ್ತು ನೀರು ಸಿಗದಂತಾಗಿದೆ.  ನೀವು ತರಕಾರಿ ತರಲು ಮಾರುಕಟ್ಟೆಗೆ ಹೋದರೆ ದಯವಿಟ್ಟು ಇವುಗಳಿಗೆ ಏನಾದರೊ ನೀಡಿ' ಎಂದು ಐಂದ್ರಿತಾ ಮನವಿ ಮಾಡಿ ಕೊಂಡಿದ್ದಾರೆ. 

 

ಸಾಕು ಪ್ರಾಣಿಗಳಿಂದ ರೋಗ ಹರಡುತ್ತದೆ ಎಂಬ ತಪ್ಪು ತಿಳುವಳಕೆಯಿಂದ ಸಾಕಿದ ನಾಯಿಯನ್ನು ಕೆಲವರು ಬೀದಿಗೆ ಬಿಡುತ್ತಿದ್ದಾರೆ. ದಯವಿಟ್ಟು ಹೀಗೆ ಮಾಡ ಬೇಡಿ ಎಂದು ಪ್ರಾಣಿ ದಯಾ ಸಂಘ ಮನವಿ ಮಾಡಿ ಕೊಂಡಿದೆ.