Asianet Suvarna News Asianet Suvarna News

ಇವ್ರಪ್ಪ ನಮ್ಮ ಕನ್ನಡತಿ; ಸಗಣಿ ಬಾಚಿ, ಹಾಲು ಕರೆದು, ಖಡಕ್ ರೊಟ್ಟಿ ತಟ್ಟಿದ ನಟಿ ಅದಿತಿ ಪ್ರಭುದೇವ!

ಹಳ್ಳಿ ಲೈಫ್ ಎಂಜಾಯ್ ಮಾಡುತ್ತಿರುವ ಅದಿತಿ ಪ್ರಭುದೇವ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. 
 

Actress Aditi Prabhudeva My village my love video goes viral vcs
Author
Bangalore, First Published Aug 1, 2021, 7:57 AM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದಲ್ಲಿ ಶ್ಯಾನೆ ಟಾಪ್ ಆಗಿ ಮಿಂಚುತ್ತಿರುವ ನಟಿ ಅದಿತಿ ಪ್ರಭುದೇವ ತಮ್ಮದೇ ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಹವ್ಯಾಸ, ದಿನಚರಿ ಮತ್ತು ವಿಭಿನ್ನ ವಿಚಾರಗಳ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಶೇರ್ ಮಾಡಿದ 'ಮೈ ವಿಲೇಜ್ ಮೈ ಲವ್' ವಿಡಿಯೋ ಸಖತ್ ವೈರಲ್ ಅಗುತ್ತಿದೆ. 

ಈ ವಿಡಿಯೋದಲ್ಲಿ ಅದಿತಿ ಬೇಗ ಎದ್ದು,  ಕೊಟ್ಟಿಗೆ ಸಗಣಿ ಬಾಚಿ, ದನ ಕರುಗಳನ್ನು ತೊಳೆದು, ಹಾಲು ಕರೆದು, ಮನೆ ಕಸ ಗುಡಿಸಿ ಆ ನಂತರ ರೊಟ್ಟಿ ಮಾಡಿ ಪಕ್ಕಾ ಹಳ್ಳಿ ಹುಡುಗಿ ರೀತಿ ಜೀವನ ಮಾಡಿದ್ದಾರೆ. ಈ ವಿಡಿಯೋ ಒಂದು ಭಾಗವಾಗಿದ್ದು, ಮತ್ತೊಂದು ಭಾಗ ಕೆಲವು ದಿನಗಳಲ್ಲಿ ಅಪ್ಲೋಡ್ ಮಾಡಲಿದ್ದಾರೆ. 

ನಟಿ ಅದಿತಿ ಫಿಟ್ನೆಸ್‌ ಸೀಕ್ರೆಟ್; ಸೋನು ಗೌಡ ಮನೆ ತೋಟ ವಿಡಿಯೋ ವೈರಲ್!

'ಚಿಕ್ಕ ವಯಸ್ಸಿನಿಂದಲೂ ಹಳ್ಳಿಯಲ್ಲಿ ಬೆಳೆದವಳು ನಾನು. ಬೆಳೆಯುತ್ತಾ ಆಧುನಿಕ ಬದುಕಿಗೆ ಹತ್ತಿರವಾದರು ಮನಸ್ಸು ಮಾತ್ರ ಹಳ್ಳಿಯಲ್ಲಿ ಜೀವಂತ. ಜೀವನದಲ್ಲಿ ಏನೇ ಸಿಕ್ಕರೂ ಪ್ರೀತಿ, ನೆಮ್ಮದಿ ಎಲ್ಲದಕ್ಕೂ ಮಿಗಿಲು ಎಂದು ತಿಳಿದವಳು ನಾನು. ಹಳ್ಳಿಯಲ್ಲಿ ಅಜ್ಜಿ ಮನೆಗೆ ಹೋದಾಗ ನನ್ನ ದಿನಚರಿ ಹೀಗೆ ಇರುತ್ತದೆ' ಎಂದು ಅದಿತಿ ಹೇಳಿದ್ದಾರೆ. ಅದಿತಿ ಮಾತುಗಳನ್ನು ಕೇಳಿ 'ನೀವೇ ಕಣ್ರೀ ಅಪ್ಪಟ್ಟ ಕನ್ನಡತಿ, ಈಗಿನ ನಟಿಯರು ಈ ರೀತಿ ಮಾಡಲ್ಲ ಬಿಡಿ'ಎಂದು  ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

 

Follow Us:
Download App:
  • android
  • ios