ಸ್ಯಾಂಡಲ್‌ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಶಿವರಾತ್ರಿಯಂದು ತಂದೆ ಡಾ. ರಾಜ್‌ಕುಮಾರ್ ಅವರನ್ನು ನೆನೆದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶುಭ ಕೋರಿ ಫೋಸ್ಟ್ ಹಾಕಿದ್ದಾರೆ.

ಕನ್ನಡ ಚಿತ್ರರಂಗವನ್ನು ಎತ್ತರ ಮಟ್ಟಕ್ಕೆ ಬೆಳೆಸುವುದರಲ್ಲಿ ರಾಜ್ ಕುಟುಂಬದ ಪಾತ್ರ ಬಹಳ ಹಿರಿದು. ಇಂದು ಶಿವ ರಾತ್ರಿಗೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ತಂದೆ, ನಟಸಾರ್ವಭೌಮ ಡಾ.ರಾಜ್ ಅಭಿನಯದ ‘ಬೇಡರ ಕಣ್ಣಪ್ಪ’ ಚಿತ್ರದ ಫೋಟೋ ಅಪ್ಲೋಡ್ ಮಾಡಿ ‘ಹ್ಯಾಪಿ ಶಿವರಾತ್ರಿ’ಎಂದು ಶುಭ ಹಾರೈಸಿದ್ದಾರೆ.

View post on Instagram

ಅದಾದ ಕೆಲವೇ ಕ್ಷಣಗಳಲ್ಲಿ ಮತ್ತೊಮ್ಮೆ ಶಿವನ ಪಾತ್ರದಲ್ಲಿರುವ ತಮ್ಮ ಫೋಟೋವನ್ನೂ ಅಪ್ಲೋಡ್ ಮಾಡಿ ‘#ಏhivaratri ಶುಭಾಶಯಗಳು ಎಲ್ಲರಿಗೂ ಶುಭವಾಗಲಿ...’ ಎಂದು ಶುಭಕೋರಿದ್ದಾರೆ.

View post on Instagram

ಇನ್ನು ಶಿವರಾತ್ರಿ ದಿನದಂದು ಎಲ್ಲೆಡೆ ‘ಬೇಡರ ಕಣ್ಣಪ್ಪ’ ಸಿನಿಮಾದ್ದೇ ಹವಾ. ಕಣ್ಣಪ್ಪನ ಪಾತ್ರಕ್ಕೆ ಭಕ್ತಿ-ವಿನಯ ತುಂಬಿ, ಮನೋಜ್ಞವಾಗಿ ನಟಿಸಿದ ಡಾ.ರಾಜ್ ಕಣ್ಣಪ್ಪ ಪಾತ್ರಕ್ಕೆ ಜೀವ ತುಂಬಿದ್ದರು.