ನಿಮ್ಮ ಮನೆ ಒಲೆ ಉರಿಸೋಕೆ ಇನ್ನೊಬ್ಬರ ಮನೆ ಒಲೆ ಆರಿಸಬೇಡಿ: ಶಿವರಾಜ್‌ಕುಮಾರ್ ಖಡಕ್ ವಾರ್ನಿಂಗ್
ಶಕ್ತಿಧಾಮ ಮಕ್ಕಳ ಜೊತೆ ಭೈರತಿ ರಣಗಲ್ ಸಿನಿಮಾ ಪ್ರಚಾರ ಮಾಡಿದ ಶಿವಣ್ಣ. ಇಲ್ಲಸಲ್ಲದ ಕಾಂಟ್ರವರ್ಸಿಗಳಿಗೆ ಬ್ರೇಕ್ ಹಾಕಲು ಉತ್ತರ ಕೊಟ್ಟ ಹ್ಯಾಟ್ರಿಕ್ ಸ್ಟಾರ್....
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಸಣ್ಣದೊಂದು ಆರೋಗ್ಯ ಸಮಸ್ಯೆ ಇರುವ ಕಾರಣ ಚಿಕಿತ್ಸೆಗೆಂದು ಶಿವಣ್ಣ ವಿದೇಶ ಪ್ರಯಾಣ ಮಾಡುವ ಸಾಧ್ಯತೆಗಳಿದೆ. ಹೀಗಾಗಿ ಮೊದಲೇ ತಮ್ಮ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲ ಸಲ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ಶಕ್ತಿಧಾಮದ ಮಕ್ಕಳ ಜೊತೆ ಕಾಣಿಸಿಕೊಂಡಿದ್ದಾರೆ. ಶಕ್ತಿಧಾಮ, ಸಿನಿಮಾ ಮತ್ತು ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಚರ್ಚೆ ಮಾಡಿಕೊಂಡ ಸಮಯ ಕಳೆದಿದ್ದಾರೆ.
ಕಾಂಟ್ರವರ್ಸಿ ಬೇಡ:
'ಕೆಲವೊಂದು ಪ್ರಶ್ನೆಗಳಿಗೆ ಟ್ರಿಗರ್ ಆಗುತ್ತದೆ...ನೆಗೆಟಿವ್ ಮಾಡಿದ ತಕ್ಷಣ ನೀವು ಏನು ಸ್ಪೆಷಲ್ ಆಗಿ ಗಳಿಸುತ್ತೀರಾ ಹೇಳಿ? ಸಂಪಾದನೆ ಮಾಡುವುದಕ್ಕೂ ಬೆಲೆ ಬೇಕು. ನಾನು ಕಷ್ಟ ಪಟ್ಟು ಯಾಕೆ ಸಂಪಾದನೆ ಮಾಡುತ್ತೀನಿ ಯಾಕೆ ನಿಯತ್ತಿನಿಂದ ಊಟ ಮಾಡುತ್ತೀನಿ ಅನ್ನೋ ಮಹತ್ವ ತಿಳಿದುಕೊಂಡಿರಬೇಕು. ನಿಮ್ಮ ಮನೆ ಒಲೆ ಉರಿಯುತ್ತದೆ, ನಿಮ್ಮ ಮನೆ ಒಲೆ ಉರಿಯುವುದಕ್ಕೆ ಮತ್ತೊಬ್ಬರ ಮನೆ ಒಲೆ ಆರಿಸುವುದಾ? ಅದು ಎಷ್ಟು ಸಲ ಮಾಡುತ್ತಾರೆ. ಇದೊಂದು ಅರ್ಥ ಮಾಡಿಕೊಂಡು ಬಿಟ್ಟರೆ ಪ್ರತಿಯೊಬ್ಬರು ಜೀವನದಲ್ಲಿ ಖುಷಿಯಾಗಿ ಇರುತ್ತಾರೆ. ಜಗತ್ತಿನಲ್ಲಿ ಕಾಂಟ್ರವರ್ಸಿಗಳು ಇರುತ್ತೆ ಮಾಡಿ ಆದರೆ ಎಷ್ಟು ಮಾಡಬೇಕು ಅಷ್ಟೇ ಮಾಡಿ...ನಾವಾಗಲಿ ನೀವು ಆಗಲಿ ಎಷ್ಟು ವರ್ಷ ಇರುತ್ತೀವಿ? ಇರೋಷ್ಟು ವರ್ಷಗಳು ಚೆನ್ನಾಗಿ ಇರಬೇಕು ಅಲ್ವಾ..ನಾಳೆ ದಿನ ಹೋದ ಮೇಲೆ ಅಯ್ಯೋ ಹೀಗಿದ್ರು ಹಾಗಿದ್ರು ಯಾಕೆ ಅಂತ ಹೇಳುವ ಬದಲು ಇರುವಾಗ ಆ ಪ್ರೀತಿ ತೋರಿಸಿ' ಎಂದು ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.
'ಲಕ್ಷ್ಮಿ ಬಾರಮ್ಮ' ವಿಧಿ ಅದ್ಧೂರಿ ಆರತಕ್ಷತೆ; ಸಖತ್ ದುಬಾರಿ ಲೆಹೆಂಗಾದಲ್ಲಿ ಮಿಂಚಿದ ಲಾವಣ್ಯ!
'ಅನಗತ್ಯವಾಗಿ ಏನೋ ಆಗಿರುತ್ತದೆ ಸರಿಯಾದ ಮಾಹಿತಿ ಸಿಗುವವರೆಗೂ ಕಾಯಬೇಕು ಅದುಬಿಟ್ಟು ಸುಮ್ಮನೆ ಕಾಂಟ್ರವರ್ಸಿ ಮಾಡಿಬಿಟ್ಟರೆ ಹೇಗೆ? ಮನುಷ್ಯರ ಭಾವನೆಗೆ ಅರ್ಥವೇನು? ಇದು ಸರಿ ಅದು ತಪ್ಪು ಎಂದು ಎರಡೂ ಮಾತನಾಡುತ್ತೀರಾ..ನೀವು ಅತಿ ಬುದ್ಧಿವಂತರು ಅಂದುಕೊಳ್ಳಬೇಡಿ ಅಥವಾ ನಾನು ಬುದ್ಧಿವಂತ ಅಂತ ಹೇಳುತ್ತಿಲ್ಲ ..ನಾನು ಮನಸ್ಸಾರೆ ಸಾಮಾನ್ಯ ಮನುಷ್ಯನಾಗಿ ಮಾತನಾಡುತ್ತಿರುವುದು..ಎಲ್ಲೂ ಸೂಪರ್ ಸ್ಟಾರ್ ಆಗಿ ಡಾ. ರಾಜ್‌ಕುಮಾರ್ ಮಗನಾಗಿ ಮಾತನಾಡುತ್ತಿಲ್ಲ ಶಿವಣ್ಣನಾಗಿ ಹೇಳುತ್ತಿರುವುದು.....ನನ್ನ ಭಾವನೆಗಳು ತಪ್ಪಿದ್ದರೆ ತಿದ್ದಿ' ಎಂದು ಶಿವಣ್ಣ ಹೇಳಿದ್ದಾರೆ.