ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಸೆಲೆಬ್ರಿಟಿ ಲೈಫ್‌ ಬಿಟ್ಟು ಸಾಮಾನ್ಯರಂತೆ ಶೆಡ್‌ ಹೊಟೇಲ್‌ನಲ್ಲಿ ತಿಂಡಿ ಸೇವಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಮುತ್ತತ್ತಿ ಹಾಗೂ ರಾಜ್‌ ಕುಮಾರ್‌ ಅವರ ತವರೂರಾದ ಗಾಜನೂರಿಗೆ ಹೋಗುವಾಗ ಇದೇ ರಸ್ತೆಯಲ್ಲಿಯೇ ಹೋಗಬೇಕು. ತಪ್ಪದೇ ಬಾಬು ಶೆಡ್‌ ಹೊಟೇಲ್‌ನಲ್ಲಿ ಅವರು ತಿಂಡಿ ಸೇವಿಯುತ್ತಾರೆ. ಈ ಹೊಟೇಲ್‌ನಲ್ಲಿ ಶಿವಣ್ಣನಿಗೆ ದೋಸೆ, ಚಿತ್ರಾನ್ನ ಅಂದ್ರೆ ಸಿಕ್ಕಾಪಟ್ಟೆ ಫೇವರೆಟ್‌. ಐಷಾರಾಮಿ ಹೊಟೇಲ್‌, ಶೆಡ್‌ ಹೊಟೇಲ್‌ ಎಂದು ಭೇದಭಾವ ಮಾಡದೆ ಸ್ನೇಹಿತ ಗುರುದತ್ತ ಹಾಗೂ ಅಭಿಮಾನಿಗಳ ಜೊತೆ ತಿಂಡಿ ಸವಿದಿದ್ದಾರೆ. 

ಶೆಡ್‌ ಹೋಟೆಲ್‌ನಲ್ಲಿ ಬೆಣ್ಣೆದೋಸೆ ಸವಿದ ಶಿವಣ್ಣ

60 ವರ್ಷಗಳಿಂದ ವೀರಭದ್ರಪ್ಪ ಎಂಬವರು ಈ ಹೊಟೇಲ್‌ ನಡೆಸುತ್ತಿದ್ದು, ಈಗ ಅವರ ಪುತ್ರ ಬಾಬು ಅವರು ನಡೆಸಿಕೊಂಡು ಬರುತ್ತಿದ್ದಾರೆ. ಮಂಡ್ಯ ಸುತ್ತಮುತ್ತಲೂ ಬಾಬು ಹೊಟೇಲ್‌ ಅಂದ್ರೆ ತುಂಬಾ ಫೇಮಸ್‌.. 

40 ವರ್ಷ ಹಳೆಯ ಹೋಟೆಲ್‌:

ಹೋಟೆಲ್ ಮಾಲೀಕ ಬಾಬು ಮಾತನಾಡಿ, ನಾವು ಸುಮಾರು 40 ವರ್ಷಗಳಿಂದ ಹೋಟೆಲ್‌ ನಡೆಸುತ್ತಿದ್ದೇವೆ. ತಂದೆ ಅವರ ಕಾಲದಿಂದಲೂ ಬಿಸಿ ಬಿಸಿ ಬೆಣ್ಣೆ ದೋಸೆ ಮಾಡಲಾಗುತ್ತಿದೆ. ಚಿತ್ರನಟರು ಮತ್ತು ರಾಜಕೀಯ ನಾಯಕರು ಬಂದು ತಿಂಡಿ ತಿಂದು ಹೋಗುತ್ತಾರೆ. ವರನಟ ಡಾ.ರಾಜಣ್ಣನವರ ಕುಟುಂಬದವರು ಮುತ್ತತ್ತಿಗೆ ಬರುವಾಗ ಇಲ್ಲಿಗೆ ಬಂದು ಭೇಟಿ ನೀಡುತ್ತಾರೆ. ಅವರ ಸಂಬಂಧಿಕರಾದ ಕಾಂತರಾಜ್ ಅವರು ಶಿವರಾಜ್‌ ಕುಮಾರ್‌ ಸರ್‌ ಬರುವ ಸುದ್ದಿ ತಿಳಿಸುತ್ತಾರೆ. ಸ್ಟಾರ್‌ ನಟರೊಬ್ಬರು ನಮ್ಮ ಹೋಟೆಲ್‌ಗೆ ಬಂದು ತಿಂಡಿ ತಿನ್ನುವುದು ನಮಗೆ ತುಂಬ ಖುಷಿ ಕೊಡುತ್ತದೆ ಎಂದು ಹೇಳಿದರು.