ಅಪಘಾತಕ್ಕೀಡಾಗ, ಮೆದುಳಿಗೆ ಏಟು ಬಿದ್ದ ಸಂಚಾರಿ ವಿಜಯ್ ಚೇತಿರಿಸಿಕೊಳ್ಳುವುದು ಅನುಮಾನ. ಮೆದುಳು ಬಹುತೇಕ ನಿಷ್ಕ್ರೀಯ. ವೈದ್ಯರ ಸಲಹೆ ಮೇರೆಗೆ ಅಂಗಾಂಗ ದಾನ ಮಾಡಲು ಕುಟುಂಬದ ನಿರ್ಧಾರ.
ಕೊರೋನಾ ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಟ ಸಂಚಾರಿ ವಿಜಯ್ ಶನಿವಾರ ರಾತ್ರಿ 11.45ಕ್ಕೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದಾರೆ. ತೊಡೆಗೆ ಬಲವಾಗಿ ಪೆಟ್ಟು ಬಿದ್ದಿದೆ ಹಾಗೂ ಮೆದುಳಿಗೆ ಗಂಭೀರ ಗಾಯವಾಗಿದ್ದು, ಆಂತರಿಕ ರಕ್ತ ಸ್ರಾವವಾಗಿದೆ. ಶಸ್ತ್ರ ಚಿಕಿತ್ಸೆ ನಡಿದಿದೆ. ಆದರೆ, ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ವಿಜಯ್ ಸ್ಪಂದಿಸುತ್ತಿಲ್ಲ. ಆದರೆ, ಮೆದುಳು ಹೊರತು ಪಡಿಸಿ ಉಳಿದ ಎಲ್ಲಾ ಅಂಗಾಂಗಳೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ವೈದ್ಯರು ಈ ಬಗ್ಗೆ ಇನ್ನು ಕೆಲ ಹೊತ್ತಿನ ನಂತರ ಅಂತಿಮ ಸಲಹೆ ನೀಡಿಲಿದ್ದು, ಅದರಿಂತೆ ಕುಟುಂಬ ಕಾರ್ಯ ಪ್ರವೃತ್ತವಾಗಲಿದೆ.
ನಟ ಸಂಚಾರಿ ವಿಜಯ್ ಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಮುಂದೆ ಬಂದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ
' ಡಾ. ಹೇಳಿರುವ ಪ್ರಕಾರ ವಿಜಯ್ ವಾಪಸ್ ಬರುವ ಸಾಧ್ಯತೆ ತುಂಬಾ ಕಡಿಮೆ ಇದೆ. ಸಮಾಜದ ಒಳತಿಗೋಸ್ಕರ ವಿಜಯ್ ದುಡಿಯುತ್ತಿದ್ದ. ತನ್ನಗೇ ಬಂದ ನ್ಯಾಷನಲ್ ಅವಾರ್ಡ್ ಸ್ಟೇಟ್ ಅವಾರ್ಡ್‌ಗಳನ್ನು ಸೈಡ್‌ಗೆ ಇಡುತ್ತಿದ್ದ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಇರುತ್ತಿದ್ದ. ಕೋವಿಡ್ ಸಮಯದಲ್ಲಿ ಹಾಗೂ ಕೊಡಗು ನೆರೆ ಪರಿಹಾರದ ಸಮಯದಲ್ಲಿ 24 ಗಂಟೆ ಕಾಲ ಕೆಲಸ ಮಾಡಿದ್ದಾನೆ. ಸಮಾಜಕ್ಕೆ ಕೆಲಸ ಮಾಡುವುದರಲ್ಲಿ ಯಾವಾಗಲೂ ಮುಂದಿದ್ದರು. ಅದನ್ನ ಯೋಚನೆ ಮಾಡಿ ಅವನ ಅಂಗಾಂಗಗಳನ್ನು ದಾನ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಈ ಸೇವೆ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ನಮಗೆ ಬೇರೆ ದಾರಿ ಇಲ್ಲ. ಮೆಡಿಕಲ್ ಎಕ್ಸಪರ್ಟ್‌ಗಳು ಹೇಳುವ ಪ್ರಕಾರ ಇನ್ನೂ 8 ಅಥವಾ 10 ಗಂಟೆಗಳಲ್ಲಿ ದಾನ ಮಾಡದಿದ್ದರೆ ಆಗೋಲ್ಲ. ಅವರ ಅಂಗಾಂಗಗಳು ನಾಲ್ಕು ಜನರಿಗೆ ಉಪಯೋಗವಾಗಲಿ,' ಎಂದು ಸಹೋದರ ಸಿದ್ದೇಶ್ ಮಾತನಾಡಿದ್ದಾರೆ.
ಇಂದು ಬೆಳಗ್ಗೆ 10 ಗಂಟೆ ವೇಳೆಗೆ ನಿಷ್ಕ್ರಿಯಗೊಂಡ ಮೆದುಳು. ಮೆದುಳು ನಿಷ್ಕ್ರಿಯಗೊಂಡ 5-6 ಗಂಟೆನಂತರ ದೇಹದ ಅಂಗಾಂಗಳು ನಿಷ್ಕ್ರಿಯವಾಗುತ್ತವೆ. ಅದ್ದರಿಂದ ವಿಜಯ್ ಅವರ ದೇಹದ ಅಂಗಾಗಗಳನ್ನು ದಾನ ಮಾಡಲು ನಿರ್ಧರಿಸಿದ ಸಹೋದರರು. ಈಗಾಗಲೇ ವಿಜಯ್ ಅವರ ಅಂಗಾಂಗಳ ಕಸಿ ಮಾಡಲು ಎಲ್ಲಾ ತಯಾರಿ ಮಾಡಿ ಕೊಳ್ತಿರೋ ವೈದ್ಯರು. ಸುವರ್ಣ ನ್ಯೂಸ್ ಮಾಹಿತಿ ನೀಡಿದ ಅಪೋಲೋ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ಶೈಲೇಶ್ ಕುಮಾರ್.
ನಟ ವಿಜಯ್‌ರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ಡಿಸಿಎಂ ಅಶ್ವತ್ಥ ನಾರಾಯಣ ಮುಂದಾಗಿದ್ದಾರೆ. ಅವರ ಸಹಾಯಕ್ಕೆ ಕುಟುಂಬಸ್ಥರು ದನ್ಯವಾದಗಳನ್ನು ತಿಳಿಸಿದ್ದಾರೆ.
