ಆರ್ಕೆಸ್ಟ್ರಾ ಕಲಾವಿದರಿಗೆ ಆಹಾರ ಕಿಟ್‌ಗಳ ವಿತರಣೆ ಕಷ್ಟದಲ್ಲಿ ಜನರ ನೆರವಿಗೆ ಬಂದ ಸಾಧು ಕೋಕಿಲ

ನಟ, ನಿರ್ದೇಶಕ ಹಾಗೂ ಸಂಗೀತ ನಿದೇಶಕ ಸಾಧು ಕೋಕಿಲಾ ಅವರು ಆರ್ಕೆಸ್ಟ್ರಾ ಕಲಾವಿದರಿಗೆ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲು ಮುಂದಾಗಿದ್ದಾರೆ. ಸುಮಾರು ಎರಡುವರೆ ಲಕ್ಷ ರುಪಾಯಿ ವೆಚ್ಚದ ದಿನಸಿ ಕಿಟ್‌ಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ನಟ ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.

ಸಾಧು ಕೋಕಿಲಾ ವಿತರಣೆ ಮಾಡುವ ದಿನಸಿ ಕಿಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಹಂಚಿಕೊಳ್ಳಲಾಗುವುದು ಎಂದಿದ್ದಾರೆ. ನಟ ಉಪೇಂದ್ರ ಅವರೂ ಕೊರೋನಾ ರೋಗಿಗಳ ನೆರವಿಗೆ ಬಂದಿದ್ದಾರೆ.

ಸಿನಿ ತಂತ್ರಜ್ಞರಿಗೆ ಹಿರಿಯ ನಟಿ ಬಿ ಸರೋಜದೇವಿ ನೆರವು

ಹಿರಿಯ ನಟಿ ಸರೋಜ ದೇವಿ ಅವರೂ ಕೊರೋನಾ ಕಾಲದಲ್ಲಿ ಕೆಲಸ ಇಲ್ಲದೆ ಕಷ್ಟಪಡುವ ಸಿನಿ ತಂತ್ರಜ್ಞರ ನೆರವಿಗೆ ಧಾವಿಸಿದ್ದಾರೆ. ಸಿನಿಮಾ ಕ್ಷೇತ್ರದಿಂದ ಬಹಳಷ್ಟು ಜನ ಸೆಲೆಬ್ರಿಟಿಗಳು ಜನರಿಗೆ ನೆರವಾಗುತ್ತಿದ್ದಾರೆ.