ಕೊರೋನಾ ವಿರುದ್ಧ ಹೋರಾಡಲು ಕೇವಲ ಮನೆಯಲ್ಲಿಯೇ ಇದ್ದು ಯೋಧರಾಗುವುದು ಅನಿವಾರ್ಯ. #StayHome ಎನ್ನುವ ಮದ್ದು ಬಿಟ್ಟರ ಕೊರೋನಾಗೆ ಇದುವರೆಗೂ ಬೇರೆ ಔಷಧಿಯೇ ಕಂಡು ಹಿಡಿದಿಲ್ಲ. ಇದನ್ನೇ ಮಾಡಿ ಎಂದು ಎಲ್ಲ ವೈದ್ಯರು ಹಾಗೂ ನಟರು ಜನರು ಬೇಡಿಕೊಳ್ಳುತ್ತಿದ್ದರು. ಆದರೆ, ನಿಖಿಲ್ ಕುಮಾರಸ್ವಾಮಿ ಮಾತ್ರ ಮನೆಯಿಂದ ಹೊರ ಬರುತ್ತಿದ್ದಾರಲ್ಲ?

ಮಾರ್ಚ್ 22ರ #JanataCurfew ನಂತರ ನೀಡಿ ಚಪ್ಪಾಳೆ ಅಭಿಯಾನಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವೂ ಸಾಥ್ ನೀಡಿತ್ತು. ಕೊರೋನಾ ವಿರುದ್ಧದ ಯುದ್ಧದಲ್ಲಿ ಎಲ್ಲರೂ ಪಾಲ್ಗೊಳ್ಳುವುದು ಅತ್ಯಂತ ಪ್ರಮುಖವಾಗಿದ್ದು, ಮನೆಯಲ್ಲಿಯೇ ಇರಲು ಕರೆ ನೀಡುತ್ತಿದ್ದಾರೆ ಎಲ್ಲ ಗಣ್ಯರು. ನಟರು ಹಾಗೂ ರಾಜಕಾರಣಿಗಳು ಮನೆಯಲ್ಲಿಯೇ ಇರುವ ಮೂಲಕ ಶ್ರೀ ಸಾಮಾನ್ಯನಿಗೆ ಅತ್ಯುತ್ತಮ ಸಂದೇಶ ರವಾನಿಸುತ್ತಿದ್ದಾರೆ. 

ಆದರೆ, ಈ ನಿಖಿಲ್ ಕುಮಾರಸ್ವಾಮಿ ಮಾತ್ರ ತಮ್ಮ ಭಾವೀ ಪತ್ನಿಯೊಂದಿಗೆ ಬೇವು ಬೆಲ್ಲ ಸವಿದ ಚಿತ್ರವನ್ನೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದಾರೆ. ಅಷ್ಟಕ್ಕೂ ಈ ಜೋಡಿ ಮೀಟ್ ಆಗುತ್ತಿರುವುದೆಲ್ಲಿ ? ಇಬ್ಬರಲ್ಲಿ ಯಾರು ಮನೆಯಿಂದ ಹೊರ ಬರುತ್ತಿದ್ದಾರೆ. ಕರ್ಫ್ಯೂ ಇವರಿಗೆ ಅಪ್ಲೈ ಆಗುವುದಿಲ್ಲವೇ? 

ನಿಶ್ಚಿತಾರ್ಥದಲ್ಲಿ ಅಪ್ಸರೆಯಂತೆ ಕಂಗೊಳಿಸಿದ ರೇವತಿ; ಮೇಕಪ್ ಆರ್ಟಿಸ್ಟ್ ಇವರೇ!

ಕೊರೋನಾ ವೈರಸ್‌ ಹುಚ್ಚಾಟ ಹೆಚ್ಚಾದ ಕಾರಣ ಸಿನಿ ತಾರೆಯರು ಸರಳವಾಗಿ ತಮ್ಮ ನಿವಾಸದಲ್ಲೇ ಹಬ್ಬ ಆಚರಿಸಿದ್ದಾರೆ. ಸರಳವಾಗಿ ಆಚರಿಸಿದ ಹಬ್ಬದ ಸಂಭ್ರಮದ ಕ್ಷಣವನ್ನು ನಿಖಿಲ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲು ತಮ್ಮ ನಿವಾಸದಲ್ಲಿ ನಿಖಿಲ್‌ ಹಬ್ಬ ಆಚರಿಸಿ, ತಾಯಿ ಅನಿತಾರ ಆಶೀರ್ವಾದ ಪಡೆದು, ಆ ನಂತರ ಭಾವಿ ಪತ್ನಿ ಮನೆಗೆ ತೆರಳಿದಂತೆ ಕಾಣಿಸುತ್ತದೆ. ಒಬ್ಬ ಹುಡುನ ರೋಲ್‌ ಮಾಡಲ್‌ ಅಂದ್ರೆ ತಾಯಿ ಹಾಗೂ ಬೆಸ್ಟ್‌ ಗೈಡ್‌ ಅಂದ್ರೆ ಲೈಫ್‌ ಪಾರ್ಟನರ್‌. ಇಬ್ಬರ ಜೊತೆಗೂ ಹಬ್ಬ ಅಚರಿಸಿರುವ ನಿಖಿಲ್‌ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

View post on Instagram

ನಿಖಿಲ್‌ ವಿರುದ್ಧ ಅಭಿಮಾನಿಗಳು ಮನಸ್ತಾಪ? 

ಇಡಿ ದೇಶವೇ ಪ್ರಧಾನ ಮಂತ್ರಿ ನೀಡಿರುವ ಕರೆಗೆ ಸ್ಪಂದಿಸಿ ಎಲ್ಲಿಯೂ ಹೋಗದಂತೆ ಗೃಹ ಬಂಧನದಲ್ಲಿದ್ದಾರೆ. ಆದರೆ ನಿಖಿಲ್‌ ಅವರು ಮಾತ್ರ ಹೇಗೆ ಪತ್ನಿ ಮನೆಗೆ ಹೋದರು? ಕೊರೋನಾ ವೈರಸ್‌ನಿಂದಾಗುವ ತೊಂದರೆ ಬಗ್ಗೆ ಯಾಕೆ ನಿಖಿಲ್‌ ಚಿಂತಿಸುತ್ತಿಲ್ಲ, ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. 

View post on Instagram

ಏಪ್ರಿಲ್‌ 16ರಂದು ರಾಮನಗರದಲ್ಲಿ ಅದ್ದೂರಿಯಾಗಿ ಹಸೆಮಣೆ ಏರಬೇಕಿದ್ದ ಈ ಜೋಡಿಗೆ ಕೊರೋನಾ ಭೀತಿ ಅಡ್ಡಿಯಾಗಿದೆ. ಹಲವು ತಿಂಗಳಿನಿಂದ ಜಾನಪದ ಲೋಕದ ಬಳಿ ಮದುವೆ ಮಂಟಪ ಸಿದ್ಧವಾಗುತ್ತಿತ್ತು. ಇದೀಗ ಈ ತಯಾರಿ ನಿಲ್ಲಿಸಿದ್ದಾರೆ. ಕೊರೋನಾ ಹಾಗೂ 21ದಿನಗಳ ಲಾಕ್ ಡೌನ್ ಏಪ್ರಿಲ್‌ 14ರವರೆಗೂ ಮುಂದುವರೆಯುತ್ತದೆ. ಲಾಕ್‌ಡೌನ್‌ನ ಕಡೇ ದಿನ ನಡೆಯಬೇಕಾದ ಮದುವೆ ಹೇಗೆ, ಎಲ್ಲಿ ನಡೆಯುತ್ತದೋ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ.

ಡಿಫರೆಂಟ್‌ ಆಗಿ ಕಾಣಿಸಿಕೊಂಡ ನಿಖಿಲ್‌- ರೇವತಿ; ರಿವೀಲ್‌ ಆಯ್ತು 10 ಫೋಟೋ!