ಬೆಂಗಳೂರು(ಆ.  10)  'ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ, ಸದ್ಯ ಮುಂಬೈನಲ್ಲಿ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ IRS ಅಧಿಕಾರಿ ಮೇಜರ್ ಪ್ರದೀಪ್ ಶೌರ್ಯ ಆರ್ಯ ಅವರನ್ನು ಭೇಟಿಯಾಗುವ ಸುವರ್ಣಾವಕಾಶ ಇಂದು ನನಗೆ ಒದಗಿ ಬಂದಿತ್ತು'  ಹೌದು ನಟ ನಿಖಿಲ್ ಕುಮಾರಸ್ವಾಮಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಈ ವಿಚಾರ ಹಂದಿಕೊಂಡಿದ್ದಾರೆ.

ಕರ್ತವ್ಯ ನಿಷ್ಠೆಗೆ ಹೆಸರಾಗಿರುವ ಪ್ರದೀಪ್ ಅವರು ಆದಾಯ ತೆರಿಗೆ ವಂಚಕರಿಗೆ ಸಿಂಹಸ್ವಪ್ನವೂ ಹೌದು. ಪ್ರದೀಪ್ ಅವರು ಸೇನೆಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಸೈನ್ಯದ ವಿಶೇಷ ಪಡೆಯಾದ ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿದ್ದ ಅವರು ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗಳಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದಾರೆ. ಅವರೊಂದಿಗಿನ ಇವತ್ತಿನ ಒಡನಾಟ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂಥದ್ದು ಎಂದು ಹೇಳಿದ್ದಾರೆ.

ಬಿಡಿಸದ ಬಂಧ;ರೋಮ್ಯಾಂಟಿಕ್ ಕಪಲ್; ನಿಖಿಲ್-ರೇವತಿ

ಸೇನೆ ಮತ್ತು ಹಣಕಾಸು ಇಲಾಖೆಗಳೆರಡರಲ್ಲೂ ಕಾರ್ಯ ನಿರ್ವಹಿಸಿರುವ ಪ್ರದೀಪ್ ಅವರ ಸೇವೆ ಅವಿಸ್ಮರಣೀಯ. ಸೇನೆಯಲ್ಲಿನ ಅವರ ಕಾರ್ಯ ನಿರ್ವಹಣೆಯನ್ನು ಪರಿಗಣಿಸಿ 2018ರಲ್ಲಿ ಅವರಿಗೆ ಶೌರ್ಯ ಚಕ್ರ ಪ್ರದಾನ ಮಾಡಲಾಗಿದೆ. ಅವರ ಸೇನೆಯ ದಿನಗಳ ಅನುಭವ ಕೇಳಿ ನಾನು ರೋಮಾಂಚಿತನಾದೆ ಎಂದು ವಿವರಿಸಿದ್ದಾರೆ. 

ಪ್ರದೀಪ್ ಶೌರ್ಯ ಆರ್ಯ ಅವರ ಭೇಟಿಯು ಅತ್ಯಂತ ಸಂತೋಷಮ ಸನ್ನಿವೇಶ. ಅಲ್ಲದೇ ಹೆಮ್ಮೆಯ ಸಂಗತಿ ಎಂದು ನಾನು ಭಾವಿಸಿದ್ದೇನೆ ಎಂದು ಪೋಸ್ಟ್ ಬರೆದು ಹಾಕಿದ್ದು ಅಭಿಮಾನಿಗಳು ಶೇರ ಮಾಡಿಕೊಳ್ಳುತ್ತಿದ್ದಾರೆ.

 
 
 
 
 
 
 
 
 
 
 
 
 

ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ, ಸದ್ಯ ಮುಂಬೈನಲ್ಲಿ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ IRS ಅಧಿಕಾರಿ ಮೇಜರ್ ಪ್ರದೀಪ್ ಶೌರ್ಯ ಆರ್ಯ ಅವರನ್ನು ಭೇಟಿಯಾಗುವ ಸುವರ್ಣಾವಕಾಶ ಇಂದು ನನಗೆ ಒದಗಿ ಬಂದಿತ್ತು ಕರ್ತವ್ಯ ನಿಷ್ಠೆಗೆ ಹೆಸರಾಗಿರುವ ಪ್ರದೀಪ್ ಅವರು ಆದಾಯ ತೆರಿಗೆ ವಂಚಕರಿಗೆ ಸಿಂಹಸ್ವಪ್ನವೂ ಹೌದು. ಪ್ರದೀಪ್ ಅವರು ಸೇನೆಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಸೈನ್ಯದ ವಿಶೇಷ ಪಡೆಯಾದ ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿದ್ದ ಅವರು ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗಳಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದಾರೆ. ಅವರೊಂದಿಗಿನ ಇವತ್ತಿನ ಒಡನಾಟ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂಥದ್ದು. ಸೇನೆ ಮತ್ತು ಹಣಕಾಸು ಇಲಾಖೆಗಳೆರಡರಲ್ಲೂ ಕಾರ್ಯ ನಿರ್ವಹಿಸಿರುವ ಪ್ರದೀಪ್ ಅವರ ಸೇವೆ ಅವಿಸ್ಮರಣೀಯ. ಸೇನೆಯಲ್ಲಿನ ಅವರ ಕಾರ್ಯ ನಿರ್ವಹಣೆಯನ್ನು ಪರಿಗಣಿಸಿ 2018ರಲ್ಲಿ ಅವರಿಗೆ ಶೌರ್ಯ ಚಕ್ರ ಪ್ರದಾನ ಮಾಡಲಾಗಿದೆ. ಅವರ ಸೇನೆಯ ದಿನಗಳ ಅನುಭವ ಕೇಳಿ ನಾನು ರೋಮಾಂಚಿತನಾದೆ. ಪ್ರದೀಪ್ ಶೌರ್ಯ ಆರ್ಯ ಅವರ ಭೇಟಿಯು ಅತ್ಯಂತ ಸಂತೋಷಮ ಸನ್ನಿವೇಶ. ಅಲ್ಲದೇ ಹೆಮ್ಮೆಯ ಸಂಗತಿ ಎಂದು ನಾನು ಭಾವಿಸಿದ್ದೇನೆ.

A post shared by Nikhil Kumar (@nikhilgowda_jaguar) on Aug 10, 2020 at 3:59am PDT