ಕಿಚ್ಚ ಸುದೀಪ್ ಎದುರು ಕನ್ನಡ ತಪ್ಪಾಗಿ ಮಾತಾಡಬೇಡಿ; ಕನ್ನಡ್ ಎಂದಿದ್ದಕ್ಕೆ ಕ್ಷಮೆ ಕೇಳಿದ ವ್ಯಕ್ತಿ
ಕನ್ನಡವನ್ನು ಕನ್ನಡ್ ಎಂದರೆ ಸಹಿಸಿಕೊಳ್ಳಲ್ಲ ಬಾದ್ ಷಾ ಕಿಚ್ಚ ಸುದೀಪ್. ಕನ್ನಡ ವಿಷಯಕ್ಕೆ ನಿರೂಪಕಿಗೆ ಕ್ಲಾಸ್ ತೆಗೆದುಕೊಂಡಿದ್ದ ಕಿಚ್ಚ.
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಹೇಗಿದೆ ಎಂದು ಎಲ್ಲರಿಗೂ ತಿಳಿದಿದೆ. ಇನ್ನು, 'ಕನ್ನಡ'ವನ್ನು 'ಕನ್ನಡ್' ಎಂದು ತಪ್ಪು ಉಚ್ಛಾರಣೆ ಮಾಡಿ ಕನ್ನಡಿಗರಿಗೆ ಮತ್ತಷ್ಟು ನೋವು ನೀಡುವ ಪರಭಾಷಿಕರನ್ನೂ ಕೂಡ ನೋಡಿದ್ದೇವೆ. ಇದೀಗ ದುಬೈನಲ್ಲಿರೊ ಬಾದ್ ಷ ಕಿಚ್ಚ ಸುದೀಪ್ ಕನ್ನಡ ತಪ್ಪಾಗಿ ಮಾತನಾಡಿವರಿಗೆ ಕನ್ನಡದ ಪಾಠ ಮಾಡಿದ್ದಾರೆ.
ಬಾದ್ ಷಾ ಸುದೀಪ್ ಕನ್ನಡಿಗರ ಮಣಿಕ್ಯ.. ಕನ್ನಡವನ್ನು ರಾಷ್ಟ್ರ ಮಟ್ಟದಲ್ಲಿ ಮೆರೆಸುತ್ತಿರೊ ನಟ. ಇನ್ನು ದುಬೈ ಆಗಲಿ ಬೇರಿನ್ಯಾವ್ದೋ ದೇಶ ಆಗಲಿ ಕನ್ನಡದ ವಿಷಯಕ್ಕೆ ಬಂದ್ರೆ ಸುದಿಪ್ ಯಾರನ್ನೂ ಬಿಡೋದಿಲ್ಲ. ದುಬೈನಲ್ಲಿ ಅದ್ದೂರಿಯಾಗಿ ಸೆ.14ರಂದು ಸೈಮಾ 2024 ಕಾರ್ಯಕ್ರಮ ನಡೆಯಿತ್ತು. ಈ ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ ಅವರು ಫ್ಯಾಮಿಲಿ ಸಮೇತ ಹೋಗಿದ್ದರು. ವೇದಿಕೆ ಮೇಲೆ ಇದ್ದ ಓರ್ವ ಗಣ್ಯರು, 'ಕನ್ನಡ್' ಎಂದು ಪದಬಳಕೆ ಮಾಡಿದ್ದಾರೆ. ಕೂಡಲೇ ಅಲರ್ಟ್ ಆದ ಕಿಚ್ಚ ಸುದೀಪ್ ಅವರು ಹೇಳಿದ್ದನ್ನು ತಿದ್ದಿದ್ದಾರೆ. "ಅಲ್ಲಾ, ನಾನು ಮುಂಬೈನವರು ಮಾತ್ರ ಕನ್ನಡವನ್ನು ಕನ್ನಡ್ ಅಂತ ಹೇಳ್ತಾರೆ ಅಂದ್ಕೊಂಡಿದ್ದೆ. ಆದರೆ ನೀವು ಹೈದರಾಬಾದ್‌ನವರಾಗಿಯೂ ಕನ್ನಡ್ ಅಂತೀರಲ್ಲಾ" ಎಂದು ಹೇಳಿದ್ದಾರೆ.
ಫಿಲ್ಮ್ ಚೇಂಬರ್ ಅಂಗಳದಲ್ಲಿ ‘ಮೀಟು’ ವಾರ್! ನಮ್ಮಲ್ಲಿಲ್ಲ ಮೀಟು.. ಹಿರಿಯರಲ್ಲಿ ಮಾತಿನೇಟು!
ಯಾರು ವೇದಿಕೆ ಮೇಲೆ 'ಕನ್ನಡ್' ಅಂತ ಹೇಳಿದ್ದರೋ, ಅವರು ಕೂಡಲೇ ಸುದೀಪ್‌ಗೆ ಕ್ಷಮೆ ಕೇಳಿ 'ಕನ್ನಡ' ಅಂತ ಹೇಳಿದ್ದಾರೆ. ಆಗ ಅಲ್ಲಿ ಇದ್ದವರು ಜೋರಾಗಿ ಕೂಗಿದ್ದಾರೆ. ಚಪ್ಪಾಳೆ, ಶಿಳ್ಳೆ ಹೊಡೆದಿದ್ದಾರೆ. ಅಂದಹಾಗೆ, ಈ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ. ಸುದೀಪ್ ಅವರ ಕನ್ನಡ ಪ್ರೀತಿಯನ್ನು ಎಲ್ಲರೂ ಹೊಗಳಿದ್ದಾರೆ. ಎರಡು ವರ್ಷಗಳ ಹಿಂದೆ ಹೊರರಾಜ್ಯದಲ್ಲಿ ಸುದೀಪ್ ಅವರು ಒಂದು ಸಂದರ್ಶನ ನೀಡಿದ್ದು. ಅದರ ನಿರೂಪಕಿಯು 'ಕನ್ನಡ್' ಎಂದು ಹೇಳಿದ್ದರು. ಆಗ ಸುದೀಪ್, "ಹಿಂದಿ ಹೇಗೆ ಹಿಂದ್ ಆಗುವುದಿಲ್ಲವೋ, ಹಾಗೆ ಕನ್ನಡವು ಕನ್ನಡ್ ಆಗುವುದಿಲ್ಲ. ನೀವು ಕನ್ನಡ ಭಾಷೆ ಮಾತನಾಡುವುದಿರಲಿ, ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ. ನೀವು ತೆಲುಗು, ತಮಿಳು ಹೆಸರನ್ನು ಸರಿಯಾಗಿ ಹೇಳುತ್ತೀರಿ, ಆದರೆ ಕನ್ನಡದ ಬಗ್ಗೆ ಹೇಳುವಾಗ ತಪ್ಪಾಗಿ ಹೇಳುತ್ತೀರಿ" ಎಂದು ಕ್ಲಾಸ್ ತೆಗೆದುಕೊಂಡಿದ್ದರು. ಇದು ಕನ್ನಡದ ಮೇಲೆ ಕಿಚ್ಚ ಇಟ್ಟಿರೊ ಪ್ರಿತಿ ಅಭಿಮಾನ.