ನಟ ಜೈಜಗದೀಶ್‌ ಹಿರಿಯ ಪುತ್ರಿ ಅರ್ಪಿತಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ ರೋಹಿಣಿ ಹಾಗೂ ಇತರರು, ಸ್ನೇಹಿತರ ಮನೆಯಲ್ಲಿ ಏರ್ಪಡಿಸಲಾಗಿದ್ದ ಔತಣ ಕೂಟದಲ್ಲಿ ಭಾಗಿಯಾಗಿದ್ದು, ತಡರಾತ್ರಿ ಮನೆಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಾರು ಅಪಘಾತ: ಪ್ರಾಣಾಪಾಯದಿಂದ ಪಾರಾದ ಡಿ.ಎಚ್.ಶಂಕರಮೂರ್ತಿ ಪುತ್ರ

ರಾಜಾನುಕುಂಟೆಯಿಂದ ಯಲಹಂಕ ಮಾರ್ಗವಾಗಿ ಬಿಳಿ ಬಣ್ಣದ ಫಾರ್ಚೂನರ್‌ ಕಾರು ನಿಯಂತ್ರಣ ತಪ್ಪಿ ಮರವೊಂದಕ್ಕೆ ಗುದ್ದಿದೆ. ಕಾರಿನ ಮುಂಭಾಗ ಪುಡಿ ಪುಡಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಮೂವರಿಗೆ ಗಾಯವಾಗಿವೆ. ತಕ್ಷಣವೇ  ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಲಾಗಿದ್ದಾರೆ. 

ರಾಜಾನುಕುಂಟೆ ಠಾಣಾ ವ್ಯಾಪ್ತಿಯ ಮಾವಳ್ಳಿ ಬಳಿ ನಡೆದ ಅಪಘಾತ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರಿಗೆ ಮಾಹಿತಿ ನೀಡದೇ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಮೂವರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೀಡಾದ ಕಾರಿನಲ್ಲಿ ಸ್ಯಾಂಡಲ್ ವುಡ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ ರೋಹಿಣಿ ಸಿಂಗ್, ನಟ ಜೈ ಜಗದೀಶ್ ಪುತ್ರಿ ಅರ್ಪಿತಾ ಮತ್ತು ಮತ್ತೊಬ್ಬ ಸ್ನೇಹಿತ ಕಾರಿನಲ್ಲಿದ್ದರು ಎನ್ನಲಾಗಿದೆ.

ಅಪಘಾತ ತಪ್ಪಿಸಿಕೊಂಡವಳ ಮೇಲೆ ಮತ್ತೆ ಕಾರು ಹತ್ತಿಸಲು ಬಂದ! 

'ಮಗಳು ಅರ್ಪಿತಾ ಮತ್ತು ರೋಹಿಣಿ ಇಬ್ಬರು ಹುಷಾರಾಗಿದ್ದಾರೆ. ತಮ್ಮ ಸ್ನೇಹಿತರ ಮನೆಗೆ ರಾತ್ರಿ ಊಟಕ್ಕೆ ಹೋಗಿದ್ದರು. ಬೆಳಗ್ಗೆ ಮನೆಗೆ ವಾಪಸ್‌ ಬರುವಾಗ ಡ್ರೈವರ್‌ ಓವರ್‌ ಸ್ಪೀಡಿನಿಂದ ಅಪಘಾತವಾಗಿದೆ. ಇಬ್ಬರು ಆಸ್ಪತ್ರೆಯಲ್ಲಿದ್ದು, ಅಬ್ಸರ್ವೇಷನ್‌ಗಾಗಿ ದಾಖಲಿಸಿಕೊಂಡಿದ್ದಾರೆ. ಅವರಿಗೆ ಯಾವುದೇ ಅಪಾಯವಾಗಿಲ್ಲ. ಆರಾಮಾಗಿದ್ದಾರೆ' ಎಂದು ನಟ ಜೈಜಗದೀಶ್ ಸುವರ್ಣ ನ್ಯೂಸ್ ಗೆ ಹೇಳಿಕೆ ನಿಡಿದ್ದಾರೆ.