ಹೀಗಾಗಿ ಪ್ರತಿ ವರ್ಷ​ದಂತೆ ಈ ವರ್ಷವೂ ಮಂತ್ರಾ​ಲ​ಯಕ್ಕೆ ತೆರಳಿ ರಾಯ​ರಿಗೆ ವಿಶೇಷ ಪೂಜೆ ಮಾಡಿ​ಸುವ ಮೂಲಕ ತಮ್ಮ ಹುಟ್ಟುಹಬ್ಬ​ವನ್ನು ಆಚ​ರಿ​ಸಿ​ಕೊಂಡರು.

ಈ ಬಗ್ಗೆ ಸ್ವತಃ ಜಗ್ಗೇಶ್‌ ಅವರೇ ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಬರೆ​ದು​ಕೊಂಡಿ​ದ್ದಾರೆ. ‘ನನ್ನ ಹುಟ್ಟುಹಬ್ಬದ ದಿನ ರಾಯರು ನಿದ್ರಿಸುತ್ತಿದ್ದ ಜಾಗದಲ್ಲಿ ಅವರ ಆ ದಿನ​ವ​ನ್ನು ನೆನೆದು ಕೂತ ಕ್ಷಣ ರೋಮಾಂಚನಗೊಂಡೆ’ ಎಂದು ಬರೆ​ದು​ಕೊಂಡಿ​ದ್ದಾರೆ. ಜತೆಗೆ ಮಂತ್ರಾ​ಲ​ಯಕ್ಕೆ ಹೋಗುವ ದಾರಿ​ಯಲ್ಲಿ ತಾವು ಭೇಟಿ ಮಾಡುವ ವಿಶೇಷ ಅಭಿ​ಮಾ​ನಿಗೆ ಈ ಬಾರಿ ವೀಲ್‌ಚೇರ್‌ ಕೊಳ್ಳಲು ಆರ್ಥಿಕ ನೆರವು ನೀಡಿ ಮಾನ​ವೀ​ಯತೆ ಮೆರೆ​ದಿ​ದ್ದಾರೆ.

ಜಗ್ಗೇಶ್‌ ಅವ​ರಿಗೆ ಸಾಕಷ್ಟುಮಂದಿ ಅಭಿ​ಮಾ​ನಿ​ಗಳು ಹುಟ್ಟುಹಬ್ಬಕ್ಕೆ ಶುಭ ಕೋರಿ​ದ್ದಾರೆ. ಚಿತ್ರ​ರಂಗದ ನಟ, ನಟಿ​ಯರು ವಿಶೇ​ಷ​ವಾಗಿ ಶುಭ ಕೋರಿ​ದ್ದಾರೆ. ಸದ್ಯಕ್ಕೆ ‘ತೋತಾ​ಪು​ರಿ’ ಹಾಗೂ ‘ರಂಗ​ನಾ​ಯ​ಕ’ ಚಿತ್ರ​ಗ​ಳಲ್ಲಿ ನಟಿ​ಸು​ತ್ತಿ​ರುವ ಜಗ್ಗೇಶ್‌ ಅವ​ರಿಗೆ ಈ ಎರಡೂ ಚಿತ್ರ​ತಂಡ​ಗ​ಳಿಂದ ಶುಭ ಕೋರಿದ್ದು, ವಿಶೇ​ಷ​ವಾದ ಪೋಸ್ಟ​ರ್‌​ಗ​ಳನ್ನೂ ಸಹ ಬಿಡು​ಗಡೆ ಮಾಡ​ಲಾ​ಗಿದೆ.