ಕೊರೋನಾ ವೈರಸ್‌ ರಂಪಾಟ ಹೆಚ್ಚಾದ ಕಾರಣ ಸಿನಿಮಾ ತಾರೆಯರು ಮನೆಯಲ್ಲೇ ಕುಟುಂಬಸ್ಥರ ಜೊತೆ ಸಮಯ ಕಳೆಯುವುದು ಅನಿವಾರ್ಯವಾಗಿದೆ. 

ರಾಜರಾಜೇಶ್ವರಿ ನಗರದ ನಿವಾಸಿಯಾಗಿರುವ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮನೆಯಲ್ಲಿ ಪತ್ನಿ ಜೊತೆ Table Tennis ಆಟವಾಡಿದ್ದಾರೆ. ಈ ವಿಡಿಯೋವನ್ನು ಪತ್ನಿ ಶಿಲ್ಪಾ ಗಣೇಶ್‌ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಗಣೇಶ್‌ ಲೈಫಿನ 'ಗೋಲ್ಡನ್‌' ಕ್ವೀನ್‌; ಶಿಲ್ಪಾ ಗಣೇಶ್‌ ಎಷ್ಟು ಸ್ಟೈಲಿಶ್‌ ನೋಡಿ!

ಕನ್ನಡ ಚಿತ್ರರಂಗದ ಜಾಲಿ ಕಪಲ್‌ ಎಂದೇ ಹೆಸರು ಗಳಿಸಿರುವ ಶಿಲ್ಪಾ- ಗಣೇಶ್‌ ಬಿಡುವಿನ ಸಮಯದಲ್ಲಿ ಅಥವಾ ಯಾರದ್ದೇ ಬರ್ತಡೇ ಪಾರ್ಟಿ, ಗೆಟ್‌- ಟುಗೆದರ್‌ ಇರಲಿ ತಮ್ಮ ಮನೆಯಲ್ಲೇ ಹೆಚ್ಚಾಗಿ ಆಚರಿಸುತ್ತಾರೆ. ಯೋಗರಾಜ್‌ ಭಟ್‌ ನಿರ್ದೇಶನದ 'ಗಾಳಿಪಟ -2' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಗಣೇಶ್‌ ಈಗ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.

ಇಂದು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ದೇಶಾದ್ಯಂತ ಜನತಾ ಕರ್ಫ್ಯೂ ಇದ್ದು, ಯಾರೂ ಮನೆಯಿಂದ ಹೊರ ಬಾರದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ. ಹಾಗೇ ಸಂಜೆ 5 ಗಂಟೆಗೆ, ಜನರು ತಾವಿದ್ದಲ್ಲೇ ಚಪ್ಪಾಳೆ ತಟ್ಟುವ ಮೂಲಕ ಅಥವಾ ಜಾಗಟೆ ಬಾರಿಸಿ ಅಥವಾ ಶಂಖ ಊದುವ ಮೂಲಕ ಕರೋನಾ ವೈರಸ್ ಹೊಡೆದೋಡಿಸಲು ಹೋರಾಡುತ್ತಿರುವ ವರ್ಗದ ಜನರಿಗೆ ಸಲಾಂ ಹೇಳಲೂ ಕೋರಿದ್ದಾರೆ. ಇದು ಪ್ರತಿಯೊಬ್ಬ ದೇಶವಾಸಿಯ ಕರ್ತವ್ಯವೂ ಹೌದು, ರೋಗ ಹಬ್ಬದಂತೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು.