ಕನ್ನಡ ಚಿತ್ರರಂಗದ ಓನ್‌ ಆ್ಯಂಡ್‌ ಓನ್ಲಿ ಮಾದೇಶ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಪತ್ನಿ ಶಿಲ್ಪಾ ಇಂದು 12ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

ಈ ಬಗ್ಗೆ ಗಣೇಶ್‌ ಪತ್ನಿಯೊಂದಿಗಿನ ಪೋಟೋ ಅಪ್ಲೋಡ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ. 'ನಾವು ಫಸ್ಟ್ ಟೈಂ ಭೇಟಿಯಾದಾಗ, ನಾನು ಹಾಯ್‌ ಹೇಳಿದ್ದೆ. ಆಗ ನೀನು ಹಾಯ್‌ ಹೇಳುತ್ತಾ ಕೊಟ್ಟ ಸ್ಮೈಲ್‌ ಇಂದಿಗೂ ಮರೆಯಲಾಗುತ್ತಿಲ್ಲ. ಅಬ್ಬಾ! 12 ವರ್ಷ ಆಗೋಯ್ತಾ? ನನ್ನ ಲವ್‌, ನನ್ನ ಬೆಸ್ಟ್‌ ಫ್ರೆಂಡ್‌, ಮೈ ಕ್ವೀನ್‌ ಮೈ, ಸೋಲ್‌ ಮೇಟ್‌, ಹ್ಯಾಪಿ ಆ್ಯನಿವರ್ಸರಿ' ಎಂದು ಬರೆದುಕೊಂಡಿದ್ದಾರೆ.

ಗೋಲ್ಡನ್ ಜೋಡಿಗೆ 11 ವರ್ಷ! ಇಲ್ಲಿದೆ ಗಣೇಶ್ ಬರೆದ ಲವ್ಲಿ ಪೋಸ್ಟ್

ಗಣೇಶ್‌ ಹಾಗೂ ಶಿಲ್ಪಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಗಣೇಶ್‌ ಪುತ್ರಿ 'ಚಮಕ್‌' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಈಗಾಗಲೇ ಕಾಲಿಟ್ಟಿದ್ದಾರೆ. ಪುತ್ರ ವಿಹಾನ್‌ 'ಗೀತಾ' ಚಿತ್ರದಲ್ಲಿ ನಟಿಸಿದ್ದಾರೆ ಹಾಗೂ ಪಾತ್ರಕ್ಕೆ ಸ್ವತಃ ವಿಹಾನ್‌ ಡಬ್ಬಿಂಗ್ ಮಾಡಿರುವುದು ವಿಶೇಷ. ಖಾಸಗಿ ಸಂದರ್ಶನದಲ್ಲಿ ಶಿಲ್ಪಾ ಗಣೇಶ್ ಅವರನ್ನು ಅರಸಿಕ ಎಂದಿದ್ದಾರೆ. ಹೌದು! 'ಆನ್‌ ಸ್ಕ್ರೀನ್‌ ಗಣೇಶ್‌ ರೋಮ್ಯಾಂಟಿಕ್ ಮ್ಯಾನ್‌. ಆದರೆ ಆಫ್‌ ಸ್ಕ್ರೀನ್‌ ನಾನು ರೋಮ್ಯಾಂಟಿಕ್‌,' ಎಂದು ಹೇಳೀದ್ದಾರೆ.