Asianet Suvarna News Asianet Suvarna News

ಮಂಡ್ಯದಲ್ಲಿ ಡಾ.ಅಂಬರೀಶ್ ಫೌಂಡೇಷನ್ ಆರಂಭಿಸಿದ ಸಂಸದೆ ಸುಮಲತಾ; ವಿದ್ಯಾರ್ಥಿಗಳ ದತ್ತು ಸ್ವೀಕಾರ

ಮಂಡ್ಯದ ಗಂಡು ಅಂಬರೀಶ್ ಅವರ ಸಾಧನೆ, ಸೇವೆ ಹಾಗೂ ಸವಿನೆನಪು ಮುಂದುವರೆಸಲು ಡಾ. ಅಂಬರೀಶ್ ಫೌಂಡೇಷನ್ ಆರಂಭಿಸಲಾಗಿದೆ ಎಂದು ಸಂಸದೆ ಸುಮಲತಾ ತಿಳಿಸಿದರು.

 

Actor Ambarish Foundation started in Mandya from MP Sumalatha they worked students Adoption sat
Author
First Published May 29, 2024, 6:53 PM IST

ಮಂಡ್ಯ (ಮೇ 29): ಮಂಡ್ಯದ ಮಣ್ಣಿನ ಮಗ ಅಂಬರೀಶ್ ಅವರ ಸೇವೆ, ಸಾಧನೆಗಳನ್ನು ಹಾಗೂ ಅವರ ಮೇಲಿದ್ದ ಜನರ ಪ್ರೀತಿಯನ್ನು ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಡಾ. ಅಂಬರೀಶ್ ಫೌಂಡೇಷನ್ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣ ಕೊಡಿಸಲಾಗುವುದು. ಇತರೆ ಸಾಮಾಜಿಕ ಸೇವೆಗಳನ್ನೂ ಮಾಡಲಾಗುವುದು ಎಂದು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಮಂಡ್ಯದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವತ್ತೂ ಒಬ್ಬ ವ್ಯಕ್ತಿಗೆ ಅಧಿಕಾರ ಶಾಶ್ವತ ಅಲ್ಲ, ಜನರ ಪ್ರೀತಿ ಶಾಶ್ವತ. ಎಲ್ಲ ಮನೆಯಲ್ಲಿ ಮಕ್ಕಳು ಜನಿಸೋದು ಸಾಮಾನ್ಯ. ಆದರೆ, ಉತ್ತಮ ವ್ಯಕ್ತಿತ್ವ ಇರುವ ಮಕ್ಕಳು ಜನಿಸಿವುದು ಅಪರೂಪ. ಅಂಬರೀಶ್ ಅದನ್ನ ಪಡೆದುಕೊಂಡು ಬಂದವರು. ನನಗಿಂತ ಮಂಡ್ಯ ಜಿಲ್ಲೆಯ ಜನರಿಗೆ ಅವರ ಬಗ್ಗೆ ಗೊತ್ತಿದೆ. ಡಾ.ಅಂಬರೀಶ್ ಫೌಂಡೇಶನ್ ಸ್ಥಾಪನೆ ಮಾಡಿದ್ದೇವೆ. ಅವರ ಸಾಧನೆಗಳನ್ನ ಮುಂದುವರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಾನು ಮಂಡ್ಯ ಜಿಲ್ಲೆಯ ಸಂಸದೆಯಾಗಿರುವುದು ದೊಡ್ಡದಲ್ಲ, ಜಿಲ್ಲೆಯ ಸೊಸೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿದ್ದಾರೆ. ಇಂದಿನ ವಿದ್ಯಾರ್ಥಿಗಳು ಸಹ ಸಾಧನೆ ಮಾಡಿದರೆ ಮುಂದೆ ಜಿಲ್ಲೆಗೆ ಮತ್ತಷ್ಟು ಉತ್ತಮ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ಡಾ. ಅಂಬರೀಶ್ ಫೌಂಡೇಷನ್‌ನಿಂದ ವಿದ್ಯಾರ್ಥಿಗಳನ್ನ ದತ್ತು ತೆಗೆದುಕೊಂಡು ವಿದ್ಯಾಭ್ಯಾಸ ಕೊಡಿಸುವ ಕೆಲಸ ಮಾಡುತ್ತೇವೆ. ನಮ್ಮ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಮಂಡ್ಯ ಹೆಣ್ಣು ಭ್ರೂಣಹತ್ಯೆ ಬಗ್ಗೆ ಮತ್ತೆ ಸಿಡಿದೆದ್ದ ಸಂಸದೆ ಸುಮಲತಾ ಅಂಬರೀಶ್; ಕೈ ಸರ್ಕಾರಕ್ಕೆ ತರಾಟೆ!

ಮಂಡ್ಯ ಜಿಲ್ಲೆಯ ಜನತೆ ಅಂಬರೀಶ್ ಅವರನ್ನು ಪ್ರೀತಿ ಅಭಿಮಾನ ಕೊಟ್ಟು ಬೆಳೆಸಿದವರು. ಅಂಬರೀಶ್ ಅವರನ್ನ ರಾಜ್ಯದ ಜನರು ನೋಡುವುದಕ್ಕೆ ಮುಗಿ ಬೀಳುತ್ತಿದ್ದರು. ಆದರೆ, ಅಂಬರೀಶ್  ಮಂಡ್ಯದವರನ್ನ ನೋಡಲು ಇಷ್ಟ ಪಡುತ್ತಿದ್ದರು. ಅವರ ಹುಟ್ಟು ಹಬ್ಬದ ದಿನ ಸಾವಿರಾರು ಜನರು ನೋಡೋಕೆ ಬರೋರು. ಅವರ ಅಗಲಿಕೆ ಬಳಿಕ ಮಂಡ್ಯದಲ್ಲೆ ಅಂಬರೀಶ್ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿದೆ. ನಿಮ್ಮ ಜೊತೆ ನಾವು ಹುಟ್ಟುಹಬ್ಬ ಆಚರಣೆ ಮಾಡ್ತಿದ್ದೇವೆ‌. ಅಖಿಲ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಒಳ್ಳೆಯ ಕಾರ್ಯಕ್ರಮ ನಡೆಯುತ್ತಿದೆ. ನಿಮ್ಮೆಲ್ಲರಿಗೆ ನನ್ನ ಧನ್ಯವಾದ ಹೇಳ್ತೇನೆ ಎಂದರು.

ಅಧಿಕಾರ ಯಾವತ್ತು ಶಾಸ್ವತ ಅಲ್ಲ. ಸಂಸದೆ ಸ್ಥಾನ ಹೋದರು ಜಿಲ್ಲೆಯ ಸೊಸೆ ಇದೆ. ಅದು ಯಾವತ್ತು ನನ್ನ ಬಿಟ್ಟುಹೋಗಲ್ಲ. ರಾಜಕಾರಣದಲ್ಲಿ ಏನೋ ಆಗಬೇಕು ಅಂತ ರಾಜಕಾರಣಕ್ಕೆ ಬಂದಿಲ್ಲ. ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದೆ. ರಾಜಕಾರಣದಲ್ಲಿ ಇಲ್ಲದಿದ್ದರೂ ಮಂಡ್ಯ ಜಿಲ್ಲೆಯ ಜನರ ಸಂಬಂಧ ನಿರಂತರ. ಅಧಿಕಾರ ಶಾಶ್ವತ ಅಲ್ಲ, ಪ್ರೀತಿ ಶಾಶ್ವತ. ನಿಮ್ಮ ಸಹಕಾರ ಆಶೀರ್ವಾದ ಎಂದೆಂದಿಗೂ ಇರಲಿ‌. ಫೌಂಡೇಶನ್ ಮೂಲಕ ಸಮಾಜಮುಖಿ ಕಾರ್ಯಕ್ರಮ ಆಗುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ ಎಂದು ಭರವಸೆ ನೀಡಿದರು.

ಬಡವರು, ದಲಿತರ ಪರ ಅಂತಾ ಇದ್ರೆ ಅದು ಮೋದಿ ಸರ್ಕಾರ: ಸುಮಲತಾ ಅಂಬರೀಶ್

ಅಂಬರೀಶ್ ಅವರು ಸಿನಿಮಾ ರಂಗದಲ್ಲಿ ನಾಯಕರಾಗಿದ್ದರು. ಯಾವತ್ತು ಅವರಲ್ಲಿ ನಾನು ಅನ್ನೋ ಅಹಂ ಇರಲಿಲ್ಲ. ರಾಜಕಾರಣದಲ್ಲಿ ಬಂದು ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಅನ್ಯಾಯ ಮಾಡಿಲ್ಲ, ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಯಾವತ್ತು ಅವರು ಪಬ್ಲಿಸಿಟಿ ಮಾಡಿಕೊಂಡಿಲ್ಲ. ಅವರು ಮಾಡಿರು ಕೆಲಸ ಎಲ್ಲರಿಗೂ ಗೊತ್ತಾಗಬೇಕು ಅವರ ಸಾಧನೆ ಎಲ್ಲರು ನೆನೆಪಿಟ್ಟಿಕೊಳ್ಳಬೇಕು‌. ಅಂಬರೀಶ್ ಅವರು ಜೀವನ ಎಲ್ಲರಿಗೂ ಸ್ಪೂರ್ತಿಯಾಗಬೇಕು ಎಂದು ಹೇಳಿದರು.

Latest Videos
Follow Us:
Download App:
  • android
  • ios