Asianet Suvarna News Asianet Suvarna News

ಅಶ್ವಿನಿ ಪುನೀತ್‌ಗೆ ಅವಮಾನ ಮಾಡಿದ ಕಿಡಿಗೇಡಿ; ಮು** ಎಂದವನನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು!

ಪದೇ ಪದೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾಲೆಳೆಯುತ್ತಿರುವ ಕಿಡಿಗೇಡಿ ಯೋಗೇಶ್. ಈತನನ್ನು ಜೈಲಿಗೆ ಹಾಕಲು ಒತ್ತಾಯ......

Abusive post about Ashwini Puneeth Rajkumar goes viral as netizens tags bengaluru police vcs
Author
First Published Aug 28, 2024, 11:30 AM IST | Last Updated Aug 28, 2024, 11:37 AM IST

ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಡಾ ಪುನೀತ್‌ ರಾಜ್‌ಕುಮಾರ್ ಸ್ಥಾವನ್ನು ಪತ್ನಿ ಅಶ್ವಿನಿ ತುಂಬುತ್ತಿದ್ದಾರೆ. ಈ ಸ್ಥಾನವನ್ನು ಅಭಿಮಾನಿಗಳು ಮತ್ತು ಸ್ನೇಹಿತರು ಕೊಟ್ಟಿದ್ದಾರೆ. ಸಿನಿಮಾ ಕಾರ್ಯಕ್ರಮ, ಖಾಸಗಿ ಕಾರ್ಯಕ್ರಮದಲ್ಲಿ ತಪ್ಪದೆ ಅಪ್ಪುಗೆ ನಮನ ಸಲ್ಲಿಸುತ್ತಾರೆ ಹಾಗೂ ಅಶ್ವಿನಿ ಪುನೀತ್‌ರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸುತ್ತಾರೆ. ಅನೇಕರು ಅಶ್ವಿನಿ ಪುನೀತ್ ರಾಜ್‌ಕುಮಾರ್ ದೇವತೆ ಎಂದು ಭಾವಿಸು ಕಾಲಿಗೆ ನಮಸ್ಕರಿಸುತ್ತಾರೆ. ಎಂದೂ ಯಾರ ಬಗ್ಗೆನೂ ಕೆಟ್ಟದಾಗಿ ಮಾತನಾಡದೆ ಹೆಣ್ಣಿನ ಬಗ್ಗೆ ಕಿಡಿಗೇಡಿಯೊಬ್ಬ ಹಾಕಿರುವ ಪೋಸ್ಟ್‌ಗೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಹರ್ಷ ಜಿ ಹೆಸರಿನಲ್ಲಿ ಇರುವ ಯೋಗೇಂದ್ರ ಪ್ರಸಾದ್‌ ಯೂಸರ್ ನೇಮ್‌ ಹಾಕಿಕೊಂಡಿರುವ ಕಿಡಿಗೇಡಿಯೊಬ್ಬ ಟ್ವಿಟರ್‌ನಲ್ಲಿ 'ಗಂಡ ಸತ್ತ ಮು** ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಬಾಳು ಕೊಡಲು ನಿರ್ಧಾರಿಸಿದ್ದೇನೆ. 29ನೇ ಅಕ್ಟೋಬರ್ 2024ರಂದು ನಾನು ವಿವಾಹವಾಗಲಿದೆನೆ ದಯವಿಟ್ಟು ಅಪ್ಪು ಬಾಸ್‌ ಅಭಿಮಾನಿಗಳು ರಾಜವಂಶ ಅಭಿಮಾನಿಗಳು ಎಲ್ಲರೂ ಒಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಂಮಂತ್ರಣ. ಸ್ಥಳ: ಶ್ರೀಕಂಠೀರವನಗರ ಸ್ಟುಡಿಯೋಸ್, ನಾರ್ತ್‌ ವೆಸ್ಟ್‌ ಬೆಂಗಳೂರು' ಎಂದು ಬರೆದುಕೊಂಡಿದ್ದಾನೆ. 

Abusive post about Ashwini Puneeth Rajkumar goes viral as netizens tags bengaluru police vcs

ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ಹರಿದಾಡುತ್ತಿರುವುದು ಇದೇನು ಮೊದಲಲ್ಲ. ಆರ್‌ಸಿಬಿ ತಂಡ ಪದೇ ಪದೇ ಮ್ಯಾಚ್ ಸೋಲುತ್ತಿರುವುದಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಜರ್ಸಿ ಲಾಂಚ್ ಮಾಡಿದ್ದೇ ಕಾರಣ ಎಂದು ಆಗಲೂ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಈ ವಿಚಾರ ಅಶ್ವಿನಿ ಗಮನಕ್ಕೆ ಬಂದಿತ್ತು. 'ಏನು ಮಾಡಲು ಆಗಲ್ಲ ಎದುರಿಸಬೇಕು' ಎಂದು ಹೇಳಿ ಸುಮ್ಮನಾದರು. ಯೊಗೇಂದ್ರ ಮಾಡಿರುವ ಪೋಸ್ಟ್ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಲುಪುವ ಮುನ್ನವೇ ಕ್ರಮಗಳು ತೆಗೆದುಕೊಳ್ಳಬೇಕು ಎಂದು ಅನೇಕರು ಬೆಂಗಳೂರು ಪೊಲೀಸ್‌, ಸೈಬರ್ ಕ್ರೈಂಗೆ ಟ್ಯಾಗ್ ಮಾಡಿದ್ದಾರೆ. 

ತರುಣ್ - ಸೋನಲ್ ಫಸ್ಟ್‌ ನೈಟ್ ಆಯ್ತಾ?; ಹನಿಮೂನ್ ಕೇಳಿದ್ರೆ ಬಜೆಟ್ ಲೆಕ್ಕಾಚಾರವಿದೆ ಅಂದಿದ್ಯಾಕೆ?

ಯೋಗೇಂದ್ರ ಪ್ರಸಾದ್‌ ಕೇವಲ 100 ಫಾಲೋವರ್ಸ್‌ ಹೊಂದಿದ್ದು 'ರಾಜವಂಶದ ಅಭಿಮಾನಿ ಮತ್ತು ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಬಿನ್ನಿಪೇಟೆ ಅಧ್ಯಕ್ಷ' ಎಂದು ಬಯೋ ಬರೆದುಕೊಂಡಿದ್ದಾರೆ. 2023ರಲ್ಲಿ X (ಟ್ವಿಟರ್‌) ಅಕೌಂಟ್ ಓಪನ್ ಮಾಡಿದ್ದು ಪ್ರತಿಯೊಬ್ಬರ ಕಾಲೆಳೆಯುವ ಪೋಸ್ಟ್‌ಗಳನ್ನು ಹಾಕಿದ್ದಾನೆ. 

 

Latest Videos
Follow Us:
Download App:
  • android
  • ios