ಇನ್ನೂ ಐದಂಕಿ ದಾಟಿಲ್ಲ

ಕನ್ನಡದಲ್ಲಿ 10 ಮಂದಿ ನಟಿಯರು ಇದ್ದರೆ ಇವರಲ್ಲಿ 5 ಲಕ್ಷವೂ ಸಂಭಾವನೆ ಪಡೆಯದವರು 8 ಮಂದಿ ಸಿಗುತ್ತಾರೆ. ಅಂದರೆ ಕನ್ನಡದಲ್ಲಿ ಬಹುತೇಕ ನಟಿಯರು ಇನ್ನೂ ಕೂಡ ಐದಂಕಿ ದಾಟಿಲ್ಲ. ಕಥೆಗೆ ಇವರೇ ಬೇಕು, ಇವರು ನೋಡಲು ಚೆನ್ನಾಗಿದ್ದಾರೆ, ನಟನೆ ಇದೆ, ಪ್ರಚಾರ ಸಿಗುತ್ತದೆ ಈ ಎಲ್ಲ ಮಾನದಂಡಗಳಿದ್ದರೂ ಆಕೆ ನವನಟಿ ಎನ್ನುವ ಕಾರಣಕ್ಕೆ ಎರಡು ಲಕ್ಷದಿಂದ ಶುರುವಾಗಿ ಕೊನೆಗೂ 5 ಲಕ್ಷಕ್ಕೆ ಬಂದು ನಿಲ್ಲುತ್ತಾರೆ. ಸಾಕಷ್ಟುಬಾರಿ ಈ ಐದು ಲಕ್ಷದಲ್ಲಿ ಮೂರು ಲಕ್ಷ ಸಿಗುವುದು ಕೂಡ ದೊಡ್ಡ ಮಾತು.

ಸಂಜನಾ, ರಾಗಿಣಿ ಡ್ರಗ್ಸ್‌ ತೆಗೆದುಕೊಂಡಿದ್ದನ್ನು ಪತ್ತೆ ಹಚ್ಚಲು ಸಿಸಿಬಿ ಮಾಸ್ಟರ್ ಪ್ಲಾನ್..! 

10ರ ಗಡಿಯಲ್ಲಿ ಬೇಡಿಕೆಯ ನಟಿಯರು

ಎಲ್ಲಾ ನಟಿಯರದ್ದು ಇದೇ ಸ್ಥಿತಿಯಾ ಎಂದು ಕೇಳಿದರೆ ಹಾಗೇನು ಇಲ್ಲ. ಯಾಕೆಂದರೆ ಮಾರುಕಟ್ಟೆಯಲ್ಲಿ ಇದ್ದಾರೆ, ಅವರ ಸಿನಿಮಾ ನೋಡಲು ಜನ ಬರುತ್ತಾರೆ, ಯಶಸ್ಸು ಇದೆ, ಸ್ಟಾರ್‌ ನಟರ ಜತೆ ನಟಿಸುತ್ತಿದ್ದಾರೆ ಎನ್ನುವ ಕಾರಣಗಳಿಗೆ 10 ರಿಂದ 18 ಲಕ್ಷ ಪಡೆಯುವ ನಟಿಯರು ಕನ್ನಡದಲ್ಲಿದ್ದಾರೆ. ಇದೇ ನಟಿಯರು ಹೊಸ ನಿರ್ಮಾಪಕರ ಬಳಿ 15 ರಿಂದ 20 ಲಕ್ಷ ಡಿಮ್ಯಾಂಡ್‌ ಮಾಡುವುದು ಇದೆ. ಹೊಸ ನಿರ್ಮಾಪಕರು ನಟಿಯರು ಕೇಳಿದಷ್ಟುಕೊಡುವ ಪ್ರತಿಷ್ಠೆಯನ್ನೂ ತೋರಿಸುತ್ತಾರೆ. ಇದೆಲ್ಲವೂ ಸ್ಟಾರ್‌ಡಮ್‌ ಇದ್ದಾಗ ಮಾತ್ರ ನಡೆಯುತ್ತದೆ.

20 ದಾಟದ ನಟಿಯರು

ಏನೇ ಮಾಡಿದರೂ ರೆಗ್ಯುಲರ್‌ ನಿರ್ಮಾಪಕರು 10ರಿಂದ 15 ಲಕ್ಷ ಮಾತ್ರ ಸ್ಟಾರ್‌ ನಟಿಯರಿಗೆ ಕೊಡುತ್ತಾರೆ. ಒಮೊಮ್ಮೆ ಈ ಸಂಭಾವನೆ ನಿರ್ಮಾಪಕ, ಬ್ಯಾನರ್‌, ಹೀರೋ ಯಾರು ಎಂಬುದರ ಮೇಲೆ ನಿರ್ಧಾರ ಆಗುತ್ತದೆ. ಈಗಿನ ಬಹುತೇಕ ನಟಿಯರು ಯಾರೂ ಕೂಡ 20 ಲಕ್ಷ ದಾಟಿಲ್ಲ. ಒಂದು ಜನರೇಷನ್‌ ಹಿಂದಕ್ಕೆ ಹೋದರೆ ಅಂದರೆ ಚಿತ್ರರಂಗಕ್ಕೆ ತಾವೇ ‘ಪದ್ಮಾವತಿ’ಯರು ಎಂದುಕೊಳ್ಳುತ್ತಿರುವವರೇ 25 ರಿಂದ 30 ಲಕ್ಷ ಸಂಭಾವನೆ ಪಡೆದಿದ್ದಾರೆ. ಯಾಕೆಂದರೆ ಇವರಿಗೆ ಬೇರೆ ಭಾಷೆಯಲ್ಲೂ ಮಾರುಕಟ್ಟೆಇತ್ತು. ಜತೆಗೆ ನಾಯಕ ನಟನಷ್ಟೆಸ್ಟಾರ್‌ ಡಮ್‌ ಕೂಡ ಇತ್ತು. ಹೀಗಾಗಿ ಆಗ ಇವರು 20 ಲಕ್ಷಗಳ ಗಡಿ ದಾಟಿದ್ದರು. ಈಗಿನ ಯಾವ ನಟಿಯರಿಗೂ ಆ ಅದೃಷ್ಟಇಲ್ಲ.

ಸಂಜನಾ, ರಾಗಿಣಿಗೆ ಬಚಾವಾಗಲು ಹಾಲಿ, ಮಾಜಿ ಪೊಲೀಸರ ನೆರವು! 

ನಟಿಯರ ವರ್ಷದ ವಹಿವಾಟು

ಕನ್ನಡದಲ್ಲಿ ನಟಿಯರ ವರ್ಷದ ವಹಿವಾಟು ಸರಾಸರಿ 80 ರಿಂದ 1 ಕೋಟಿ ಅಷ್ಟೆ. ಈ ಪೈಕಿ ವರ್ಷಕ್ಕೆ 3 ರಿಂದ 5 ಸಿನಿಮಾಗಳನ್ನು ಮಾಡಿದರೆ ಮಾತ್ರ. ಅಂದರೆ ನಟನೆಯಿಂದ 50 ಲಕ್ಷ ಸಂಪಾದನೆ ಮಾಡಿದರೆ ಉಳಿದಂತೆ 50 ರಿಂದ 60 ಲಕ್ಷ ರುಪಾಯಿಗಳು ನಟನೆಯ ಆಚೆಗೆ ದುಡಿಯುತ್ತಾರೆ. ಅಂದರೆ ಈವೆಂಟ್‌, ಉದ್ಘಾಟನೆ, ರಾಯಭಾರಿ, ಜಾಹೀರಾತು, ಸೋಷಿಯಲ್‌ ಮೀಡಿಯಾಗಳ ಪ್ರಚಾರಕರಾಗಿ, ಚುನಾವಣೆಯಲ್ಲಿ ರಾಜಕಾರಣಿಗಳ ಸ್ಟಾರ್‌ ಪ್ರಚಾರಕರಾಗಿ... ಹೀಗೆ ಬೇರೆ ಬೇರೆ ಮೂಲಗಳಿಂದ ಏನೇ ದುಡಿದರೂ 50 ರಿಂದ 60 ಲಕ್ಷ ದಾಟದು. ಅಲ್ಲಿಗೆ ಕನ್ನಡದಲ್ಲಿ ಒಬ್ಬ ನಟಿಯ ವರ್ಷದ ವಹಿವಾಟು 1 ಕೋಟಿ ಮುಟ್ಟುವುದು ಕಷ್ಟ.

"

ಕೋಟಿಗಳಿಗೆ ಕೋಟೆ ಲೈಫು

ಚಿತ್ರರಂಗದಲ್ಲಿ 5, 10, 12 ಲಕ್ಷ ಸಂಭಾವನೆ ಪಡೆಯುತ್ತ, ಇನ್ನೂ ಕೋಟಿ ಕೂಡ ಮುಟ್ಟದ ಈ ನಟಿಯರ ಜೀವನ ಮಾತ್ರ ಕೋಟಿಗಳ ಕೋಟೆ ಕಟ್ಟಿರುತ್ತದೆ. ಆಡಿ, ಬೆಂಜ್‌ ಕಾರು, ಐಶರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ಲಕ್ಸುರಿ ಜೀವನ ಮಾಡುತ್ತಿರುತ್ತಾರೆ. ಇವರ ವರ್ಷದ ವಹಿವಾಟಿನಲ್ಲಿ ಮುಕ್ಕಾಲು ಪಾಲು ಈ ರೆಗ್ಯೂಲರ್‌ ಜೀವನಕ್ಕೆ ಸರಿ ಹೋಗುತ್ತದೆ. ಹಾಗಾದರೆ ಪಾರ್ಟಿ, ಮೋಜು, ಮಸ್ತಿ, ವಿದೇಶಿ ಪ್ರಯಾಣಕ್ಕೆ ಎಲ್ಲಿಂದ ಹಣ ಬರುತ್ತದೆ ಎಂಬುದೇ ಒಂದು ಸೋಜಿಗದ ವಿಷಯ.

ಕೋಟಿಗಳ ಲೆಕ್ಕದಲ್ಲಿ ಆಸ್ತಿ ಮಾಡಿರುತ್ತಾರೆ, ತಿಂಗಳಿಗೆ ಐದಾರು ಸಲ ವಿದೇಶ ಸುತ್ತಿ ಬರುತ್ತಾರೆ, ವೀಕೆಂಡ್‌ ಬಂದ ಕೂಡಲೇ ಲಕ್ಷಗಳ ಲೆಕ್ಕದಲ್ಲಿ ವೆಚ್ಚ ಮಾಡಿ ಪಾರ್ಟಿಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿರುವ ಬಹುತೇಕ ನಟಿಯರು ವರ್ಷಕ್ಕೆ ಎರಡೋ ಮೂರೋ ಸಿನಿಮಾಗಳಲ್ಲಿ ನಟಿಸಿದರೆ ಅದೇ ಹೆಚ್ಚು. ಈಗ ಬಂಧನಕ್ಕೊಳಗಾಗಿರುವ ಇಬ್ಬರ ನಟಿಯರನ್ನೇ ತೆಗೆದುಕೊಳ್ಳಿ. ಸೂಪರ್‌ ಹಿಟ್‌ ಅನಿಸುವ ಸಿನಿಮಾ ಕೊಟ್ಟವರಲ್ಲ, ‘ನಾನು 50 ಸಿನಿಮಾ ಮಾಡಿದ್ದೇನೆ, ಮೋಹನ್‌ ಲಾಲ್‌, ಪವನ್‌ ಕಲ್ಯಾಣ್‌, ದರ್ಶನ್‌ ಜತೆ ನಟಿಸಿದ್ದೇನೆ’ ಎನ್ನುವವರೂ ಅಲ್ಲಿ ಚಿಕ್ಕಪುಟ್ಟಪಾತ್ರಗಳನ್ನಷ್ಟೇ ಮಾಡಿರುತ್ತಾರೆ. ಅಷ್ಟಕ್ಕೆ ಇವರು ಕೋಟಿ ಕೋಟಿ ದುಡಿಯಲು ಸಾಧ್ಯವೇ ಎಂಬುದು ಸದ್ಯದ ಪ್ರಶ್ನೆ.