‘ಬಾ ಬಾ ಬಾ ನಾನ್‌ ರೆಡಿ’ ಹಾಡಿಗೆ ಮೂರು ಮಿಲಿ​ಯನ್‌ ವೀಕ್ಷ​ಣೆಗೆ ಪಾತ್ರ​ವಾ​ಗಿದೆ. ‘ಜೈ ಶ್ರೀರಾ​ಮ್‌’ ಹಾಡು ಎರಡು ಮಿಲಿ​ಯನ್‌ ಗಡಿ ಮುಟ್ಟಿದೆ. ಈಗ ಮೂರನೇ ಹಾಡಾಗಿ ‘ದೋಸ್ತಾ ಕಣೋ... ಬ್ರದರ್‌ ಫ್ರಂ ಅನದರ್‌ ಮದರ್‌’ ಎಂದು ಸಾಗುವ ಹಾಡು ಬಿಡು​ಗಡೆ ಆಗಿದೆ. ಸ್ನೇಹದ ಮಹತ್ವವನ್ನು ಸಾರುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಎರಡೇ ಗಂಟೆಯಲ್ಲಿ 5 ಲಕ್ಷ ವೀಕ್ಷಣೆ ಕಂಡಿದೆ.

ರಾಬರ್ಟ್‌ ಚಿತ್ರ 'Brothers from another mother' ಸಾಂಗ್‌ ಇಲ್ಲಿದೆ ನೋಡಿ! ...

‘ಮೈ ಬ್ರದರ್‌ ಫ್ರಂ ಅನದರ್‌ ಮದರ್‌, ಬೈದು ಬುದ್ದಿ ಹೇಳೋ ಫಾದರ್‌ ಕಣೋ ಇವನು ನೋವಲ್ಲಿ ಕಣ್ಣೀರು ಒರೆಸೋ ಮದರು ಕಣೋ ಜೀವನಕ್ಕೆ ಪಾಠ ಟೀಚರ್‌ ಕಣೋ ಇವನು ಲೈಫು ಪಾಟ್ನರ್‌ಗಿಂತ ಕ್ಲೋಸು ಕಣೋ ರಕ್ತ ಸಂಬಂಧ ಮೀರಿದ ಬಂಧು ಇವನು ಜಾತಿ ಮತಕ್ಕಿಂತ ತುಂಬಾ ದೊಡ್ಡವನು ಇವನು... ’ಎಂದು ಶುರುವಾಗುವ ಹಾಡನ್ನು ಚೇತನ್‌ ಕುಮಾರ್‌ ಬರೆದು ವಿಜಯ ಪ್ರಕಾಶ್‌ ಹಾಗೂ ಹೇಮಂತ್‌ ಕುಮಾರ್‌ ಹಾಡಿದ್ದಾರೆ. ಹಾಡಿನ ಉದ್ದಕ್ಕೂ ಚಿತ್ರತಂಡದ ಗೆಳೆಯರು, ನಟರು, ನಿರ್ದೇಶಕರು, ತಂತ್ರಜ್ಞರು, ನಿರ್ಮಾಪಕರ ಸ್ನೇಹಿತರ ಬಳಗದ ಚಿತ್ರಗಳನ್ನು ತೋರಿಸುವ ಮೂಲಕ ಗೆಳೆತನಕ್ಕೆ ಈ ಹಾಡನ್ನು ಅರ್ಪಿಸಲಾಗಿದೆ.‘ಕುಚ್ಚುಕು ಕುಚ್ಚುಕು’ ಹಾಡಿನ ಬಳಿಕ ಗೆಳೆತನದ ವಿಚಾರದಲ್ಲಿ ಎಲ್ಲರ ಬಾಯಲ್ಲಿ ಗುನುಗುಟ್ಟುವಂತಹ ಮತ್ತೊಂದು ಹಾಡು ಇದು ಎನ್ನ​ಲಾ​ಗು​ತ್ತಿ​ದೆ.

"

‘ರಾಬ​ರ್ಟ್‌’ ಚಿತ್ರದ ಹಾದಿ​ಯಲ್ಲೇ ಧ್ರುವ ಸರ್ಜಾ ಅವರ ‘ಪೊಗ​ರು’ ಚಿತ್ರವೂ ಹೆಜ್ಜೆ ಹಾಕಿದ್ದು, ಈ ಚಿತ್ರದ ಮೊದಲ ಹಾಡು ಇನ್ನೇನು ಬಿಡು​ಗಡೆ ಆಗಲು ಸಜ್ಜಾ​ಗಿದೆ. ಆ ಮೂಲಕ ಕೊರೋನಾ ಚಿಂತೆ ಬಿಡಿ, ಹಾಡು ಕೇಳಿ ಹಾಯಾಗಿ ಇರಿ ಎನ್ನು​ತ್ತಿದೆ ಚಿತ್ರ​ರಂಗ.