'ಅಮರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಜೂನಿಯರ್ ರೆಬೆಲ್ ಸ್ಟಾರ್  ಅಭಿಷೇಶ್ ಅಂಬರೀಶ್ ತಮ್ಮ ಅಭಿಮಾನಿಗಳು ಹಾಗೂ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

'ಕ್ರಿಕೆಟ್ ಇನ್ ಮಂಡ್ಯ'  ಅಂತ ಅಭಿ ಫೋಟೋ ಹಾಗೂ ಲಿಂಕ್ ಅನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಶೇರ್ ಮಾಡಿಕೊಂಡಿದ್ದಾರೆ. 

"

ದಾಡಿ ಬಂದ ಮೇಲೆ ಡ್ಯಾಡಿಯಂತಾದ ಅಭಿಷೇಕ್ ಅಂಬರೀಶ್!

ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು ಅಭಿಷೇಕ್ ಅಂಬರೀಶ್. ರೆಬೆಲ್ ಚಾಲೆಂಜ್ ಕಪ್ ರಾಜ್ಯ ಮಟ್ಟದ ಟೆನ್ನಿಸ್ ಬಾಲ ಕ್ರಿಕೆಟ್ ಪಂದ್ಯಾವಳಿ ಮಂಡ್ಯದ ಸರ್ಕಾರಿ ಕಾಲೇಜಿನ ಆವರಣದಲ್ಲಿ ನಡೆಯಿತು. 

ರೆಬೆಲ್ ಸೋಮು ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಆಗಿದೆ.  ಒಂದೇ ಕೈಯಲ್ಲಿ ಅಭಿಷೇಕ್ ಬ್ಯಾಟ್ ಹಿಡಿದು ಬಂದ ಬಾಲನ್ನು ಆಕಾಶಕ್ಕೆ ಹಾರಿಸಿದ್ದಾರೆ.  ಈ ವೇಳೆ ವೀಕ್ಷಿಸಲು ಬಂದ ಜನರು ತಮ್ಮ ನೆಚ್ಚಿನ ಮಂಡ್ಯದ ಮಗನೊಂದಿಗೆ ಫೋಟೋ ಹಾಗೂ ವಿಡಿಯೋ ತೆಗೆಸಿಕೊಂಡಿದ್ದಾರೆ.

 

 
 
 
 
 
 
 
 
 
 
 
 
 

#abishekambareesh #cricket

A post shared by Rebel stars (@rebels_somu) on Dec 29, 2019 at 4:16am PST