Asianet Suvarna News Asianet Suvarna News

ಹಸೆಮಣೆ ಏರಲು ಸಜ್ಜಾದ ನಟ ಅಭಿಷೇಕ್ ಅಂಬರೀಶ್; ಹುಡುಗಿ ಯಾರು, ಯಾವಾಗ ಮದುವೆ? ಇಲ್ಲಿದೆ ವಿವರ

ಸ್ಯಾಂಡಲ್ ವುಡ್ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈಗಾಗಲೇ ನಿಶ್ಚಿತಾರ್ಥ ದಿನಾಂಕ ಕೂಡ ಫಿಕ್ಸ್ ಆಗಿದ್ದು ಅದ್ದೂರಿಯಾದ ಸಮಾರಂಭದಲ್ಲಿ ಅಭಿಷೇಕ್ ಎಂಗೇಜ್ ಆಗಲಿದ್ದಾರೆ ಎನ್ನಲಾಗಿದೆ. 

abhishek ambareesh getting marriage soon news viral sgk
Author
First Published Nov 23, 2022, 1:13 PM IST

ರೆಬಲ್ ಸ್ಟಾರ್ ಅಂಬರೀಶ್ ಪುತ್ರ, ಸ್ಯಾಂಡಲ್ ವುಡ್‌ನ ಭರವಸೆಯ ನಟ ಅಭಿಷೇಕ್ ಅಂಬರೀಶ್ ಅವರಿಗೆ ಕಂಗಣ ಭಾಗ್ಯ ಕೂಡಿ ಬಂದಿದೆ. ರೆಬಲ್ ಸ್ಟಾರ್ ಮತ್ತು ಸಮಲತಾ ದಂಪತಿಯ ಏಕೈಕ ಪುತ್ರ ಅಭಿಷೇಕ್ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ ಅಭಿಷೇಕ್ ಮದುವೆ ಸುದ್ದಿ ಹರಿದಾಡುತ್ತಿದೆ. ಅಭಿಷೇಕ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಸಾಲು ಸಾಲು ಸಿನಿಮಾಗಳಿವೆ. ಈ ನಡುವೆ ಮದುವೆ  ಸುದ್ದಿ ಕೂಡ ವೈರಲ್ ಆಗಿದೆ. ಅಂದಹಾಗೆ ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಈಗಾಗಲೇ ನಿಶ್ಚಿತಾರ್ಥ ದಿನಾಂಕ ಕೂಡ ಫಿಕ್ಸ್ ಆಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಂಬರೀಶ್ ಕುಟುಂಬದ ಕಡೆಯಿಂದ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಅಭಿಷೇಕ್ ಮದುವೆ ವಿಚಾರವನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿದ್ದು ರಹಸ್ಯವಾಗಿಯೇ ಎಲ್ಲಾ ತಯಾರಿ ಮಾಡಲಾಗುತ್ತಿದೆ ಎನ್ನಲಾಗಿದೆ. 

ಹುಡುಗಿ ಯಾರು? 

ಅಭಿಷೇಕ್ ಅಂಬರೀಶ್ ಮದುವೆ ಸುದ್ದಿ ವೈರಲ್ ಆಗುತ್ತಿದ್ದಂತೆ ಹುಡುಗಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಅಂಬಿ ಮನೆಯ ಸೊಸೆ ಯಾರೆಂದು ನೋಡಲು, ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಮೂಲಗಳ ಪ್ರಕಾರ ಅಂಬರೀಶ್ ಕೈ ಹಿಡಿಯುತ್ತಿರುವ ಹುಡುಗಿ ಖ್ಯಾತ ಮಾಡೆಲ್ ಎಂದು ಹೇಳಲಾಗುತ್ತಿದೆ. ಅಂದಹಾಗೆ ಅಭಿ ಮದುವೆ ಕಂಪ್ಲೀಟ್ ಅರೇಂಜ್ ಮ್ಯಾರೇಜ್ ಆಗಿದ್ದು ಅಮ್ಮ ನೋಡಿರುವ ಹುಡುಗಿಯನ್ನೇ ಮದುವೆಯಾಗಲು ಯಂಗ್ ರೆಬೆಲ್ ಸ್ಟಾರ್ ನಿರ್ಧಾರ ಮಾಡಿದ್ದಾರಂತೆ. ಆದರೆ ಯಾರು ಎಂದು ಎಲ್ಲಿಯೂ ಬಹಿರಂಗ ಪಡಿಸಿಲ್ಲ. 

ಅಭಿಷೇಕ್ ಅಂಬರೀಷ್‌ಗೆ ಜೋಡಿಯಾದ 'ಕಾಂತಾರ' ಲೀಲಾ

ಯಾವಾಗ ನಿಶ್ಚಿತಾರ್ಥ?

ಅಂದಹಾಗೆ ಅಭಿಷೇಕ್ ನಿಶ್ಚಿತಾರ್ಥ ಸಮಾರಂಭ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎನ್ನಲಾಗಿದೆ. ಡಿಸೆಂಬರ್ 11ರಂದು ಅಭಿಷೇಕ್ ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆಗಳು ಆಗಿದ್ದು ಈಗಾಗಲೇ ತಯಾರಿ ನಡೆಯುತ್ತಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ನಿಶ್ಚಿತಾರ್ಥಕೆ ಬೇಕಾಗಿರುವ ಎಲ್ಲ ತಯಾರಿಗಳನ್ನ ಖಾಸಗಿ ಈವೆಂಟ್ ಕಂಪನಿಗೆ ನೀಡಲಾಗಿದೆಯಂತೆ. ನಿಶ್ಚಿತಾರ್ಥದವರೆಗೂ ಹುಡುಗಿಯ ಬಗ್ಗೆ ಆಗಲಿ ಅಥವಾ ಮದುವೆ ಬಗ್ಗೆ ಆಗಲಿ ಯಾರಿಗೂ ವಿಚಾರ ತಿಳಿಯಬಾರದು ಎನ್ನುವ ಕಾರಣದಿಂದ ಹುಡುಗಿ ಹಾಗೂ ನಿಶ್ಚಿತಾರ್ಥದ ದಿನಾಂಕವನ್ನು ಗುಟ್ಟಾಗಿ ಇಟ್ಟಿದ್ದಾರಂತೆ ಸುಮಲತಾ ಅಂಬರೀಶ್.

Bad Manners Teaser: ವ್ಯವಸ್ಥೆ ತಪ್ಪಲ್ಲ ಮನುಷ್ಯರ ಯೋಚನೆ ತಪ್ಪು..ಅಭಿಷೇಕ್ ಮಾಸ್ ಎಂಟ್ರಿಗೆ ಫ್ಯಾನ್ಸ್ ಫಿದಾ

ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮೊದಲ ಸಿನಿಮಾದಲ್ಲೇ ಅಭಿಷೇಕ್ ಭರವಸೆ ನಟನಾಗಿ ಹೊರಹೊಮ್ಮಿದರು. ಈ ಸಿನಿಮಾ ಬಳಿಕ ಅನೇಕ ಸಿನಿಮಾ ಆಫರ್ ಬಂದರೂ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಸದ್ಯ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಅಭಿಷೇಕ್ ಮದುವೆಗೆ ಸಿದ್ಧರಾಗಿದ್ದಾರೆ. ಮದುವೆ ವಿಚಾರ ನಿಜವೇ ಆಗಿದ್ದರೆ ಮುಂದಿನ ವರ್ಷ ಹಸೆಮಣೆ ಏರುವ ಸಾಧ್ಯತೆ ಇದೆ. 

Follow Us:
Download App:
  • android
  • ios