ರಿಲೀಸ್ ಆಗಲಿವೆ ಸಾಲು ಸಾಲು ಬಹು ನಿರೀಕ್ಷಿತ ಸಿನಿಮಾಗಳು | ಥಿಯೇಟರ್‌ಗಳಲ್ಲಿ ಶೇ 100 ಸೀಟು ಭರ್ತಿಗೆ ಹೆಚ್ಚಿದ ಒತ್ತಡ | ಇಂದು ಮಹತ್ವದ ನಿರ್ಧಾರ..?

ರಾಜ್ಯ ಸರ್ಕಾರದಿಂದ ಚಿತ್ರಮಂದಿರಕ್ಕೆ ಶೇ 50% ಮಾತ್ರ ಅವಕಾಶ ನೀಡಲಾಗಿದ್ದು, 100% ಅವಕಾಶ ಕೊಡುವಂತೆ ನಟ, ಶಾಸಕ ಕುಮಾರ್ ಬಂಗಾರಪ್ಪನವರಿಗೆ ಚಿತ್ರರಂಗದದಿಂದ ಮನವಿ ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಕರ್ನಾಟಕ‌ ಚಲನಚಿತ್ರ ವಾಣಿಜ್ಯ ಮಂಡಳಿ ಕುಮಾರ್ ಬಂಗಾರಪ್ಪ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದೆ. ಶೇಕಡ 100 ಸೀಟು ಬರ್ತಿಗೆ ಅವಕಾಶ ಮಾಡಿಕೊಡುಂತೆ ಸರ್ಕಾರ‌ ಗಮನಕ್ಕೆ ತನ್ನಿ ಎಂದು ಮನವಿ ಮಾಡಲಾಗಿದೆ.

"

ಗುಬ್ಬಿ ಜಯರಾಜ್, ನಿರ್ಮಾಪಕ‌ ಸೂರಪ್ಪ ಬಾಬು, ಉಮೇಶ್ ಬಣಕಾರ್ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಬಂಗಾರಪ್ಪ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದ್ದಾರೆ.

ಸರ್ಕಾರದಿಂದ ಶೇಕಡ 50% ಮಾತ್ರ ಅವಕಾಶ ನೀಡಿರೋದು ಬೇಸರದ ಸಂಗತಿ. ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿ ನೂರರಷ್ಟು ಅವಕಾಶ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಿದ್ದೇವೆ. ಆದಷ್ಟು ಬೇಗ ಈ ಬಗ್ಗೆ ಪುನರ್ ಪರಿಶೀಲನೆ ಮಾಡಿ ಎಂದು ಕೇಳುತ್ತೇವೆ. ಸದ್ಯ ಮುಖ್ಯಮಂತ್ರಿಗಳ ಕಾಲಾವಕಾಶ ಸಿಕ್ಕಿಲ್ಲ ಎನ್ನಲಾಗಿದೆ.

"

ಎಲ್ಲಾ ರಾಜ್ಯದಲ್ಲಿಯೂ 100%ಅವಕಾಶ ನೀಡಿದ್ದಾರೆ ನಮಗೆ ಮಾತ್ರ 50% ಯಾಕೆ ಗೊತ್ತಾಗುತ್ತಿಲ್ಲ. ಬೆಳಗ್ಗೆ ಪೊಗರು ಸಿನಿಮಾ ನಿರ್ಮಾಪಕರು ಕರೆ ಮಾಡಿದ್ದರು. ಅವರಿಗೂ ಸಮಸ್ಯೆ ಆಗಿದೆ. ಈಗಾಗಲೇ ಮುಖ್ಯಮಂತ್ರಿಗಳ‌ ಗಮನಕ್ಕೆ ಈ‌ವಿಚಾರ ತಂದಿದ್ದೇವೆ ಎನ್ನಲಾಗಿದೆ.

ಸಿಎಂ ಅವಕಾಶ ಕೊಟ್ಟರೆ ಕಲಾವಿದರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಮೊದಲಿಗೆ ಅವರ ಸಮಯಾವಕಾಶ ಸಿಗಬೇಕು. ಅದಕ್ಕಾಗಿ ಕಾಯುತ್ತಿದ್ದೇವೆ. ಈ ಬಗ್ಗೆ ಸಿಎಂ ಜೊತೆ ನಿನ್ನೆಯೇ ಚರ್ಚೆಸಿದ್ದೇನೆ‌‌. ಸಿನಿಮಾಗಳನ್ನ ನೋಡೋರಿಗೆ ಶೇಕಡ ನೂರರಷ್ಟು ಅವಕಾಶ ಕಲ್ಪಿಸುತ್ತೇವೆ. ಸಿಎಂ ಕೂಡ ಭರವಸೆ ನೀಡಿದ್ದಾರೆ.‌ ಇವತ್ತು ಸಂಜೆ ಒಳಗೆ ಗೊಂದಲ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

"

ಹೋರಾಟಕ್ಕೆ ಸಜ್ಜಾದ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರು ಈಗಾಗಲೇ ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ. ಸರ್ಕಾರ ಮನವಿಗೆ ಒಪ್ಪದಿದ್ದಲ್ಲಿ ಸ್ಟಾರ್ ನಟರೆಲ್ಲಾ ಸೇರಿ ಹೋರಾಟ ಮಾಡುತ್ತೇವೆ. ಹೋರಾಟಕ್ಕೆ ಸಾಥ್ ನೀಡಲು ಸ್ಟಾರ್ ನಟರು ಒಪ್ಪಿದ್ದಾರೆ ಎಂದು ಶಿವರಾಜ್ ಕುಮಾರ್ , ದುನಿಯಾ ವಿಜಿ, ಧೃವ ಸರ್ಜಾ, ಡಾಲಿ ಧನಂಜಯ್ ಜೊತೆ ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕೆ.ಪಿ ಶ್ರೀಕಾಂತ್ ತಿಳಿಸಿದ್ದಾರೆ.