Asianet Suvarna News Asianet Suvarna News

World Childrens Day: ವಿಶ್ವ ಮಕ್ಕಳ ದಿನದ ಇತಿಹಾಸ ಮತ್ತು ಮಹತ್ವ

ಪ್ರತಿ ವರ್ಷ ನವೆಂಬರ್ 20ರಂದು ವಿಶ್ವ ಮಕ್ಕಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರಪಂಚದಾದ್ಯಂತ ಇರುವ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದೇ ಈ ದಿನವನ್ನು ಆಚರಿಸುವುದರ ಹಿಂದಿರುವ ಉದ್ದೇಶವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

World Childrens Day 2022: Theme, History, Significance Vin
Author
First Published Nov 20, 2022, 10:56 AM IST

ನವೆಂಬರ್ 20ರಂದು ಅಸೆಂಬ್ಲಿಯು 1959ರಲ್ಲಿ ಮಕ್ಕಳ ಹಕ್ಕುಗಳ (Childrens rights) ಘೋಷಣೆಯನ್ನು ಮತ್ತು 1989ರಲ್ಲಿ ಮಕ್ಕಳ ಹಕ್ಕುಗಳ ಸಮಾವೇಶವನ್ನು ಅಂಗೀಕರಿಸಿದ ದಿನವನ್ನು ಗುರುತಿಸುತ್ತದೆ. ಎಲ್ಲಾ ರೀತಿಯ ತಾರತಮ್ಯದಿಂದ ಮಕ್ಕಳನ್ನು ರಕ್ಷಿಸಲು ಈ ದಿನವನ್ನು ಅಚರಿಸಲು ನಿರ್ಧರಿಸಲಾಯಿತು. 1954ರಲ್ಲಿ ಸ್ಥಾಪಿಸಲಾದ ವಿಶ್ವಸಂಸ್ಥೆಯ (UN) ವಿಶ್ವ ಮಕ್ಕಳ ದಿನವನ್ನು ಪ್ರತಿ ವರ್ಷ ನವೆಂಬರ್ 20 ರಂದು ವಿಶ್ವಾದ್ಯಂತ ಆಚರಿಸುತ್ತದೆ. ಶಿಕ್ಷಣ (Education) ಹಾಗೂ ಅವರ ಅಭಿವೃದ್ದಿಗೆ ಪೂರಕವಾಗುವಂತೆ ಬಾಲ್ಯ (Childhood)ದಲ್ಲಿಯೇ ಮಕ್ಕಳಿಗೆ ತಿಳುವಳಿಕೆಯನ್ನು ನೀಡುವುದು ಅಗತ್ಯವಾಗಿದೆ.  'ಇಂದಿನ ಮಕ್ಕಳೇ ನಾಳಿನ ಪ್ರಜೆಗಳು' ಹೀಗಾಗಿ ಮಕ್ಕಳು ಆರೋಗ್ಯವಂತ ಮತ್ತು ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಲು ಅವಕಾಶ ನೀಡುವುದಕ್ಕಾಗಿ ವಿಶ್ವ ಮಕ್ಕಳ ಹಕ್ಕುಗಳ ದಿನ ಆಚರಿಸಲು ತೀರ್ಮಾನಿಸಲಾಯಿತು.

ವಿಶ್ವ ಮಕ್ಕಳ ದಿನದ ಇತಿಹಾಸ
1857ರಲ್ಲಿ ಲಿಯೊನಾರ್ಡ್‌ದ ಪಾದ್ರಿ ರೆವರೆಂಡ್ ಡಾ. ಚಾರ್ಲ್ಸ್ ವಿಶ್ವ ಮಕ್ಕಳ ದಿನವನ್ನು ಮೊದಲಿಗೆ ಪ್ರಾರಂಭಿಸಿದರು. ಲಿಯೊನಾರ್ಡ್‌ನಲ್ಲಿ ಆರಂಭದಲ್ಲಿ ಈ ದಿನವನ್ನು ರೋಸ್ ಡೇ ಎಂದು ಕರೆಯಾಗುತ್ತಿತ್ತು ನಂತರ ಮಕ್ಕಳ ದಿನ ಎಂದು ಹೆಸರಿಸಲಾಯಿತು.
ವಿಶ್ವ ಮಕ್ಕಳ ದಿನವನ್ನು ಮೊದಲು ಅಧಿಕೃತವಾಗಿ 1920, ಏಪ್ರಿಲ್ 23 ರಂದು ರಿಪಬ್ಲಿಕ್ ಆಫ್ ಟರ್ಕಿಯಿಂದ ರಾಷ್ಟ್ರೀಯ ರಜಾದಿನವೆಂದು ಘೋಷಿಸಲ್ಪಟ್ಟಿತು. ವಿಶ್ವ ಮಕ್ಕಳ ದಿನವನ್ನು (World childrens day) 1954 ರಲ್ಲಿ ವಿಶ್ವಸಂಸ್ಥೆಯು ಸ್ಥಾಪಿಸಿದರು, 1959ರ ವರೆಗೆ UN ಜನರಲ್ ಅಸೆಂಬ್ಲಿ ಮಕ್ಕಳ ಹಕ್ಕುಗಳ ಘೋಷಣೆಯ ವಿಸ್ತೃತ ರೂಪವನ್ನು ಅಳವಡಿಸಿಕೊಂಡಿತು.

'ಮಕ್ಕಳ ದಿನಾಚರಣೆ' ಗೂಗಲ್ ಡೂಡಲ್ ವಿಶ್; ಮಕ್ಕಳು ಫುಲ್ ಖುಷ್!

ವಿಶ್ವ ಮಕ್ಕಳ ದಿನದ ಮಹತ್ವ
ವಿಶ್ವ ಮಕ್ಕಳ ದಿನವು ನಮ್ಮಲ್ಲಿ ಪ್ರತಿಯೊಬ್ಬರಿಗೂ ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸಲು, ಉತ್ತೇಜಿಸಲು ಮತ್ತು ಆಚರಿಸಲು ಉತ್ತೇಜಿಸುತ್ತದೆ. ಮಕ್ಕಳಿಗಾಗಿ ಉತ್ತಮ ಜಗತ್ತನ್ನು ನಿರ್ಮಿಸುವ ಪಣ ತೊಡುತ್ತದೆ. ಪ್ರಪಂಚದಾದ್ಯಂತ ಶಿಕ್ಷಣ, ಆರೋಗ್ಯ ಸೇವೆ ಅಥವಾ ಇತರ ಹಲವು ಅವಕಾಶಗಳಿಂದ ವಂಚಿತರಾದ ಲಕ್ಷಾಂತರ ಮಕ್ಕಳಿದ್ದಾರೆ. ತಮ್ಮ ಹಕ್ಕುಗಳಿಂದ ವಂಚಿತರಾಗಿರುವ ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಈ ವಿಶ್ವ ಮಕ್ಕಳ ದಿನದ ಪ್ರಮುಖ ಗುರಿಗಳಲ್ಲಿ ಒಂದಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ನಡೆದ ವಿಶ್ವಸಂಸ್ಥೆಯ ಸಮಾವೇಶದಲ್ಲಿ ಅಂಗೀಕೃತಗೊಂಡ 'ಎಲ್ಲಾ ಮಕ್ಕಳು ಮೂಲಭೂತ ಹಕ್ಕುಗಳೊಂದಿಗೆ ಜನಿಸುತ್ತಾರೆ' ಎಂಬ ಮಾತನ್ನು ಭಾರತವು 1992ರಲ್ಲಿ ಅಂಗೀಕರಿಸಿತು.

ವಿಶ್ವ ಮಕ್ಕಳ ದಿನಾಚರಣೆ 2022ರ ಥೀಮ್
ವಿಶ್ವ ಮಕ್ಕಳ ದಿನವು ಮಕ್ಕಳಿಗಾಗಿ UNICEF ನ ವಾರ್ಷಿಕ ದಿನವಾಗಿದೆ. ಹವಾಮಾನ ಬದಲಾವಣೆ, ಶಿಕ್ಷಣ ಮತ್ತು ಮಾನಸಿಕ ಆರೋಗ್ಯ, ವರ್ಣಭೇದ ನೀತಿ ಮತ್ತು ತಾರತಮ್ಯವನ್ನು ಕೊನೆಗೊಳಿಸುವವರೆಗೆ, ಮಕ್ಕಳು ಮತ್ತು ಯುವಜನರು ತಮ್ಮ ಪೀಳಿಗೆಗೆ ಮುಖ್ಯವಾದ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ ಮತ್ತು ಕರೆ ನೀಡುತ್ತಾರೆ. ವಯಸ್ಕರು ಉತ್ತಮ ಭವಿಷ್ಯವನ್ನು (Future) ಸೃಷ್ಟಿಸಲು ಈ ವಿಶ್ವ ಮಕ್ಕಳ ದಿನ, ಪ್ರಪಂಚವು ಅವರ ಆಲೋಚನೆಗಳು (Thinking) ಮತ್ತು ಬೇಡಿಕೆಗಳನ್ನು ಆಲಿಸುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ನವೆಂಬರ್ 20 ರಂದು, ಮಕ್ಕಳು ಹೆಚ್ಚು ಸಮಾನವಾದ, ಅಂತರ್ಗತ ಜಗತ್ತಿಗೆ ನಿಲ್ಲುತ್ತಾರೆ ಎಂದು UN ವೆಬ್‌ಸೈಟ್ ಹೇಳುತ್ತದೆ.

Children's Day: ಕನ್ನಡ ನಟ, ನಟಿಯರ ಬಾಲ್ಯದ ಆಟ ಆ ಹುಡುಗಾಟ

ವಿಶ್ವ ಮಕ್ಕಳ ದಿನದ ಮುಖ್ಯ ಉದ್ದೇಶಗಳು 
ಹಸಿದ ಮಕ್ಕಳಿಗೆ ಆಹಾರ, ಅನಾರೋಗ್ಯದ ಬಳಲುತ್ತಿರುವ ಮಗುವಿಗೆ ಚಿಕಿತ್ಸೆ, ಸೂರಿಲ್ಲದ ಅನಾಥ ಮಕ್ಕಳಿಗೆ ಆಶ್ರಯ ನೀಡುವುದು, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸುವುದನ್ನು ಒಳಗೊಂಡಿದೆ. 2012 ರಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಬಾನ್ ಕಿ-ಮೂನ್ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಆದ್ಯತೆಯನ್ನು ನೀಡಿದ್ದರು. 2015 ರ ವೇಳೆಗೆ ಪ್ರತಿ ಮಗುವೂ ಶಾಲೆಗೆ ಹೋಗಬೇಕೆಂದು ಕಡ್ಡಾಯಗೊಳಿಸಿದರು. ಜೊತೆಗೆ ಶಾಂತಿ, ಗೌರವ ಮತ್ತು ಪರಿಸರ ಕಾಳಜಿಯನ್ನು ಮಕ್ಕಳಲ್ಲಿ ಉತ್ತೇಜಿಸಲಾಯಿತು.

Follow Us:
Download App:
  • android
  • ios