ಎಡಬದಿಯ ಮನೆಯವ್ರು ಬಿಸಿಬೇಳೆ ಬಾತ್​, ಬಲಗಡೆಯವ್ರು ಇಡ್ಲಿ ಕಳಿಸ್ತಾರೆ..ಟ್ವಿಟರ್​ಗೆ ನೆಟ್ಟಿಗರು ಫಿದಾ

ಸಂಬಂಧಗಳ ಮಹತ್ವ ಕಡಿಮೆಯಾಗ್ತಿರೋ ಈ ದಿನಗಳಲ್ಲೂ ಮೈಸೂರಿನಲ್ಲಿ ಹೇಗೆ ನೆರೆಹೊರೆಯವರು ಪ್ರೀತಿಯಿಂದ ಇದ್ದೇವೆ ಎಂಬ ಬಗ್ಗೆ ಮಹಿಳೆಯೊಬ್ಬರು ಬರೆದಿದ್ದು, ಅದೀಗ ಭಾರಿ ವೈರಲ್​ ಆಗಿದೆ.

Woman writes about helpful neighbours in her locality in Mysore suc

ಮಹಾನಗರಗಳಲ್ಲಿ ಸಂಪೂರ್ಣ ಯಾಂತ್ರಿಕ ಜೀವನವೇ. ಇಲ್ಲಿನ ಕಾರ್ಪೊರೇಟ್ (Corporat) ಚೌಕಟ್ಟಿನಲ್ಲಿ ನೆರೆಹೊರೆಯರಿಗೂ ಪರಿಚಯವೇ ಇರದ ಸ್ಥಿತಿ. ಹಳ್ಳಿ, ಪಟ್ಟಣಗಳಲ್ಲಿ ನೆರೆಹೊರೆಯವರ ಜೊತೆ ಇರುವ ಮಧುರ ಬಾಂಧವ್ಯ, ಬೆಚ್ಚಗಿನ ಪ್ರೀತಿ ನಗರ ಪ್ರದೇಶಗಳಲ್ಲಿ ಕಾಣುವುದೇ ಕಷ್ಟ. ಒಂದೇ ಅಪಾರ್ಟ್​ಮೆಂಟ್​ನಲ್ಲಿ ನೆಲೆಸಿದ್ದರೂ ಒಬ್ಬರಿಗೊಬ್ಬರು ಅಪರಿಚಿತರು. ಕೊನೆಯ ಪಕ್ಷ ಒಂದು ಸ್ಮೈಲ್​ ಕೂಡ ಮಾಡದಷ್ಟು ದೂರವಿರುವ ಸ್ಥಿತಿ. ಇನ್ನು ಬಾಂಧವ್ಯ, ಸುಮಧುರ ಸಂಬಂಧ ದೂರದ ಮಾತೇ. ಆದರೆ ಇದಕ್ಕೆ ವಿರುದ್ಧವಾಗಿ  ನಿಕಟವಾಗಿ ಹೆಣೆದಿರುವ ಬೆಚ್ಚಗಿನ ಮತ್ತು ಸ್ನೇಹಪರ ಸ್ಥಳಗಳು ಇನ್ನೂ ನಗರ ಪ್ರದೇಶಗಳಲ್ಲಿ ಇವೆ ಎನ್ನುವುದನ್ನು ಮಹಿಳೆಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಅದೀಗ ಸಕತ್​ ವೈರಲ್​ ಆಗಿದೆ.  

ಗಾಯತ್ರಿ ಜಯರಾಮನ್ (Gayatri Jayaraman) ಅವರು ಟ್ವಿಟರ್‌ನಲ್ಲಿ ತಮಗಾಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ವಾಸವಾಗಿರುವುದು  ಮೈಸೂರಿನಲ್ಲಿ. ಮಹಾನಗರಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿಯೂ ಯಾಂತ್ರಿಕ ಜೀವನವನ್ನೇ ಕಾಣಬಹುದು. ಆದರೆ ಇದರ ನಡುವೆ ತಾವು  ವಾಸಿಸುವ ಪ್ರದೇಶವು ಎಲ್ಲವುಗಳಿಗಿಂತಲೂ ಭಿನ್ನ. ತಾವು ಇರುವ ಅಪಾರ್ಟ್​ಮೆಂಟ್​ನ ನೆರೆಹೊರೆಯವರು  ಕುಟುಂಬಕ್ಕಿಂತ ಕಡಿಮೆಯಿಲ್ಲ ಎಂಬುದನ್ನು ಗಾಯತ್ರಿಯ ಅವರು ವಿವರಿಸಿದ್ದಾರೆ. 

ಹಲ ವರ್ಷಗಳ ನಂತ್ರ ಖುದ್ದು ಮೇಕಪ್ ಮಾಡ್ಕೊಂಡ ಆಲಿಯಾ: ಹೊಟೇಲ್‌ನ ಕ್ರೀಂ ಚೆನ್ನಾಗಿಲ್ಲವೆಂದ ನಟಿ!
 
ಮೈಸೂರು (Mysore) ಎಷ್ಟು ಕರುಣಾಮಯಿ ಎಂಬುದನ್ನು ವಿವರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಬೈಕು ಬಾಡಿಗೆಗೆ ಬೇಕಾಗಿತ್ತು, ನಾನು ಸಂದೇಶ ಕಳುಹಿಸುವುದನ್ನು ಮುಗಿಸುವ ಮೊದಲು ಯಾರೋ ಒಬ್ಬರು ಬಂದು ಬೈಕ್​ ನೀಡಿದರು ಎಂದು ಬರೆದುಕೊಂಡಿದ್ದಾರೆ.  ಮನೆಯ ಬಾಗಿಲು ಸಂಪೂರ್ಣ ಮುಚ್ಚಿ ಎಲ್ಲಿಯಾದರೂ ಹೋಗಬೇಕೆಂದುಕೊಂಡಾಗ  ನನ್ನ ನಾಯಿ ಅಳಲು ಶುರು ಮಾಡುತ್ತದೆ. ಆದ್ದರಿಂದ ನಾನು ನನ್ನ ಮುಂಭಾಗದ ಬಾಗಿಲನ್ನು ತೆರೆದಿರುತ್ತೇನೆ. ನಮ್ಮ ನೆರೆಹೊರೆಯವರು ನಮ್ಮ ಮನೆಯ ಮೇಲೆ ಕಣ್ಣಿಡುವುದರಿಂದ ನಾನು ನೆಮ್ಮದಿಯಿಂದ ಇರಬಲ್ಲೆ. ಇಂಥ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ ಎಂದಿದ್ದಾರೆ. ಮೈಸೂರು ಒಂದು ಅದ್ಭುತ ನಗರ ಎಂದು ಬಣ್ಣಿಸಿದ್ದಾರೆ. ಇಡೀ ಮೈಸೂರೇ ಹೀಗಿದೆಯೋ ಅಥವಾ  ಕೇವಲ ನನ್ನ ರಸ್ತೆ ಮತ್ತು ನನ್ನ ನೆರೆಹೊರೆಯವರು ಇಷ್ಟು ಸ್ನೇಹಮಯಿಗಳೋ ಗೊತ್ತಿಲ್ಲ.  ಇಲ್ಲಿರುವುದು ತುಂಬಾ ತೃಪ್ತಿಕರವಾಗಿದೆ. ನಾನು ಅಂತಹ ಕೃತಜ್ಞತೆಯನ್ನು ಅನುಭವಿಸುತ್ತೇನೆ ಎಂದು ಮಹಿಳೆ ಬರೆದುಕೊಂಡಿದ್ದಾರೆ. 

ಗಾಯತ್ರಿ ಪೋಸ್ಟ್‌ನಲ್ಲಿ ಎರಡು ಚಿತ್ರಗಳನ್ನು ಸೇರಿಸಿದ್ದಾರೆ. ಅವುಗಳಲ್ಲಿ ಒಂದರಲ್ಲಿ ತಮ್ಮ  ನೆರೆಯವರು ಕಳುಹಿಸಿದ ಪಠ್ಯದ ಸ್ಕ್ರೀನ್‌ಶಾಟ್ (screenshot) ಹಾಗೂ  ಇನ್ನೊಂದು ಚಿತ್ರದಲ್ಲಿ  ನೆರೆಹೊರೆಯವರು ಮಾಡಿದ ರುಚಿಕರವಾದ ಇಡ್ಲಿಗಳ ತಟ್ಟೆಯನ್ನು ಪ್ರದರ್ಶಿಸಿದ್ದಾರೆ.  'ಕಳೆದ ರಾತ್ರಿ ಎಡಬದಿಯ ನೆರೆಮನೆಯವರು ನನಗೆ ಬಿಸಿಬೇಳೆ ಬಾತ್ (Bisibele bath)ಕಳುಹಿಸಿದರು, ಹಿಂದಿನ ದಿನ ಎದುರಿನ ನೆರೆಯವರು ನನಗೆ ಸಾಂಬಾರ್ ಕಳುಹಿಸಿದರು. ಬಲಗಡೆ ಇರುವವರು  ನನಗೆ ಸಸ್ಯಗಳು ಮತ್ತು ನಾಯಿಗಾಗಿ ಬಿಸ್ಕತ್ತುಗಳನ್ನು ಕಳುಹಿಸುತ್ತಾರೆ. ನಾನು ಮಾಡುವ ಯಾವುದನ್ನಾದರೂ ಅವರಿಗೆ ಸ್ವಲ್ಪಮಟ್ಟಿಗೆ ಕಳುಹಿಸುತ್ತೇನೆ. ಈ ವಿನಿಮಯವು ಬಹಳಷ್ಟು ಗೋಡೆಗಳ ನಡುವೆ ನಡೆಯುತ್ತದೆ. ಇಡೀ ಬೀದಿ ಈಗ ಕುಟುಂಬವಾಗಿದೆ. ಸರಿ, ನಾವೆಲ್ಲರೂ ನಮ್ಮ ಅಡುಗೆಮನೆಯಲ್ಲಿ ನಿರಂತರವಾಗಿ ಪರಸ್ಪರರ ಪ್ಲೇಟ್‌ಗಳು ಮತ್ತು ಕಪ್‌ಗಳನ್ನು ಹೊಂದಿದ್ದೇವೆ, ಎಂದು ಗಾಯತ್ರಿ ಹೇಳಿದ್ದಾರೆ.

Health Tips: ಬೊಜ್ಜಿರೋರಿಗೆ ಕೊಬ್ಬು ತಿನ್ನೋದನ್ನ ಕಂಟ್ರೋಲ್ ಮಾಡೋದೇಕೆ ಕಷ್ಟ?

ಪೋಸ್ಟ್ 152k ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು (Comments) ಗಳಿಸಿದೆ. ಬೆಂಗಳೂರಿನ ಕೆಲವು ಪ್ರದೇಶಗಳು ಇದೇ ರೀತಿಯ ಸೆಟಪ್ ಅನ್ನು ಹೊಂದಿವೆ ಮತ್ತು ಜನರು ತಮ್ಮ ಸ್ವಂತದಂತೆಯೇ ಪರಸ್ಪರ ಕಾಳಜಿ ವಹಿಸುತ್ತಾರೆ ಎಂಬುದನ್ನು ಸಹ ಜನರು ಉಲ್ಲೇಖಿಸಿದ್ದಾರೆ. ಇಂಥ ನೆರೆಹೊರೆಯವರನ್ನು ಪಡೆದವರು ಧನ್ಯರು ಎಂದು ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಹಲವರು ತಮ್ಮ ಕೆಟ್ಟ ನೆರೆಹೊರೆಯವರ ಬಗ್ಗೆ ಬರೆದುಕೊಂಡಿದ್ದಾರೆ. 

Latest Videos
Follow Us:
Download App:
  • android
  • ios